Dasara Festival – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಹೊಸ ಬಸ್ ನಿಲ್ದಾಣದ ಮುಂಭಾಗದ ಅಂಬೇಡ್ಕರ್ ವೃತ್ತದ ಬಳಿ ದಸರಾ ಗಣೇಶೋತ್ಸವ ಆಚರಣಾ ಸಮಿತಿಯಿಂದ 4ನೇ ಬಾರಿಗೆ ಅದ್ದೂರಿಯಾಗಿ ದಸರಾ ಗಣೇಶ ಹಾಗೂ ದುರ್ಗಾ ಮಾತೆಯ ವಿಗ್ರಹಗಳನ್ನು ಪ್ರತಿಷ್ಟಾಪಿಸಲಾಗಿದೆ. ಜೊತೆಗೆ ಪಟ್ಟಣದ 2ನೇ ವಾರ್ಡಿನಲ್ಲೂ ಸಹ 2ನೇ ಬಾರಿಗೆ ದಸರಾ ಗಣೇಶೋತ್ಸವದ ಅಂಗವಾಗಿ ಗಣೇಶ ಹಾಗೂ ದುರ್ಗಾ ಮಾತೆಯ ವಿಗ್ರಹಗಳನ್ನು ಪ್ರತಿಷ್ಟಾಪಿಸಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

Dasara Festival – 9 ದಿನಗಳ ವಿಶೇಷ ಪೂಜಾ ಕಾರ್ಯಕ್ರಮಗಳು
ದಸರಾ ಗಣೇಶೋತ್ಸವ ಆಚರಣಾ ಸಮಿತಿಯ ಅಧ್ಯಕ್ಷರಾದ ಬಿ. ಮಂಜುನಾಥ್ ಅವರು ಮಾತನಾಡಿ, “ಎಲ್ಲರ ಸಹಕಾರದಿಂದ ಈ ಬಾರಿಯೂ ದಸರಾ ಗಣೇಶೋತ್ಸವವನ್ನು ಆಚರಿಸುತ್ತಿದ್ದೇವೆ. ಮುಂದಿನ 9 ದಿನಗಳ ಕಾಲ ಗಣೇಶ ಮತ್ತು ದುರ್ಗಾ ಮಾತೆಗೆ ವಿಶೇಷ ಪೂಜೆಗಳು ಮತ್ತು ಪ್ರತಿದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ” ಎಂದು ತಿಳಿಸಿದರು.
ಅಲ್ಲದೆ, ಉತ್ಸವದ ಕೊನೆಯ ದಿನದಂದು ತಮಟೆ ವಾದ್ಯಗಳೊಂದಿಗೆ ಗಣೇಶ ಮತ್ತು ದುರ್ಗಾ ಮಾತೆಯ ಮೆರವಣಿಗೆಯನ್ನು ಪಟ್ಟಣದ ಮುಖ್ಯ ರಸ್ತೆಯಲ್ಲಿ ವಿಜೃಂಭಣೆಯಿಂದ ನಡೆಸಲಾಗುವುದು. ಈ ಮೆರವಣಿಗೆಯಲ್ಲಿ ಗಣಪತಿ ಲಾಡು ಹರಾಜು ಕೂಡ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಮಂಜುನಾಥ್ ಅವರು ಮನವಿ ಮಾಡಿದ್ದಾರೆ. Read this also : ಗ್ರಾಹಕರಿಗೆ ಸಂತಸ, ಕೆಲವು ವಸ್ತುಗಳ ಬೆಲೆ ಹೆಚ್ಚಳ, ಇಲ್ಲಿದೆ ಸಂಪೂರ್ಣ ಮಾಹಿತಿ…!
Dasara Festival – ಸಾರ್ವಜನಿಕರ ಸಹಕಾರದೊಂದಿಗೆ ಹಬ್ಬದ ಆಚರಣೆ
ಈ ಸಂದರ್ಭದಲ್ಲಿ ತಹಶೀಲ್ದಾರ್ ಸಿಗ್ಬತ್ ವುಲ್ಲಾ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಎ. ವಿಕಾಸ್ ಹಾಗೂ ವಿವಿಧ ಸಂಘಟನೆಗಳ ಮತ್ತು ಪಟ್ಟಣದ ಪ್ರಮುಖ ಮುಖಂಡರು, ನಿವಾಸಿಗಳು ಸೇರಿದಂತೆ ಹಲವರು ಹಾಜರಿದ್ದರು. ಅವರೆಲ್ಲರೂ ಮಹಾಮಂಗಳಾರತಿ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳಲ್ಲಿ ಭಕ್ತಿಭಾವದಿಂದ ಭಾಗವಹಿಸಿದರು.

