Vidurashwatha Massacre Drama – ಇಂದಿನ ಕಾಲವನ್ನು ಸೋಷಿಯಲ್ ಮಿಡಿಯಾ ಕಾಲವೆಂದೇ ಹೇಳಬೇಕಾಗುತ್ತಿದೆ. ಸೋಷಿಯಲ್ ಮಿಡಿಯಾ ಗುಂಗಿನಲ್ಲಿ ವಿದ್ಯಾರ್ಥಿಗಳು ಕಲೆ, ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ. ಕಲೆ, ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತಹ ನಾಟಕ ಕಲೆಗಳನ್ನು ನಾವೆಲ್ಲರೂ ಪ್ರೋತ್ಸಾಹಿಸಬೇಕೆಂದು ಗುಡಿಬಂಡೆ ತಾಲೂಕು ಪಂಚಾಯತಿ ಇಒ ನಾಗಮಣಿ ಸಲಹೆ ನೀಡಿದರು.

Vidurashwatha Massacre Drama – ನಾಟಕ ಮತ್ತು ಅದರ ಮಹತ್ವ
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಚಿಂತಾಮಣಿ ತಾಲ್ಲೂಕು ಮಿಟ್ಟಹಳ್ಳಿ ನಿಸರ್ಗ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಕಲಾ ರಂಗ ಸಂಭ್ರಮ ಕಾರ್ಯಕ್ರಮದ ವಿದುರಾಶ್ವತ್ಥ ಹತ್ಯಾಕಾಂಡ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೆಲವು ವಿದ್ಯಾರ್ಥಿಗಳಿಗೆ ಡಾಕ್ಟರ್ ಆಗಬೇಕು, ಇಂಜಿಯರ್ ಆಗಬೇಕು, ಸ್ವಾತಂತ್ಯ ಹೋರಾಟಗಾರಾಗ ಬೇಕು, ಸೈನಿಕನಾಗಬೇಕೆ ಈತರ ವಿವಿಧ ಆಲೋಚೆಗಳು ಇರುತ್ತವೆ ಆದರೆ ಕೆಲವರಿಗೆ ಡಾಕ್ಟರ್ ಆಗಿರುವುದಿಲ್ಲ. ನಾಟಕದಲ್ಲಿ ಡಾಕ್ಟರ್ ಹಾಗೂ ವಿವಿಧ ಪಾತ್ರಗಳಲ್ಲಿ ತೊಡಗಿಸಿಕೊಂಡು ತಮ್ಮ ಪ್ರತಿಭೆಯನ್ನು ತೋರಿಸುವ ಅವಕಾಶ ನಾಟಕ ಕಲ್ಪಿಸಿಕೊಡುತ್ತದೆ.
ಈಗಿನ ಕಾಲದ ವಿದ್ಯಾರ್ಥಿಗಳು ವಿವಿಧ ಸೋಷಿಯಲ್ ಮೀಡಿಯಾದಲ್ಲಿ ತೊಡಗಿಸಿಕೊಂಡು ಕಲೆ ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ. ಆದರೆ ಈ ವಿದ್ಯಾರ್ಥಿಗಳು ನಾಟಕವನ್ನು ಕಲೆತು ಪ್ರದರ್ಶನ ಮಾಡುರ್ತಿರುವುದು ಶ್ಲಾಘನೀಯವಾದುದು. ಈ ನಿಟ್ಟಿನಲ್ಲಿ ಇತರೆ ಕಾಲೇಜಿನ ವಿದ್ಯಾರ್ಥಿಗಳು ಓದಿನ ಜೊತೆಗೆ ವಿವಿಧ ಕ್ರೀಡೆ, ಕಲೆಗಳಲ್ಲಿ ಭಾಗವಹಿಸಬೇಕೆಂದು ಸಲಹೆ ನೀಡಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ವಿವಿಧ ರೀತಿಯ 40 ಕನ್ನಡ ಪುಸ್ತಕಗಳನ್ನು ನೀಡುವ ಭರವಸೆ ನೀಡಿದರು.

Vidurashwatha Massacre Drama – ವಿದುರಾಶ್ವತ್ಥ ಹತ್ಯಾಕಾಂಡ – ಒಂದು ಮರುಚಿಂತನೆ
ಬಳಿಕ ತಹಶೀಲ್ದಾರ್ ಸಿಗ್ಬತುಲ್ಲ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಮುಂದೆ ಬರಬೇಕೆಂದರೆ ಚೆನ್ನಾಗಿ ಓದ ಬೇಕು. ನಾವು ಬಹಳ ಕಷ್ಟದಿಂದ ಬಂದಿದ್ದೇವೆ. ನಿಮಗೆ ಈಗ ಸರ್ಕಾರ ಎಲ್ಲಾರೀತಿಯ ಸೌಲಭ್ಯಗಳನ್ನು ನೀಡಿದ್ದು ಅವುಗಳನ್ನು ಬಳಸಿಕೊಂಡು ಕಾಲೇಜಿಗೆ, ತಂದೆ ತಾಯಿಗೆ, ಗುರುಗಳಿಗೆ ಒಳ್ಳೆಯ ಹೆಸರನ್ನು ತರಬೇಕು. ಕರ್ನಾಟಕದ ಜಲಿಯನ್ ವಾಲಾಭಾಗ್ ಎಂದೇ ಹೆಸರು ಪಡೆದಿರುವ ಗೌರಿಬಿದನೂರು ತಾಲ್ಲೂಕಿನ ವಿದುರಾಶ್ವತ್ಥದಲ್ಲಿ ನಡೆದಿತ್ತು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಆಗಿನ ಕೋಲಾರ ಜಿಲ್ಲೆಯ ಹಲವಾರು ಸ್ವಾತಂತ್ರ ಹೋರಾಟಗಾರರು ತಮ್ಮ ಪ್ರಾಣವನ್ನು ತ್ಯಾಗಮಾಡಿದ್ದಾರೆ. ಈ ಎಲ್ಲಾ ಸನ್ನಿವೇಶಗಳನ್ನು ವಿದ್ಯಾರ್ಥಿಗಳು ನಾಟಕದ ಮೂಲಕ ಪ್ರದರ್ಶನ ಮಾಡಲಿದ್ದಾರೆ. ಎಲ್ಲರೂ ವೀಕ್ಷಣೆ ಮಾಡಿ ಎಂದರು. Read this also : ಏಕಲವ್ಯ ಶಾಲೆಗಳಲ್ಲಿ 7,267 ಹುದ್ದೆಗಳಿಗೆ ಅರ್ಜಿ ಆಹ್ವಾನ: ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್..!
Vidurashwatha Massacre Drama – ಸಂಭ್ರಮದ ಹಿಂದಿನ ತಂಡ
ಚಿಕ್ಕಬಳ್ಳಾಪುರದ ಸಕಲ ರಂಗಹೆಜ್ಜೆ ಟ್ರಸ್ಟ್ ಮತ್ತು ವಿಶ್ವ ವಿವೇಕ ಪಿಯು ಕಾಲೇಜಿನ ವಿದ್ಯಾರ್ಥಿಗಳು ಈ ಅದ್ಭುತ ‘ವಿದುರಾಶ್ವತ್ಥ ಹತ್ಯಾಕಾಂಡ’ ನಾಟಕವನ್ನು ಪ್ರಸ್ತುತಪಡಿಸಿದರು. ದಿಲೀಪ್‌ಕುಮಾರ್. ಆರ್ ಅವರ ನಿರ್ದೇಶನ ಮತ್ತು ಡಾ. ಟಿ. ಲಕ್ಷ್ಮೀನಾರಾಯಣರವರ ರಚನೆಯಲ್ಲಿ ಮೂಡಿಬಂದ ಈ ನಾಟಕವು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು. ಸಂಗೀತ ಇನ್ಸಾಫ್ ಹೊಸಪೇಟೆ, ವಸ್ತ್ರವಿನ್ಯಾಸ ಕವಿತಾ (ಮೈಸೂರು) ಮತ್ತು ಚಿತ್ರವಿನ್ಯಾಸ ಸತೀಶ್. ಸಿ. ಎಲ್ ಅವರು ನಾಟಕಕ್ಕೆ ಜೀವ ತುಂಬಿದರು.

ಭಾಗವಹಿಸಿದ ಗಣ್ಯರು
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ಮಂಜುನಾಥ, ಸರ್ಕಾರಿ ಪ್ರಥಮದರ್ಜೆ ಕಾಲೇಜು ಪ್ರಾಂಶುಪಾಲ ಡಾ. ಅಪ್ಜಲ್ ಬಿಜಲಿ, ಹಂಪಸಂದ್ರ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಸದಸ್ಯ ನಾರಾಯಣಸ್ವಾಮಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ನಯಾಜ್ ಅಹ್ಮದ್, ನಿಸರ್ಗ ಟ್ರಸ್ಟ್ ಅಧ್ಯಕ್ಷೆ ಎಂ.ಸಿ. ಜ್ಯೋತಿ, ಸಕಲ ರಂಗಹೆಜ್ಜೆ ಟ್ರಸ್ಟ್ ದಿಲೀಪ್ ಕುಮಾರ್, ಅರವಿಂದ ಪಿಯು ಕಾಲೇಜು ರಾಜಪ್ಪ, ಕಸಾಪ, ಗೌರವ ಕಾರ್ಯದರ್ಶಿಗಳಾದ ವಿ.ಶ್ರೀರಾಮಪ್ಪ, ವಾಹಿನಿ ಸುರೇಶ್, ಗುಂಪುಮರದ ಆನಂದ್, ಶ್ರೀನಿವಾಸ್ ಗಾಂಧಿ, ನಾರಾಯಣಸ್ವಾಮಿ, ಯು.ರಾಮಾಂಜಿನೆಯ್ಯ,ಕದಿರಪ್ಪ, ಅಂಬಿಕಾ ಸುದರ್ಶನ್ ಸೇರಿದಂತೆ ಹಲವರು ಇದ್ದರು.
