Sunday, October 26, 2025
HomeNationalCrime : ಹೈದರಾಬಾದ್ ನಲ್ಲಿ ನಡೆದ ಘಟನೆ, ನಿದ್ದೆಯಲ್ಲಿದ್ದ ಪತಿಯ ಕತ್ತನ್ನು ಕತ್ತರಿಸಿ ಕೊಲೆ ಮಾಡಿದ...

Crime : ಹೈದರಾಬಾದ್ ನಲ್ಲಿ ನಡೆದ ಘಟನೆ, ನಿದ್ದೆಯಲ್ಲಿದ್ದ ಪತಿಯ ಕತ್ತನ್ನು ಕತ್ತರಿಸಿ ಕೊಲೆ ಮಾಡಿದ ಪತ್ನಿ, ಕಾರಣ ಏನು ಗೊತ್ತಾ?

Crime – ಹೈದರಾಬಾದ್‌ನ ಹೊರವಲಯದಲ್ಲಿರುವ ಕೋಕಾಪೇಟ್‌ನಲ್ಲಿ ಒಂದು ದಾರುಣ ಘಟನೆ ಬೆಳಕಿಗೆ ಬಂದಿದೆ. ಗಂಡ-ಹೆಂಡತಿಯರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಜಗಳದ ನಂತರ ಗಂಡ ನಿದ್ರೆಗೆ ಜಾರಿದಾಗ, ಹೆಂಡತಿ ತರಕಾರಿ ಕತ್ತರಿಸುವ ಚಾಕುವಿನಿಂದ ಆತನ ಕತ್ತು ಸೀಳಿ ಕೊಲೆ ಮಾಡಿದ್ದಾಳೆ. ತೀವ್ರವಾಗಿ ಗಾಯಗೊಂಡಿದ್ದ ಗಂಡ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ನಾರ್ಸಿಂಗಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Tragic Kokapet murder in Hyderabad where wife killed husband after quarrel - Crime News

Crime – ಅಸ್ಸಾಂನಿಂದ ಬಂದಿದ್ದ ದಂಪತಿಗಳು

ಅಸ್ಸಾಂನಿಂದ ಹೈದರಾಬಾದ್‌ ಗೆ ವಲಸೆ ಬಂದಿದ್ದ ಬರ್ಖ್ ಬೋರಾ ಮತ್ತು ಕೃಷ್ಣ ಜ್ಯೋತಿ ಬೋರಾ ದಂಪತಿ, ರಂಗಾರೆಡ್ಡಿ ಜಿಲ್ಲೆಯ ನಾರ್ಸಿಂಗಿ ಬಳಿ ಇರುವ ಕೋಕಾಪೇಟ್‌ನಲ್ಲಿ ನಿರ್ಮಾಣ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಇವರ ಮಧ್ಯೆ ಸಣ್ಣಪುಟ್ಟ ವಿಷಯಗಳಿಗೂ ಆಗಾಗ ಜಗಳವಾಗುತ್ತಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.

Crime – ಜಗಳವೇ ಕೊಲೆಗೆ ಕಾರಣ?

ಸದ್ಯಕ್ಕೆ ಜಗಳದ ನಿಖರ ಕಾರಣ ತಿಳಿದುಬಂದಿಲ್ಲ. ಸೆಪ್ಟೆಂಬರ್ 18ರ ರಾತ್ರಿ ದಂಪತಿಗಳ ನಡುವೆ ಮತ್ತೆ ದೊಡ್ಡ ಜಗಳ ನಡೆದಿದೆ. ಜಗಳ ಮುಗಿದ ನಂತರ ಬರ್ಖ್ ನಿದ್ರೆಗೆ ಜಾರಿದ್ದಾನೆ. ಅದೇ ಸಮಯವನ್ನು ಉಪಯೋಗಿಸಿಕೊಂಡ ಜ್ಯೋತಿ, ತರಕಾರಿ ಕತ್ತರಿಸುವ ಚಾಕು ತೆಗೆದುಕೊಂಡು ಆತನ ಕತ್ತನ್ನು ಸೀಳಿದ್ದಾಳೆ. Read this also : ತಾಯಿ ಎಂಬ ಪದಕ್ಕೆ ಕಳಂಕ, ಪ್ರಿಯಕರನಿಗಾಗಿ ಹೆತ್ತ ಮಗುವನ್ನೆ ಕೊಂದ ಪಾಪಿ ತಾಯಿ…!

Tragic Kokapet murder in Hyderabad where wife killed husband after quarrel - Crime News

ಗಂಡನ ಆರ್ತನಾದ ಕೇಳಿದ ನೆರೆಹೊರೆಯವರು ತಕ್ಷಣ ಮನೆಗೆ ಧಾವಿಸಿದ್ದಾರೆ. ಆಗ ಬರ್ಖ್ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಕೂಡಲೇ ಆತನನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ, ತೀವ್ರ ರಕ್ತಸ್ರಾವದಿಂದಾಗಿ ಬರ್ಖ್ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾನೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ ನಂತರ, ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಜ್ಯೋತಿಯನ್ನು ವಶಕ್ಕೆ ಪಡೆದಿದ್ದು, ಬರ್ಖ್ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular