Bear Attack – ಚಿಕ್ಕಬಳ್ಳಾಪುರ ತಾಲ್ಲೂಕಿನ ಗುರುಕುಲ ನಾಗೇನಹಳ್ಳಿ ಸಮೀಪದಲ್ಲಿ ನಡೆದ ಕರಡಿ ದಾಳಿಯಲ್ಲಿ ಇಬ್ಬರು ರೈತರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ. ಬೆಳಗಿನ ಜಾವ ಟೊಮ್ಯಾಟೊ ತೋಟಕ್ಕೆ ಔಷಧಿ ಸಿಂಪಡಿಸಲು ಹೋದಾಗ ಈ ಘಟನೆ ನಡೆದಿದೆ.

Bear Attack – ರೈತರು ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ನಡೆದ ಘಟನೆ
ಗಾಯಗೊಂಡವರನ್ನು ಬಾಲಾಕುಂಠಹಳ್ಳಿ ಗ್ರಾಮದ ನಿವಾಸಿಗಳಾದ ನರಸಿಂಹಯ್ಯ ಮತ್ತು ಕೃಷ್ಣಪ್ಪ ಎಂದು ಗುರುತಿಸಲಾಗಿದೆ. ಕರಡಿಯು ಏಕಾಏಕಿ ತೋಟಕ್ಕೆ ನುಗ್ಗಿ ರೈತರ ಮೇಲೆ ದಾಳಿ ಮಾಡಿದೆ. ಗಾಯಾಳು ನರಸಿಂಹಯ್ಯ ಅವರ ಕಣ್ಣು, ಕಿವಿ ಮತ್ತು ತಲೆಗೆ ತೀವ್ರ ಗಾಯಗಳಾಗಿವೆ. “ನಾನು ನಮ್ಮ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಕರಡಿ ನನ್ನ ಮೇಲೆ ದಾಳಿ ಮಾಡಿತು. ಜೋರಾಗಿ ಕೂಗಿದಾಗ ಅದು ಓಡಿಹೋಯಿತು. ಅಕ್ಕಪಕ್ಕದ ರೈತರು ಬಂದು ನನ್ನನ್ನು ಆಸ್ಪತ್ರೆಗೆ ಸೇರಿಸಿದರು,” ಎಂದು ಗಾಯಾಳು ಕೃಷ್ಣಪ್ಪ ಘಟನೆಯ ಬಗ್ಗೆ ವಿವರಿಸಿದ್ದಾರೆ.
Read this also : ಗುಡಿಬಂಡೆಯಲ್ಲಿ ಚಿರತೆ ದಾಳಿ: ರೈತ ಅದೃಷ್ಟವಶಾತ್ ಪಾರು, ಗ್ರಾಮಸ್ಥರಿಂದ ಚಿರತೆ ಸೆರೆ!
Bear Attack – ಅರಣ್ಯಾಧಿಕಾರಿಗಳ ಭೇಟಿ
ಘಟನೆಯ ನಂತರ, ತೀವ್ರವಾಗಿ ಗಾಯಗೊಂಡ ಇಬ್ಬರನ್ನೂ ಕೂಡಲೇ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುದ್ದಿ ತಿಳಿದ ಅರಣ್ಯಾಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯವನ್ನು ವಿಚಾರಿಸಿದ್ದಾರೆ ಮತ್ತು ಘಟನೆಯ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ. ಈ ಘಟನೆಯಿಂದಾಗಿ ಸ್ಥಳೀಯ ರೈತರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.

