Crime – ರಾಜಸ್ಥಾನದ ಆಲ್ವಾರ್‌ನಲ್ಲಿ (Alwar) ನಡೆದ ಈ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಕೆಲವು ದಿನಗಳ ಹಿಂದೆ ನೀಲಿ ಡ್ರಮ್‌ನಲ್ಲಿ ಕೊಳೆತ ಸ್ಥಿತಿಯಲ್ಲಿ ಹಂಸರಾಜ್ ಎಂಬ ವ್ಯಕ್ತಿಯ ಶವ ಪತ್ತೆಯಾಗಿತ್ತು. ಹಂಸರಾಜ್ ಕೊಲೆ ಪ್ರಕರಣದ ತನಿಖೆ ಮುಂದುವರೆದಂತೆ, ಪೊಲೀಸರಿಗೆ ದಿಗ್ಭ್ರಮೆಗೊಳಿಸುವ ಸತ್ಯ ಬಯಲಾಗಿದೆ. ಕೊಲೆಗೆ ಸಾಕ್ಷಿಯಾದವರು ಬೇರೆ ಯಾರೂ ಅಲ್ಲ, ಹಂಸರಾಜ್‌ನ 8 ವರ್ಷದ ಪುತ್ರ ಹರ್ಷಲ್!

Crime – ತನಿಖೆಗೆ ಹೊಸ ತಿರುವು: ಎಂಟು ವರ್ಷದ ಮಗನ ಸಾಕ್ಷಿ ನುಡಿ
ಹರ್ಷಲ್‌ನ ಮಾತುಗಳು ಪೊಲೀಸರಿಗೆ ಪ್ರಕರಣದ ಗೋಜಲು ಬಿಡಿಸಲು ಸಹಾಯ ಮಾಡಿತು. ತಂದೆ ಮತ್ತು ತಾಯಿ ಜೊತೆಯಲ್ಲಿ ಕುಡಿಯುತ್ತಿದ್ದರು. ಸ್ವಲ್ಪ ಸಮಯದ ನಂತರ ಇಬ್ಬರ ನಡುವೆ ಜಗಳ ಪ್ರಾರಂಭವಾಯಿತು. ಈ ಜಗಳಕ್ಕೆ ಮಧ್ಯಪ್ರವೇಶಿಸಿದ್ದು, ಹಂಸರಾಜ್ ಪತ್ನಿಯ ಪ್ರಿಯಕರ. ಇದೇ ವೇಳೆ ಹಂಸರಾಜ್, “ನೀನು ಅವಳನ್ನು ರಕ್ಷಿಸಿದರೆ, ನಿನ್ನನ್ನೂ ಕೊಲ್ಲುತ್ತೇನೆ,” ಎಂದು ಬೆದರಿಕೆ ಹಾಕಿದಾಗ, ಪ್ರಿಯಕರ ಕೋಪಗೊಂಡಿದ್ದಾರೆ.
Crime – ಕೊಲೆಯ ಹಿಂದಿನ ಘಟನೆ
ನಿದ್ರೆಯಲ್ಲಿದ್ದ ಹರ್ಷಲ್ ತಡರಾತ್ರಿ ಎಚ್ಚರಗೊಂಡಾಗ, ತಂದೆ ಹಾಸಿಗೆಯ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದನ್ನು ನೋಡಿದನು. ಮತ್ತೆ ನಿದ್ದೆಗೆ ಜಾರಿದ ಅವನು ಬೆಳಿಗ್ಗೆ ಎದ್ದಾಗ ತಾಯಿ ಹಾಗೂ ಚಿಕ್ಕಪ್ಪ (ಪ್ರಿಯಕರ) ಇಬ್ಬರೂ ಸೇರಿಕೊಂಡು ತಂದೆಯ ದೇಹವನ್ನು ಡ್ರಮ್‌ಗೆ ಹಾಕುತ್ತಿರುವುದನ್ನು ನೋಡಿದನು. ತಾಯಿ ಬಳಿ ಕಾರಣ ಕೇಳಿದಾಗ, “ನಿನ್ನ ಅಪ್ಪ ಸತ್ತು ಹೋಗಿದ್ದಾರೆ,” ಎಂದು ಸಲೀಸಾಗಿ ಹೇಳಿದ್ದಳು! ತದನಂತರ ಭಯದಿಂದ ಹಂಸರಾಜ್‌ನ ಹೆಣವನ್ನು ಇಟ್ಟಿಗೆ ಗೂಡು ಒಂದಕ್ಕೆ ಕೊಂಡೊಯ್ದು ಬಚ್ಚಿಟ್ಟಿದ್ದರು.
Read this also : ಬೆಳಗಾವಿಯಲ್ಲಿ ಗೆಳತಿಯನ್ನು ಕೊಂದು ಆತ್ಮಹತ್ಯೆಗೆ ಶರಣಾದ ಯುವಕ, ಅಕ್ರಮ ಸಂಬಂಧಕ್ಕೆ ಒಪ್ಪದ ಕಾರಣ ನಡೆದ ಘಟನೆ…!

Crime – ಪತ್ನಿ ಹಾಗೂ ಪ್ರಿಯಕರನ ಬಂಧನ
ಶವ ಸಿಕ್ಕ ನಂತರ ಇಟ್ಟಿಗೆ ಗೂಡಿನ ಮಾಲೀಕ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಪೊಲೀಸರು ತನಿಖೆ ಮುಂದುವರಿಸಿದಾಗ, ಹರ್ಷಲ್ ನಡೆದಿದ್ದೆಲ್ಲವನ್ನೂ ವಿವರಿಸಿದನು. ಪೊಲೀಸರು ಹಂಸರಾಜ್ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಿ ವಿಚಾರಣೆ ಮಾಡಿದಾಗ, ದಿಂಬಿನಿಂದ ಉಸಿರುಗಟ್ಟಿಸಿ ಕೊಂದಿರುವುದಾಗಿ ಒಪ್ಪಿಕೊಂಡಿದ್ದಾರೆ. ಅಂತಿಮವಾಗಿ ಇಬ್ಬರನ್ನು ಬಂಧಿಸಲಾಗಿದೆ.
