ಆನ್‌ಲೈನ್ ವಂಚನೆ (online fraud) ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಎಷ್ಟೇ ಜಾಗೃತಿ ಮೂಡಿಸಿದರೂ, ವಂಚಕರು ಹೊಸ ಹೊಸ ಮಾರ್ಗಗಳ ಮೂಲಕ ಅಮಾಯಕರಿಗೆ ಗಾಳ ಹಾಕುತ್ತಿದ್ದಾರೆ. ಇದೀಗ ಮುಂಬೈನ 71 ವರ್ಷದ ವೃದ್ಧೆಯೊಬ್ಬರು ಕೇವಲ ಆನ್‌ಲೈನ್‌ನಲ್ಲಿ ಹಾಲು ಆರ್ಡರ್ ಮಾಡಲು ಹೋಗಿ ಬರೋಬ್ಬರಿ 18.5 ಲಕ್ಷ ರೂ. ಕಳೆದುಕೊಂಡಿದ್ದಾರೆ. ಈ ಘಟನೆ ಸೈಬರ್ ಅಪರಾಧ (cyber crime) ಎಷ್ಟು ಅಪಾಯಕಾರಿ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
Online Fraud – ಘಟನೆ ವಿವರ
ಮುಂಬೈನ ವಡಾಲಾ ನಿವಾಸಿಯಾಗಿರುವ ಈ ಮಹಿಳೆ, ಆಗಸ್ಟ್ ಆರಂಭದಲ್ಲಿ ಆನ್‌ಲೈನ್ ಡೆಲಿವರಿ ಅಪ್ಲಿಕೇಶನ್ ಮೂಲಕ ಹಾಲು ಆರ್ಡರ್ ಮಾಡಲು ಪ್ರಯತ್ನಿಸಿದ್ದರು. ಈ ಸಂದರ್ಭದಲ್ಲಿ, ದೀಪಕ್ ಎಂಬ ವ್ಯಕ್ತಿ ತಾನು ಹಾಲು ಕಂಪನಿಯ ಉದ್ಯೋಗಿ ಎಂದು ಪರಿಚಯಿಸಿಕೊಂಡು ಅವರಿಗೆ ಕರೆ ಮಾಡಿದ್ದಾನೆ. ವೃದ್ಧೆಯ ಆನ್‌ಲೈನ್ ಹುಡುಕಾಟದ ವಿವರಗಳನ್ನು ತಿಳಿದಿದ್ದ ಈ ವಂಚಕ, ಅವರಿಗೆ ಹಾಲು ಸರಬರಾಜು ಮಾಡುವುದಾಗಿ ನಂಬಿಸಿದ್ದಾನೆ. Read this also : WhatsApp ಬಳಕೆದಾರರೇ ಎಚ್ಚರ! SBI ನಿಂದ ಮಹತ್ವದ ಸೂಚನೆ: ಈ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ…!
ವೃದ್ಧೆಯ ವಿಶ್ವಾಸ ಗಳಿಸಲು, ವಂಚಕ ದೀರ್ಘ ಸಮಯದವರೆಗೆ ಫೋನ್‌ನಲ್ಲಿ ಮಾತನಾಡಿದ್ದಾನೆ. ನಂತರ, ಹಾಲು ಆರ್ಡರ್ ಮಾಡಲು ಅನುಕೂಲವಾಗುವಂತೆ ಒಂದು ಲಿಂಕ್ ಕಳುಹಿಸಿದ್ದಾನೆ. (online fraud) ಆ ಲಿಂಕ್ ಕ್ಲಿಕ್ ಮಾಡಿ, ಅಲ್ಲಿ ಕೇಳಲಾದ ವಿವರಗಳನ್ನು ಭರ್ತಿ ಮಾಡಿದರೆ ಹಾಲು ಮನೆಗೆ ತಲುಪುತ್ತದೆ ಎಂದು ಹೇಳಿದ್ದಾನೆ.
Online Fraud – ಹಣ ಕಡಿತವಾದದ್ದು ಹೇಗೆ?
ತನ್ನ ಕೆಲಸ ಸುಲಭವಾಗುತ್ತದೆ ಎಂದು ಭಾವಿಸಿದ ವೃದ್ಧೆ, ಯಾವುದೇ ಅನುಮಾನವಿಲ್ಲದೆ ಲಿಂಕ್ ತೆರೆದು ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿದ್ದಾರೆ. ಆದರೆ, ಹಾಲು ಬರಲಿಲ್ಲ. ಬದಲಾಗಿ, ಅವರ ಬ್ಯಾಂಕ್ ಖಾತೆಗಳಿಂದ ಹಣ ವಿತ್‌ಡ್ರಾ ಆಗಿರುವ ಬಗ್ಗೆ ಸಂದೇಶಗಳು ಬಂದವು. ವಿವಿಧ ಬ್ಯಾಂಕ್ ಖಾತೆಗಳಿಂದ ಒಟ್ಟು 18.5 ಲಕ್ಷ ರೂ. ಕಡಿತವಾಗಿರುವುದು ಬೆಳಕಿಗೆ ಬಂದಿದೆ. ವಂಚನೆಗೊಳಗಾಗಿರುವುದನ್ನು ಅರಿತ ವೃದ್ಧೆ ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆನ್‌ಲೈನ್‌ನಲ್ಲಿ ಯಾವುದೇ ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡುವುದು ಅಥವಾ ವೈಯಕ್ತಿಕ ಬ್ಯಾಂಕಿಂಗ್ ವಿವರಗಳನ್ನು ಹಂಚಿಕೊಳ್ಳುವುದು ಅಪಾಯಕಾರಿ ಎಂದು ಸೈಬರ್ ತಜ್ಞರು ಎಚ್ಚರಿಸಿದ್ದಾರೆ.