King Cobra – ಹಾವು ಅಂದರೆ ಯಾರಿಗೆ ತಾನೆ ಭಯವಿಲ್ಲ ಹೇಳಿ. ಒಂದು ಸಣ್ಣ ಹಾವನ್ನು ಕಂಡರೂ ಬಹುತೇಕರು ದಿಗಿಲುಗೊಂಡು ಓಡಿ ಹೋಗುತ್ತಾರೆ. ಆದರೆ ಇಲ್ಲೊಬ್ಬ ಧೈರ್ಯವಂತ ಯುವಕ ಜನವಸತಿ ಪ್ರದೇಶಕ್ಕೆ ಬಂದಿದ್ದ ದೈತ್ಯ ಗಾತ್ರದ ಕಾಳಿಂಗ ಸರ್ಪವನ್ನು ಕೇವಲ ಒಂದು ಪೈಪ್ ಬಳಸಿ ಹಿಡಿದು ರಕ್ಷಿಸಿದ್ದಾನೆ. ಈ ಸಾಹಸದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಯುವಕನ ಧೈರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
King Cobra – ಪೈಪ್ ಬಳಸಿ ಕಾಳಿಂಗ ಸರ್ಪ ಹಿಡಿದ ಯುವಕ
ವೃತ್ತಿಯಲ್ಲಿ ಉರಗ ರಕ್ಷಕನಾದ ಅರ್ಷದ್ ಖಾನ್ ಎಂಬ ಯುವಕ ಈ ಸಾಹಸಕ್ಕೆ ಮುಂದಾಗಿದ್ದಾನೆ. ಜನವಸತಿ ಪ್ರದೇಶದಲ್ಲಿ ಕಂಡುಬಂದ ಬೃಹತ್ ಕಾಳಿಂಗ ಸರ್ಪವನ್ನು ಹಿಡಿದು ಸುರಕ್ಷಿತ ಪ್ರದೇಶಕ್ಕೆ ಬಿಡುವ ಕೆಲಸವನ್ನು ಆತ ಯಶಸ್ವಿಯಾಗಿ ನಿರ್ವಹಿಸಿದ್ದಾನೆ. ಈ ಬೃಹತ್ ಹಾವು ಹೇಗೆ ಹಿಡಿಯುವುದು ಎಂದು ಯೋಚಿಸಿದ ಅರ್ಷದ್, ಚಾಣಾಕ್ಷತನದಿಂದ ಒಂದು ಪೈಪ್‌ನ ಸಹಾಯದಿಂದ ಹಾವನ್ನು ಹಿಡಿದು ಚೀಲದಲ್ಲಿ ಹಾಕಿದ್ದಾನೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹವಾ ಎಬ್ಬಿಸಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here
King Cobra – ವೈರಲ್ ವಿಡಿಯೋದ ವಿವರಗಳು
ಈ ವಿಡಿಯೋವನ್ನು ‘Wild_whisperer’ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಅರ್ಷದ್ ಅವರು ಹಾವನ್ನು ಹಿಡಿಯುತ್ತಿರುವ ದೃಶ್ಯವಿದೆ. ಪೈಪ್ ಅನ್ನು ಹಾವಿನ ಮೇಲೆ ಇಟ್ಟು ಅದನ್ನು ನಿಯಂತ್ರಿಸಿ, ಹಾವನ್ನು ಗೋಣಿ ಚೀಲದೊಳಗೆ ಸೇರಿಸಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ನಂತರ, ಹಾವನ್ನು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಟ್ಟು ಬಂದಿದ್ದಾರೆ. Read this also : ಹಾವನ್ನು ಆಟಿಕೆ ಎಂದು ಭಾವಿಸಿ ಜಗಿದ 9 ತಿಂಗಳ ಮಗು: ಚತ್ತೀಸ್‌ಗಢದಲ್ಲಿ ಅಚ್ಚರಿ ಘಟನೆ
ಮಿಲಿಯನ್ ಗಟ್ಟಲೇ ವ್ಯೂವ್ಸ್ ಕಂಡ ವಿಡಿಯೋ
ಆಗಸ್ಟ್ 3 ರಂದು ಹಂಚಿಕೊಂಡ ಈ ವಿಡಿಯೋ 93.1 ಮಿಲಿಯನ್‌ಗೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದ್ದು, ಹತ್ತಾರು ಸಾವಿರ ಜನರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಕೆಲವರು ಇದು ಅಪಾಯಕಾರಿ ಕೆಲಸ ಎಂದು ಹೇಳಿದರೆ, ಇನ್ನು ಕೆಲವರು ಯುವಕನ ಧೈರ್ಯವನ್ನು ಮನಸಾರೆ ಹೊಗಳಿದ್ದಾರೆ. ಒಬ್ಬ ಬಳಕೆದಾರರು, “ಈ ಹಾವನ್ನು ಗೋಣಿಯಲ್ಲಿ ಹಾಕಿ ಹೊತ್ತುಕೊಂಡು ಹೋದರೆ, ಬೆನ್ನು ನೋವು ಬರುವುದು ಗ್ಯಾರಂಟಿ” ಎಂದು ತಮಾಷೆ ಮಾಡಿದ್ದಾರೆ.