Telangana – ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಲೋಕದ ಮಾಹಿತಿ ಜ್ಞಾನಕ್ಕೆ ಮಾತ್ರ ಸೀಮಿತವಾಗಿಲ್ಲ. ಇನ್ನು ಕ್ರೈಂ ಲೋಕಕ್ಕೂ ಇಂಟರ್ನೆಟ್ ಮೂಲಕ ಮಾಹಿತಿ ಕಲೆ ಹಾಕುತ್ತಿದ್ದಾರೆ. ಇದೇ ರೀತಿ ತೆಲಂಗಾಣದಲ್ಲಿ ನಡೆದ ಒಂದು ಭಯಾನಕ ಘಟನೆ ಎಲ್ಲರನ್ನು ಬೆಚ್ಚಿಬೀಳಿಸಿದೆ. ಗಂಡನನ್ನು ಕೊಲ್ಲಲು ಬಯಸಿದ್ದ ಪತ್ನಿ, ಅದಕ್ಕಾಗಿ YouTube ನಲ್ಲಿ ವಿಡಿಯೋಗಳನ್ನು ನೋಡಿ ಯೋಜನೆ ರೂಪಿಸಿದ್ದಾಳೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
Telangana – ತೆಲಂಗಾಣದ ದಂಪತಿಗಳ ಕೌಟುಂಬಿಕ ಕಲಹ, ಕೊಲೆಯಲ್ಲಿ ಅಂತ್ಯ
ತೆಲಂಗಾಣದ ಸಂಜೀವಯ್ಯ ನಗರದಲ್ಲಿ ಸಂಪತ್ ಎಂಬ ಲೈಬ್ರರಿಯಲ್ಲಿ ಸ್ವಚ್ಛತಾ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಈತನಿಗೆ ಕುಡಿಯುವ ಚಟವಿತ್ತು. ಇದರಿಂದಾಗಿ ಈತ ಪ್ರತಿನಿತ್ಯ ಪತ್ನಿ ರಮಾದೇವಿ ಜೊತೆ ಜಗಳವಾಡುತ್ತಿದ್ದ. ಹೀಗಾಗಿ ಪತ್ನಿ ರಮಾದೇವಿ ತನ್ನ ಗಂಡನಿಂದ ದೂರವಾಗಲು ಬಯಸಿದ್ದಳು. ಅಲ್ಲದೇ, ರಮಾದೇವಿ ತಾನು ನಡೆಸುತ್ತಿದ್ದ ತಿಂಡಿ ಅಂಗಡಿಯಲ್ಲಿ ತನ್ನ ಗಂಡ ಸಂಪತ್‌ನನ್ನು ಕೊಲ್ಲಲು ರಾಯಪ್ಪ ಎಂಬುವವನ ಜೊತೆ ಯೋಜನೆ ರೂಪಿಸಿದ್ದಳು. ಈ ಘಟನೆ ನಿಜಕ್ಕೂ ಸಮಾಜದಲ್ಲಿನ ಅಪರಾಧ ಲೋಕವನ್ನು ಮತ್ತಷ್ಟು ಹೆಚ್ಚಿಸುತ್ತಿದೆಯೇ ಎಂಬ ಆತಂಕ ಸೃಷ್ಟಿಸಿದೆ.
Telangana – ಯುಟ್ಯೂಬ್ ನಿಂದ ಪಾಠ ಕಲಿತಿದ್ದ ರಮಾದೇವಿ
ಪತಿ ಸಂಪತ್‌ನನ್ನು ಕೊಲ್ಲಲು ನಿರ್ಧರಿಸಿದ ರಮಾದೇವಿ, ಯೂಟ್ಯೂಬ್‌ನಲ್ಲಿ ವಿಷ ಕೊಟ್ಟು ಕೊಲ್ಲುವುದು ಹೇಗೆ? ಎಂಬ ವಿಡಿಯೋಗಳನ್ನು ನೋಡಿದ್ದಾಳೆ. ಕಿವಿಯ ಮೂಲಕ ಕ್ರಿಮಿನಾಶಕ ಅಥವಾ ವಿಷವನ್ನು ಹಾಕಿದರೆ ವ್ಯಕ್ತಿಯು ಬೇಗನೆ ಸಾಯುತ್ತಾನೆ ಎಂಬ ಪಾಠವನ್ನು ಯೂಟ್ಯೂಬ್ ಮೂಲಕ ಕಲಿತಿದ್ದಳು.
Telangana – ಕೊಲೆಗೆ ಪ್ಲ್ಯಾನ್ ರೂಪಿಸಿದ್ದು ಹೇಗೆ?
ಸಂಪತ್‌ಗೆ ಸರಿಯಾಗಿ ಕುಡಿಸಿ, ಅವನು ನಿದ್ರೆಗೆ ಜಾರಿದಾಗ ಕಿವಿಗೆ ವಿಷ ಅಥವಾ ಕ್ರಿಮಿನಾಶಕ ಹಾಕಿ ಕೊಲ್ಲಲು ರಮಾದೇವಿ ತನ್ನ ಪ್ರಿಯಕರ ರಾಯಪ್ಪನ ಜೊತೆ ಸೇರಿ ಯೋಜನೆ ರೂಪಿಸಿದ್ದಳು. ಅದೇ ರೀತಿ, ಸಂಪತ್‌ಗೆ ಸರಿಯಾಗಿ ಕುಡಿಸಿ, ಆತ ಕುಡಿದ ಅಮಲಿನಲ್ಲಿ ಪ್ರಜ್ಞಾಹೀನನಾಗಿ ಮಲಗಿದಾಗ, ರಾಯಪ್ಪ ಅವನ ಕಿವಿಗೆ ಕ್ರಿಮಿನಾಶಕ ಹಾಕಿ ಕೊಲೆ ಮಾಡಿದ್ದಾನೆ. Read this also : ಪ್ರಿಯಕರನೊಂದಿಗೆ ಸೇರಿ ಪತಿಯ ಕೊಲೆ: ವರ್ಷದ ನಂತರ ಮಹಿಳೆ ಮತ್ತು ಆಕೆಯ ಪ್ರಿಯಕರ ಬಂಧನ…!
Telangana – ತನಿಖೆ ಶುರು ಆಗಿದ್ದೇಗೆ?
ಸಂಪತ್ ಹತ್ಯೆಯಾದ ಬಳಿಕ ತನ್ನ ಗಂಡ ಕಾಣೆಯಾಗಿದ್ದಾನೆ ಎಂದು ರಮಾದೇವಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಳು. ಸಂಪತ್ ಶವ ಸಿಕ್ಕಾಗ ರಮಾದೇವಿ ಮತ್ತು ರಾಯಪ್ಪ ಶವವನ್ನು ಪೋಸ್ಟ್ ಮಾರ್ಟಮ್ ಮಾಡದಂತೆ ಪೊಲೀಸರಿಗೆ ಮನವಿ ಮಾಡಿದ್ದರು. ಆದರೆ ಮೃತ ಸಂಪತ್ ಮಗ ತನಿಖೆಗೆ ಒತ್ತಾಯಿಸಿದ್ದರಿಂದ ಪೊಲೀಸರಿಗೆ ಅನುಮಾನ ಶುರುವಾಗಿ ತನಿಖೆ ನಡೆಸಿದ್ದಾರೆ.
ಪೊಲೀಸ್ ತನಿಖೆಯಲ್ಲಿ ರಮಾದೇವಿ ಮತ್ತು ರಾಯಪ್ಪಳ ಕೃತ್ಯ ಬಯಲಾಗಿದೆ. ಸಂಪತ್ ಸಾವಿನ ಬಗ್ಗೆ ಪೊಲೀಸರು ಸಂಪತ್ ಮಗನ ಹೇಳಿಕೆ ಆಧರಿಸಿ, ರಮಾದೇವಿ ಮತ್ತು ರಾಯಪ್ಪನ ಮೊಬೈಲ್ ಕರೆಗಳ ವಿವರ, ಲೊಕೇಶನ್ ಪರಿಶೀಲಿಸಿದಾಗ ಸತ್ಯ ಬಯಲಾಗಿದೆ. ಆಗ ರಮಾದೇವಿ ಮತ್ತು ಆಕೆಯ ಪ್ರಿಯಕರ, ಆತನ ಸ್ನೇಹಿತರನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ಮಾಡಿದಾಗ, ಕೊಲೆ ಮಾಡಿದ್ದನ್ನು ತಪ್ಪೊಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದ್ದು, ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.