Friday, August 1, 2025
HomeNationalಮಹಾತ್ಮ ಗಾಂಧಿ ಆದರ್ಶಗಳನ್ನೇ ಕಾಂಗ್ರೇಸ್ ಅನುಸರಿಸುತ್ತದೆ ಎಂದ ಪ್ರಿಯಾಂಕಾ ಗಾಂಧಿ…!

ಮಹಾತ್ಮ ಗಾಂಧಿ ಆದರ್ಶಗಳನ್ನೇ ಕಾಂಗ್ರೇಸ್ ಅನುಸರಿಸುತ್ತದೆ ಎಂದ ಪ್ರಿಯಾಂಕಾ ಗಾಂಧಿ…!

ರಾಷ್ಟ್ರಪಿತ ಮಹಾತ್ಮ ಗಾಂಧಿಯವರು ಸಾಯುವುದಕ್ಕೂ ಮುನ್ನಾ “ಹೇ ರಾಮ್” ಎಂದು ಘೊಷಣೆ ಕೂಗಿದ್ದರು. ಅವರ ಆದರ್ಶಗಳನ್ನೇ ಕಾಂಗ್ರೇಸ್ ಅನುಸರಿಸುತ್ತದೆ ಎಂದು ಕಾಂಗ್ರೇಸ್ ನಾಯಕಿ ಪ್ರಿಯಾಂಕಾ ಗಾಂಧಿ ನುಡಿದಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆಯ ಕಾರ್ಯಕ್ರಮವನ್ನು ಕಾಂಗ್ರೇಸ್ ತಿರಸ್ಕರಿಸಿದ ಕಾರಣ ಮೋದಿಯವರು ಕಾಂಗ್ರೇಸ್ ಪಕ್ಷವನ್ನು ಧರ್ಮ ವಿರೋಧಿ ಎಂದು ಆರೋಪಿಸುತ್ತಿದ್ದಾರೆ ಎಂದು ಅಸಮಧಾನವನ್ನು ಹೊರಹಾಕಿದ್ದಾರೆ.

Priyanka gandhi comments about mahatma gandhi 0

ಲೋಕಸಭಾ ಚುನಾವಣೆ 2024ರ ನಿಮಿತ್ತ ರಾಯ್ ಬರೇಲಿ ಕ್ಷೇತ್ರದ ಚೌಡಾ ಮಿಲ್ ವೃತ್ತದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು., ಗಾಂಧಿಯವರು ಸಾಯುವ ಮುನ್ನಾ ಹೇ ರಾಮ್ ಎಂದು ಕೂಗಿದ್ದರು. ಅವರ ಆದರ್ಶವನ್ನು ಕಾಂಗ್ರೇಸ್ ಪಕ್ಷ ಪಾಲನೆ ಮಾಡುತ್ತದೆ. ಹಿಂದೂ ಧರ್ಮದ ಚಾಂಪಿಯನ್, ಗೋ ರಕ್ಷಕರೆಂದು ಬಿಜೆಪಿಯವರು ಹೇಳಿಕೊಳ್ಳುತ್ತಾರೆ. ಆದರೆ ತಮ್ಮದೇ ಪಕ್ಷ ಆಡಳಿತದಲ್ಲಿರುವ ಉತ್ತರ ಪ್ರದೇಶದಲ್ಲಿ ಗೋಶಾಲೆಗಳ ಸ್ಥಿತಿ ಹೇಗಿದೆ ಎಂಬುದನ್ನು ಅವಲೋಕಿಸಬೇಕಿದೆ. ಅಲ್ಲಿನ ಗೋಶಾಲೆಗಳಲ್ಲಿ ಸತ್ತ ಹಸುಗಳ ಮಾಂಸವನ್ನು ನಾಯಿಗಳು ತಿನ್ನುತ್ತಿವೆ. ಆದರೆ ಕಾಂಗ್ರೇಸ್ ಪಕ್ಷ ಆಡಳಿತದಲ್ಲಿರುವ ಛತ್ತೀಸ್ ಗಢದಲ್ಲಿ ಗೋಶಾಲೆಗಳ ಸ್ಥಿತಿ ಹೇಗಿದೆ, ಈ ಗೋಶಾಲೆಗಳನ್ನು ನಡೆಸುತ್ತಿರುವ ಸ್ವ ಸಹಾಯ ಗುಂಪುಗಳಿಗೂ ಸಹ ಅನುಕೂಲವಾಗಿದೆ. ಗೋಶಾಲೆಗಳ ಸ್ಥಿತಿ ಸುಧಾರಣೆಯಾಗಿದೆ ಎಂದಿದ್ದಾರೆ.

Priyanka gandhi comments about mahatma gandhi 1

ಈ ಬಾರಿ ರಾಯ್ ಬರೇಲಿ ಕ್ಷೇತ್ರದಿಂದ ಕಾಂಗ್ರೇಸ್ ನಾಯಕ ರಾಹುಲ್ ಗಾಂಧಿ ಸ್ಫರ್ಧೆ ಮಾಡಿದ್ದಾರೆ. ತನ್ನ ಸಹೋದರನ ಪರ ಪ್ರಚಾರ ನಡೆಸಿದ ಪ್ರಿಯಾಂಕಾ ಗಾಂಧಿ ಕಾಂಗ್ರೇಸ್ ಗ್ಯಾರಂಟಿಗಳ ಬಗ್ಗೆ ಮಾತನಾಡಿದರು. ಇಂಡಿಯಾ ಒಕ್ಕೂಟ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೇ ಎಲ್ಲಾ ಗ್ಯಾರಂಟಿಗಳನ್ನು ಈಡೇರಿಸುತ್ತದೆ. ಉತ್ತರ ಪ್ರದೇಶದಲ್ಲಿ ಪದೇ ಪದೇ ಪ್ರಶ್ನೆ ಪತ್ರಿಕೆ ಸೋರಿಕೆಗೆ ಕಾಂಗ್ರೇಸ್ ಪಕ್ಷ ಬ್ರೇಕ್ ಹಾಕುತ್ತದೆ. ಅಗ್ನಿವೀರ್‍ ಯೋಜನೆಯನ್ನು ರದ್ದು ಮಾಡುತ್ತದೆ. ಸಣ್ಣ ಉದ್ಯಮಿಗಳ ಸಹಾಯ ಸೇರಿದಂತೆ ಕಾಂಗ್ರೇಸ್ ಸರ್ಕಾರ ಪ್ರಣಾಳಿಕೆಯಲ್ಲಿ ತಿಳಿಸಿದ ಎಲ್ಲಾ ಗ್ಯಾರಂಟಿಗಳನ್ನು ಜಾರಿ ಮಾಡುತ್ತದೆ ಎಂದು ಹೇಳಿದ್ದಾರೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular