ಕಮಲ್ ಹಾಸನ್ ರನ್ನು ಟ್ರಾನ್ಸ್ ಜೆಂಡರ್ ಎಂದ ಸುಚಿತ್ರಾ, ವೈರಲ್ ಆದ ಕಾಮೆಂಟ್ಸ್….!

ಸುಮಾರು ವರ್ಷಗಳ ಹಿಂದೆ ಕಾಲಿವುಡ್ ಅಂಗಳದಲ್ಲಿ ಸುಚಿ ಲೀಕ್ಸ್ ಎಂಬುದು ಭಾರಿ ಸದ್ದು ಮಾಡಿತ್ತು. ಕಾಲಿವುಡ್ ನಲ್ಲಿರುವ ಕೆಲವೊಂದು ಶಾಕಿಂಗ್ ವಿಚಾರಗಳನ್ನು ಹೊರಹಾಕಿದರು. ಧನುಷ್, ಅನಿರುದ್ ರವಿಚಂದರ್‍, ಆಂಡ್ರಿಯಾ ಸೇರಿದಂತೆ ಅನೇಕರ ವಿರುದ್ದ ಆಕೆ ಕೆಲವೊಂದು ಕಾಮೆಂಟ್ ಗಳನ್ನು ಮಾಡಿದ್ದರು, ಕೆಲವೊಂದು ಪೊಟೋಗಳೂ ಸಹ ಲೀಕ್ ಆಗಿತ್ತು. ಆ ಸಮಯದಲ್ಲಿ ಸುಚಿ ಲೀಕ್ಸ್ ತುಂಬಾನೆ ಸದ್ದು ಮಾಡಿತ್ತು. ಇದೀಗ ಮತ್ತೊಮ್ಮೆ ಖ್ಯಾತ ಸಿಂಗರ್‍ ಸುಚಿತ್ರ ಸಂಚಲನಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿಯಾಗಿದ್ದಾರೆ. ನಟ ಕಮಲ್ ಹಾಸನ್ ರನ್ನು ಟ್ರಾನ್ಸ್ ಜೆಂಡರ್‍ ಎಂದು ಹೇಳಿದ್ದು, ಆಕೆಯ ಕಾಮೆಂಟ್ ಗಳು ಇದೀಗ ಭಾರಿ ಸು‌ದ್ದಿಯಾಗುತ್ತಿದೆ.

suchitra shocking comments about kamal hassan 1

ಖ್ಯಾತ ಸಿಂಗರ್‍ ಕಂ ಆರ್‍.ಜೆ. ಸುಚಿತ್ರ ಸುಮಾರು ವರ್ಷಗಳ ಹಿಂದೆ ಸುಚಿ ಲೀಕ್ಸ್ ಎಂಬ ಟೈಟಲ್ ಮೂಲಕ ದೊಡ್ಡ ಸಂಚಲನ ಸೃಷ್ಟಿ ಮಾಡಿದ್ದರು.  ಇದೀಗ ಮತ್ತೊಮ್ಮೆ ಸುಚಿತ್ರ ಸುದ್ದಿಯಾಗಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಸುಚಿತ್ರ ಧನುಷ್, ಐಶ್ವರ್ಯ ರಜನಿಕಾಂತ್ ರವರ ದಾಂಪತ್ಯದ ಬಗ್ಗೆ ಹಾಗೂ ಆಕೆಯ ಪತಿ ಕಾರ್ತಿಕ್ ಬಗ್ಗೆ ಸಹ ಕೆಲವೊಂದು ಶಾಕಿಂಗ್ ವಿಚಾರಗಳನ್ನು ಹೊರಹಾಕಿದ್ದರು. ಇದೀಗ ಲೋಕನಾಯಕ ಕಮಲ್ ಹಾಸನ್ ರವರ ಬಗ್ಗೆ ಸಹ ಸಂಚಲನಾತ್ಮಕ ಆರೋಪಗಳನ್ನು ಮಾಡಿದ್ದಾರೆ. ಕಮಲ್ ಹಾಸನ್ ರವರನ್ನು ಓರ್ವ ಟ್ರಾನ್ಸ್ ಜೆಂಡರ್‍ ಎಂದು ಆಕೆ ಸೆನ್ಷೇಷನಲ್ ಹೇಳಿಕೆ ನೀಡಿದ್ದಾರೆ.  ಸುಚಿತ್ರಾ ಕಮಲ್ ಹಾಸನ್ ಜೊತೆಗೆ ಬಿಗ್ ಬಾಸ್ ಶೋ ನಲ್ಲಿ ಭಾಗಿಯಾಗಿದ್ದರು. ಇದೀಗ ಅವರ ವೈಯುಕ್ತಿಕ ವಿಚಾರಗಳ ಬಗ್ಗೆ ಆಕೆ ಅನುಚಿತ ಹೇಳಿಕೆಗಳನ್ನು ನೀಡಿದ್ದಾರೆ.

ಕಮಲ್ ಹಾಸನ್ ಓರ್ವ ಟ್ರಾನ್ಸ್ ಜೆಂಡರ್‍ ಎಂದು ಬಾಂಬ್ ಸಿಡಿಸಿದ್ದಾರೆ. ಕಮಲ್ ಹಾಸನ್ ಟ್ರಾನ್ಸ್ ಜೆಂಡರ್‍ ಆಗಿರುತ್ತಾರೆ. ಆದ್ದರಿಂದಲೇ ಅವರು ಚೂಡಿದಾರ್‍, ಕುರ್ತಾ ಧರಿಸುತ್ತಾರೆ. ಅವರಿಗೆ ಅದು ಇಷ್ಟ ಎಂದು ಹೇಳಿದ್ದಾರೆ. ಇತ್ತೀಚಿಗೆ ನಡೆದ ಯುಟ್ಯೂಬ್ ಸಂದರ್ಶನವೊಂದರಲ್ಲಿ ಆಕೆ ಈ ಹೇಳಿಕೆಗಳನ್ನು ನೀಡಿದ್ದಾರೆ. ಆಕೆ ಮತ್ತೋರ್ವ ಟ್ರಾನ್ಸ್ ಜೆಂಡರ್‍ ಜೊತೆಗೆ ಸೇರಿ ಈ ಹೇಳಿಕೆಗಳನ್ನು ನೀಡಿದ್ದು ಶಾಕಿಂಗ್ ವಿಚಾರವಾಗಿದೆ. ಈ ಬಗ್ಗೆ ನಾವು ರೀಸರ್ಚ್ ಮಾಡಿದ್ದೇವೆ. ಈ ಕಾರಣದಿಂದಲೇ ಈ ವಿಚಾರಗಳನ್ನು ಹೇಳುತ್ತಿದ್ದೇವೆ ಎಂದು ಹೇಳಿದ್ದಾರೆ. ಕಮಲ್ ಹಾಸನ್ ರವರ ವಿಶ್ವರೂಪಂ ಸಿನೆಮಾದ ಕ್ಲಾಸಿಕಲ್ ಡ್ಯಾನ್ಸ್ ಕಲಿಸುವ ಕ್ರಮದಲ್ಲಿ ಕೊಡುವ ಎಕ್ಸ್ ಪ್ರೆಷನ್ ಅಕ್ಷರಶಃ ಟ್ರಾನ್ಸ್ ಜೆಂಡರ್‍ ಮಾದರಿಯಿದೆ. ಅದರಲ್ಲಿ ಅವರು ವೈಟ್ ಕಲರ್‍ ಚೂಡಿದಾರ್‍ ಮಾದರಿಯ ಡ್ರೆಸ್ ಹಾಕಿಕೊಳ್ಳುತ್ತಾರೆ. ರಿಯಲ್ ಲೈಫ್ ನಲ್ಲೂ ಕಮಲ್ ಅಂತಹ ಡ್ರೆಸ್ ಗಳನ್ನೆ ಧರಿಸುತ್ತಾರೆ ಎಂದು ಶಾಕಿಂಗ್ ಕಾಮೆಂಟ್ ಮಾಡಿದ್ದು, ಆಕೆಯ ಕಾಮೆಂಟ್ ಗಳು ಇದೀಗ ಕಾಲಿವುಡ್ ನಲ್ಲಿ ಸಂಚಲನ ಸೃಷ್ಟಿಸಿದೆ.

Leave a Comment

Your email address will not be published. Required fields are marked *

Scroll to Top