Saturday, August 2, 2025
HomeNationalMaharashtra : ಮದುವೆ ಹೆಸರಿನಲ್ಲಿ ವಂಚನೆ: 8 ಪುರುಷರನ್ನು ಮೋಸಗೊಳಿಸಿ ಲಕ್ಷಾಂತರ ರೂ. ವಸೂಲಿ; 9ನೇ...

Maharashtra : ಮದುವೆ ಹೆಸರಿನಲ್ಲಿ ವಂಚನೆ: 8 ಪುರುಷರನ್ನು ಮೋಸಗೊಳಿಸಿ ಲಕ್ಷಾಂತರ ರೂ. ವಸೂಲಿ; 9ನೇ ಮದುವೆಗೆ ಹೊರಟಿದ್ದ ಕಿಲಾಡಿ ಅರೆಸ್ಟ್…!

Maharashtra – ಮದುವೆ ಹೆಸರಿನಲ್ಲಿ ಬರೋಬ್ಬರಿ ಎಂಟು ಪುರುಷರನ್ನು ವಂಚಿಸಿ, ಲಕ್ಷಾಂತರ ರೂಪಾಯಿ ಹಣ ಸುಲಿಗೆ ಮಾಡಿದ್ದ ಮಹಿಳೆಯೊಬ್ಬರನ್ನು ಮಹಾರಾಷ್ಟ್ರದ ನಾಗ್ಪುರ ಪೊಲೀಸರು ಬಂಧಿಸಿದ್ದಾರೆ. 9ನೇ ಮದುವೆಯ ಮಾತುಕತೆಗಾಗಿ ಹೊರಟಿದ್ದಾಗ ಆಕೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Maharashtra woman Sameera Fatima arrested for duping 8 men in marriage scam

Maharashtra – ಯಾರು ಈ ವಂಚಕಿ?

ಸಮೀರಾ ಫಾತಿಮಾ ಎಂಬ ಹೆಸರಿನ ಈ ಮಹಿಳೆ, ವಿದ್ಯಾವಂತಳಾಗಿದ್ದು ವೃತ್ತಿಯಲ್ಲಿ ಶಿಕ್ಷಕಿ ಎಂದು ಹೇಳಲಾಗಿದೆ. ಆದರೆ ಆಕೆ ಕಳೆದ 15 ವರ್ಷಗಳಿಂದ ಮದುವೆಯ ಹೆಸರಿನಲ್ಲಿ ಪುರುಷರನ್ನು ವಂಚಿಸುತ್ತಿದ್ದಾಳೆ ಎಂದು ಪೊಲೀಸರು ಶಂಕಿಸಿದ್ದಾರೆ. ಪ್ರಮುಖವಾಗಿ ಶ್ರೀಮಂತ ಮತ್ತು ವಿವಾಹಿತ ಮುಸ್ಲಿಂ ಪುರುಷರನ್ನು ತನ್ನ ಟಾರ್ಗೆಟ್ ಮಾಡಿಕೊಳ್ಳುತ್ತಿದ್ದಳು.

Maharashtra – ವಂಚನೆಯ ಜಾಲ ಹೇಗೆ ಕೆಲಸ ಮಾಡುತ್ತಿತ್ತು?

ಆರೋಪಿ ಸಮೀರಾ ಫಾತಿಮಾ. ಆಕೆಯನ್ನು ನಾಗ್ಪುರದಲ್ಲಿ ಬಂಧಿಸಲಾಗಿದೆ. ಆಕೆಯ ಬಂಧನವಾಗಿದ್ದು, 9ನೇ ಮದುವೆಗೆ ಮಾತುಕತೆ ನಡೆಸಿ ಹೊರಟಿದ್ದಾಗ. ಪೊಲೀಸರು ಆಕೆಯನ್ನು ಹಿಡಿದು ವಿಚಾರಣೆ ಮಾಡಿದಾಗ ಈ ಆಘಾತಕಾರಿ ಸತ್ಯ ಬಯಲಾಗಿದೆ. ಸಮೀರಾ ಫಾತಿಮಾ ತನ್ನ ಪತಿಗಳನ್ನು ಬ್ಲ್ಯಾಕ್‌ಮೇಲ್ ಮಾಡಿ ಹಣ ವಸೂಲಿ ಮಾಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಇಷ್ಟೇ ಅಲ್ಲ, ಈಕೆ ಒಬ್ಬಂಟಿಯಲ್ಲ, ಈಕೆಯ ಜೊತೆ ಬೇರೆಯವರೂ ಸಹ ಈ ದಂಧೆಯಲ್ಲಿ ಶಾಮೀಲಾಗಿದ್ದಾರೆ ಎಂದು ಹೇಳಲಾಗಿದೆ. Read this also : ವಧು ದಕ್ಷಿಣೆ ಕೊಟ್ಟು ಮದುವೆಯಾದ ರೈತ, ಮದುವೆಯಾದ ವಾರದಲ್ಲೇ ಬ್ರೋಕರ್ ಜೊತೆಗೆ ಪರಾರಿಯಾದ ಮದುಮಗಳು….!

Maharashtra woman Sameera Fatima arrested for duping 8 men in marriage scam

Maharashtra – ಪೊಲೀಸರ ತನಿಖೆ ಚುರುಕು

ಈಕೆಯ ವಂಚನೆಯ ಜಾಲಕ್ಕೆ ಸಿಲುಕಿದ ಪುರುಷರಲ್ಲಿ ಒಬ್ಬರು ₹ 50 ಲಕ್ಷ ಹಾಗೂ ಮತ್ತೊಬ್ಬರು ₹ 15 ಲಕ್ಷ ಕಳೆದುಕೊಂಡಿದ್ದಾರೆ. ಈಕೆ ಹಣವನ್ನು ನೇರವಾಗಿ ತನ್ನ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಳ್ಳುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸದ್ಯ ಸಮೀರಾ ಫಾತಿಮಾ ಅವರನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular