Financial Rules – ಹೊಸ ತಿಂಗಳು ಪ್ರಾರಂಭವಾಗುತ್ತಿದ್ದಂತೆ ಆರ್ಥಿಕ ಜಗತ್ತಿನಲ್ಲಿ ಕೆಲವು ಮಹತ್ವದ ಬದಲಾವಣೆಗಳಾಗುವುದು ಸಾಮಾನ್ಯ. ಈ ಆಗಸ್ಟ್ ತಿಂಗಳಿನಲ್ಲಿಯೂ ಕೂಡ ಅಂತಹ ಕೆಲವು ಬದಲಾವಣೆಗಳು ನಡೆಯಲಿವೆ. ಗ್ಯಾಸ್ ಸಿಲಿಂಡರ್ ದರದಿಂದ ಹಿಡಿದು, UPI ಹಾಗೂ ಕ್ರೆಡಿಟ್ ಕಾರ್ಡ್‌ಗಳ ನಿಯಮಗಳವರೆಗೆ ಹಲವು ಹೊಸ ನಿಯಮಗಳು ಜಾರಿಗೆ ಬರಲಿದ್ದು, ಇವು ನಿಮ್ಮ ದೈನಂದಿನ ಹಣಕಾಸಿನ ಮೇಲೆ ನೇರ ಪರಿಣಾಮ ಬೀರಬಹುದು. ಈ ಪ್ರಮುಖ ಬದಲಾವಣೆಗಳ ಬಗ್ಗೆ ನೀವು ತಿಳಿದುಕೊಳ್ಳುವುದು ಬಹಳ ಮುಖ್ಯ.
Financial Rules – ಆಗಸ್ಟ್ 1 ರಿಂದ ಜಾರಿಯಾಗಲಿರುವ ಪ್ರಮುಖ ಬದಲಾವಣೆಗಳು
ಹೊಸ ತಿಂಗಳು ಪ್ರಾರಂಭವಾಗುತ್ತಿದ್ದಂತೆ ಹಣಕಾಸಿಗೆ ಸಂಬಂಧಿಸಿದ ಹೊಸ ನಿಯಮಗಳು ಜಾರಿಗೆ ಬರುವುದು ಸಾಮಾನ್ಯ. ಇವುಗಳಲ್ಲಿ ಕೆಲವು ಬದಲಾವಣೆಗಳು ಸಾರ್ವಜನಿಕರ ಜೇಬಿಗೆ ಹೊರೆಯಾಗುವ ಸಾಧ್ಯತೆ ಇದೆ. ಆಗಸ್ಟ್ 1ರಿಂದ ಯಾವೆಲ್ಲಾ ಹಣಕಾಸು ನಿಯಮಗಳು ಬದಲಾಗಲಿವೆ ಎಂಬ ಮಾಹಿತಿ ಇಲ್ಲಿದೆ.
1. ಗ್ಯಾಸ್ ಸಿಲಿಂಡರ್ ಬೆಲೆಗಳು
ತೈಲ ಮಾರುಕಟ್ಟೆ ಕಂಪನಿಗಳು ಎಲ್ಪಿಜಿ ಸಿಲಿಂಡರ್ ಬೆಲೆಗಳನ್ನು ಪ್ರತಿ ತಿಂಗಳ 1ನೇ ತಾರೀಖಿನಂದು ಪರಿಷ್ಕರಿಸುತ್ತವೆ. ಕಳೆದ ಕೆಲವು ತಿಂಗಳಿಂದ ವಾಣಿಜ್ಯ ಸಿಲಿಂಡರ್ ಬೆಲೆಗಳಲ್ಲಿ ಏರಿಳಿತಗಳು ಕಂಡುಬಂದಿವೆ. ಈ ಬಾರಿ ಗೃಹ ಬಳಕೆಯ ಸಿಲಿಂಡರ್ ಬೆಲೆಗಳಲ್ಲಿ ಬದಲಾವಣೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಕೆಲವು ವರದಿಗಳ ಪ್ರಕಾರ, ಆಗಸ್ಟ್ 1 ರಿಂದ ಗ್ಯಾಸ್ ಬೆಲೆಗಳು ಇಳಿಯುವ ಸಾಧ್ಯತೆ ಇದೆ. (Financial Rules)
2. ಯುಪಿಐ (UPI) ಹೊಸ ನಿಯಮಗಳು
ಆಗಸ್ಟ್ 1 ರಿಂದ ಯುಪಿಐ ನಿಯಮಗಳಲ್ಲಿ ಹಲವು ಬದಲಾವಣೆ ಆಗಲಿದ್ದು, ಯುಪಿಐ ಬಳಸುವವರು ಈ ಹೊಸ ನಿಯಮಗಳನ್ನು ಗಮನಿಸುವುದು ಅವಶ್ಯಕ.
- ಇನ್ಮುಂದೆ ಒಂದು ದಿನದಲ್ಲಿ 50 ಬಾರಿ ಮಾತ್ರ ಬ್ಯಾಲೆನ್ಸ್ ಚೆಕ್ ಮಾಡಲು ಸಾಧ್ಯ.
- ಫೋನ್ ಸಂಖ್ಯೆಗೆ ಲಿಂಕ್ ಮಾಡಲಾದ ಬ್ಯಾಂಕ್ ಖಾತೆಗಳನ್ನು ಕೇವಲ 25 ಬಾರಿ ಚೆಕ್ ಮಾಡಬಹುದು.
- ಆಟೋಪೇ (Auto Pay) ನಂತಹ ಸೇವೆಗಳ ವಹಿವಾಟುಗಳು ನಿರ್ದಿಷ್ಟ ಸಮಯಗಳಲ್ಲಿ ಮಾತ್ರ ನಡೆಯುತ್ತವೆ.
- ವಿಫಲವಾದ ವಹಿವಾಟುಗಳ ಸ್ಟೇಟಸ್ ಅನ್ನು ದಿನಕ್ಕೆ ಮೂರು ಬಾರಿ ಮಾತ್ರ ಚೆಕ್ ಮಾಡಬಹುದು.
- ಎರಡು ವಹಿವಾಟುಗಳ ನಡುವೆ 90 ಸೆಕೆಂಡುಗಳ ಅಂತರವಿರುವುದು ಕಡ್ಡಾಯ.
3. ಕ್ರೆಡಿಟ್ ಕಾರ್ಡ್‌ಗಳಿಗೆ ಹೊಸ ನಿಯಮಗಳು
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ತನ್ನ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಒಂದು ಪ್ರಮುಖ ಘೋಷಣೆ ಮಾಡಿದೆ. ಆಗಸ್ಟ್ 11 ರಿಂದ, ಕ್ರೆಡಿಟ್ ಕಾರ್ಡ್‌ಗಳಿಗೆ ನೀಡುತ್ತಿದ್ದ ಕಾಂಪ್ಲಿಮೆಂಟರಿ ಏರ್ ಆಕ್ಸಿಡೆಂಟ್ ಇನ್ಶುರೆನ್ಸ್ ಅನ್ನು ತೆಗೆದುಹಾಕಲಾಗಿದೆ. ಹಲವು ಕಾರ್ಡ್‌ಗಳ ಮೇಲೆ ಪ್ರಸ್ತುತ ನೀಡಲಾಗುತ್ತಿದ್ದ ₹50 ಲಕ್ಷ, ₹1 ಕೋಟಿ ವರೆಗಿನ ಉಚಿತ ವಿಮಾನ ಅಪಘಾತ ವಿಮಾ ಪಾಲಿಸಿಗಳು ಇನ್ನು ಮುಂದೆ (Financial Rules) ಇರುವುದಿಲ್ಲ.
4. ಆರ್‌ಬಿಐ (RBI) ನ ನಿಯಮಗಳು
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank of India) ಟ್ರೇಡಿಂಗ್ ಸಮಯವನ್ನು ಹೆಚ್ಚಿಸಿದೆ. ಕಾಲ್ ಮನಿ, ಮಾರ್ಕೆಟ್ ರೆಪೋ, ಟ್ರೈ ಪಾರ್ಟಿ ರೆಪೋ ಮಾರುಕಟ್ಟೆಗಳಲ್ಲಿ ಆಗಸ್ಟ್ 1 ರಿಂದ ಟ್ರೇಡಿಂಗ್ ಸಮಯ ಎರಡು ಹಂತಗಳಲ್ಲಿ ಹೆಚ್ಚಳವಾಗಲಿದೆ. Read this also : ನಿಮ್ಮ ಪ್ಯಾನ್ ಕಾರ್ಡ್ ಸುರಕ್ಷಿತವಾಗಿದೆಯೇ? ಆನ್‌ಲೈನ್ ವಂಚನೆಯಿಂದ ತಪ್ಪಿಸಿಕೊಳ್ಳಲು ಹೀಗೆ ಪರಿಶೀಲಿಸಿ..!
5. ಸಿಎನ್‌ಜಿ (CNG) ಮತ್ತು ಪಿಎನ್‌ಜಿ (PNG) ಬೆಲೆಗಳು
ತೈಲ ಮಾರುಕಟ್ಟೆ ಕಂಪನಿಗಳು ಪ್ರತಿ ತಿಂಗಳು ಸಿಎನ್ಜಿ ಮತ್ತು ಪಿಎನ್ಜಿ ಬೆಲೆಗಳನ್ನು ಪರಿಷ್ಕರಿಸುತ್ತವೆ. ಕಳೆದ ಏಪ್ರಿಲ್ 9 ರಿಂದ ಈ ಬೆಲೆಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ, ಹೊಸ ತಿಂಗಳಲ್ಲಿ ಈ ದರಗಳು ಬದಲಾಗುವ ಸಾಧ್ಯತೆ ಇದೆ. ಒಂದು ವೇಳೆ ದರಗಳು ಹೆಚ್ಚಳವಾದರೆ, ಸಾರ್ವಜನಿಕ ಸಾರಿಗೆ ಮತ್ತು ಗೃಹ ವೆಚ್ಚಗಳ ಮೇಲೆ ಪರಿಣಾಮ (Financial Rules)ಬೀರುತ್ತದೆ.
ಈ ಎಲ್ಲಾ ಬದಲಾವಣೆಗಳು ಆಗಸ್ಟ್ ತಿಂಗಳಲ್ಲಿ ಜಾರಿಯಾಗಲಿದ್ದು, ಜನರು ತಮ್ಮ ದೈನಂದಿನ ಹಣಕಾಸಿನ ನಿರ್ವಹಣೆಯಲ್ಲಿ ಎಚ್ಚರ ವಹಿಸುವುದು ಅವಶ್ಯಕ.