Dr K Sudhakar – ದೇಶದ ಪ್ರತಿಯೊಂದು ಮನೆಗೂ ನಲ್ಲಿ ಮೂಲಕ ನೀರು ಕೊಡುವಂತಹ ಮಹದಾಸೆಯನ್ನು ಹೊಂದಿರುವಂತಹ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಿಂದ ಸಾಕಷ್ಟು ಯೋಜನೆಗಳನ್ನು ಜಾರಿ ಮಾಡುತ್ತಿದ್ದು, ಅದರ ಭಾಗವಾಗಿಯೇ ಜಲಜೀವನ್ ಮಿಷನ್ ಯೋಜನೆ ಹಾಗೂ ಅಮೃತ್ 2.0 ಯೋಜನೆಯನ್ನು ಅನುಷ್ಟಾನಗೊಳಿಸಲಾಗಿದೆ ಎಂದು ಸಂಸದ ಡಾ.ಕೆ.ಸುಧಾಕರ್ ತಿಳಿಸಿದರು.
Dr K Sudhakar – ಪ್ರಧಾನಿ ಮೋದಿ ಸರ್ಕಾರದ ಜನಪರ ಯೋಜನೆಗಳು
ಕೇಂದ್ರ ಪುರಸ್ಕೃತ ಅಮೃತ್ 2.0 ಯೋಜನೆಯಡಿ ಅಮಾನಿಬೈರಸಾಗರ ಕೆರೆಯ ಮೂಲದಿಂದ ಗುಡಿಬಂಡೆ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಯೋಜನೆಯ ಶಂಕು ಸ್ಥಾಪನೆ ಕಾರ್ಯಕ್ರಮದ ಶಂಕುಸ್ಥಾಪನೆಯ ಬಳಿಕ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಇಂದು ದೇಶದ ಬಡವರ ಪರ ಕೆಲಸ ಮಾಡುವ ಏಕೈಕ ಸರ್ಕಾರ ನರೇಂದ್ರ ಮೋದಿ ಸರ್ಕಾರ ಎಂದು ಹೇಳಬಹುದು. ಈಗಾಗಲೇ ಜಲಜೀವನ್ ಮಿಷನ್ ಯೋಜನೆಯಡಿ ಗ್ರಾಮೀಣ ಭಾಗದಲ್ಲಿ ಪ್ರತಿ ಮನೆ ಮನೆಗೂ ನಲ್ಲಿ ಮೂಲಕ ನೀರು ಕೊಡುವಂತಹ ಕೆಲಸ ಬಹುತೇಕ ಪೂರ್ಣಗೊಳ್ಳುತ್ತಿದೆ.
Dr K Sudhakar – ನಗರದಲ್ಲಿ ಅಮೃತ್ 2.0 ಯೋಜನೆಯ ಮೂಲಕ ನೀರು
ಅದರ ಮುಂದುವರೆದ ಭಾಗವಾಗಿ ನಗರ ಹಾಗೂ ಪಟ್ಟಣದ ವ್ಯಾಫ್ತಿಯಲ್ಲಿ ವಾಸಿಸುವಂತಹ ಜನರಿಗ ಅನುಕೂಲವಾಗುವ ನಿಟ್ಟಿನಲ್ಲಿ ಅಮೃತ್ 2.0 ಯೋಜನೆಯ ಮೂಲಕ ನಲ್ಲಿ ಮೂಲಕ ನೀರು ಒದಗಿಸುವ ಯೋಜನೆಯಾಗಿದೆ. ನಗರ ಅಥವಾ ಪಟ್ಟಣಗಳಲ್ಲಿ ವ್ಯಾಪ್ತಿಯಲ್ಲಿ ಅಥವಾ ಹತ್ತಿರವಿರುವಂತ ಕೆರೆಗಳ ನೀರನ್ನು ಬಳಸಿಕೊಂಡು ಶುದ್ದಿಕರಣ ಘಟಕಗಳನ್ನು, ಟ್ಯಾಂಕ್ ಗಳನ್ನು ಸ್ಥಾಪನೆ ಮಾಡಿ ಪೈಪ್ ಲೈನ್ ಮೂಲಕ ಪ್ರತೀ ಮನೆ ಮನೆಗೂ ನೀರನ್ನು ಒದಗಿಸಲಾಗುತ್ತದೆ ಎಂದರು.
Dr K Sudhakar – ಚಿಕ್ಕಬಳ್ಳಾಪುರಕ್ಕೆ ಬಂಪರ್ ಕೊಡುಗೆ
ಇನ್ನೂ ಈ ಯೋಜನೆಗೆ ಕೇಂದ್ರ ಸರ್ಕಾರದಿಂದ ಶೇ.50 ರಷ್ಟು, ರಾಜ್ಯ ಸರ್ಕಾರದಿಂದ ಶೇ.40 ಹಾಗೂ ಸ್ಥಳೀಯ ಸಂಸ್ಥೆಗಳಿಂದ ಶೇ.10 ರಷ್ಟು ಅನುದಾನ ಒದಗಿಸಲಾಗುತ್ತದೆ. ಈಗಾಗಲೇ ಈ ಯೋಜನೆಗಳು ಪೂರ್ಣಗೊಳ್ಳಬೇಕಾಗಿತ್ತು. ಆದರೆ ನರೇಂದ್ರ ಮೋದಿ ಸರ್ಕಾರ ಬಂದ ಮೇಲೆ ಗ್ರಾಮೀಣ ಅಥವಾ ನಗರ ಭಾಗಗಳಲ್ಲಿ ಮೂಲಭೂತ ಸೌಕರ್ಯಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಲೋಕಸಭಾ ಚುನಾವಣೆ ಸಮಯದಲ್ಲಿ ನಾನೂ ಸಹ ನೀರು ಒದಗಿಸುವ ಯೋಜನೆಯನ್ನು ತರುತ್ತೇನೆ ಎಂದು ಭರವಸೆ ನೀಡಿದ್ದೆ.
Read this also : Water Project : ತರಾತುರಿಯಲ್ಲಿ ಅಮೃತ್ 2.0 ಯೋಜನೆಯ ಕಾಮಗಾರಿ ಶಂಕುಸ್ಥಾಪನೆ, ಮಳೆಯ ನೆಪ ವೇದಿಕೆ ಕಾರ್ಯಕ್ರಮ ರದ್ದು
Dr K Sudhakar – ಒಂದೂವರೆ ವರ್ಷದಲ್ಲಿ ಯೋಜನೆ ಪೂರ್ಣ: ಸದ್ಬಳಕೆಗೆ ಮನವಿ
ಅದರಂತೆ ಇಂದು ಚಿಕ್ಕಬಳ್ಳಾಪುರ ಜಿಲ್ಲೆಗೆ ಸುಮಾರು 300 ಕೋಟಿಯಷ್ಟು ಅನುದಾನವನ್ನು ಕೇಂದ್ರ ಸರ್ಕಾರ ಕುಡಿಯುವ ನೀರಿನ ಯೋಜನೆಗೆ ನೀಡಿದೆ. ಈ ಯೋಜನೆಯನ್ನು ಒಂದೂವರೆ ವರ್ಷದೊಳಗೆ ಮುಗಿಸುತ್ತೇವೆ. ಜನರು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಇನ್ನೂ ಈ ಯೋಜನೆಗೆ ಸ್ಥಳೀಯ ಸಚಿವರು, ಶಾಸಕರು ಬೆಂಬಲ ಹಾಗೂ ಸಹಕಾರ ನೀಡಿದ್ದಾರೆ ಅವರಿಗೆ ಅಭಿನಂದನೆಗಳನ್ನು ತಿಳಿಸುತ್ತೇನೆ ಎಂದರು.