ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) 2025ನೇ ಸಾಲಿಗೆ ಬರೋಬ್ಬರಿ 111 ಆಡಿಟರ್ ಮತ್ತು ಜೂನಿಯರ್ ಎಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಡಿಪ್ಲೊಮಾ, BE, B.Tech ಪದವಿ ಪಡೆದವರಿಗೆ ಇದು ಉತ್ತಮ ಅವಕಾಶವಾಗಿದ್ದು, ದೇಶಾದ್ಯಂತ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ನೇಮಕಾತಿಗೆ ಸಂಬಂಧಿಸಿದ ಮಾಹಿತಿಯನ್ನು ಈ ಲೇಖನದಲ್ಲಿ ಹಂಚಿಕೊಳ್ಳಲಾಗಿದೆ.

EPFO – ಹುದ್ದೆಗಳು ಮತ್ತು ಪ್ರಮುಖ ಮಾಹಿತಿ
- ಹುದ್ದೆಯ ಹೆಸರುಗಳು: ಆಡಿಟರ್, ಜೂನಿಯರ್ ಎಂಜಿನಿಯರ್
- ಒಟ್ಟು ಹುದ್ದೆಗಳು: 111
- ಉದ್ಯೋಗ ಸ್ಥಳ: ಅಖಿಲ ಭಾರತ
- ಅಧಿಕೃತ ವೆಬ್‌ಸೈಟ್: epfindia.gov.in
ಪ್ರಮುಖ ದಿನಾಂಕಗಳು ಮತ್ತು ವಿದ್ಯಾರ್ಹತೆ
- ಅರ್ಜಿ ಸಲ್ಲಿಕೆ ಪ್ರಾರಂಭ: 18-07-2025
- ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 17-09-2025
- ವಿದ್ಯಾರ್ಹತೆ: ಡಿಪ್ಲೊಮಾ, BE, B.Tech ಪದವಿ
- ಗರಿಷ್ಠ ವಯೋಮಿತಿ: 56 ವರ್ಷಗಳು
ವೇತನ ಮತ್ತು ಅರ್ಜಿ ಶುಲ್ಕ
- ವೇತನ ಶ್ರೇಣಿ: ₹35,400 – ₹2,08,700 ಪ್ರತಿ ತಿಂಗಳು
- ಅರ್ಜಿ ಶುಲ್ಕ: ಯಾವುದೇ ಶುಲ್ಕ ಇರುವುದಿಲ್ಲ (ಉಚಿತ)
ಆಯ್ಕೆ ಪ್ರಕ್ರಿಯೆ
ಅಭ್ಯರ್ಥಿಗಳನ್ನು ಈ ಕೆಳಗಿನ ಹಂತಗಳ ಮೂಲಕ ಆಯ್ಕೆ ಮಾಡಲಾಗುತ್ತದೆ:
- ಕಿರುಪಟ್ಟಿ (Shortlisting)
- ಲಿಖಿತ ಪರೀಕ್ಷೆ (Written Examination)
- ಸಂದರ್ಶನ (Interview)
EPFO – ಅರ್ಜಿ ಸಲ್ಲಿಸುವ ವಿಧಾನ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆನ್‌ಲೈನ್ ಮತ್ತು ಆಫ್‌ಲೈನ್ ಪ್ರಕ್ರಿಯೆಗಳಿವೆ:
Read this also : Jio-Allianz : ವಿಮಾ ಕ್ಷೇತ್ರದಲ್ಲಿ ಮಹಾ ಬದಲಾವಣೆ: ಜಿಯೋ-ಅಲಯಂಜ್‌ನಿಂದ ಭಾರತಕ್ಕೆ ಭರ್ಜರಿ ಎಂಟ್ರಿ…!
- ಆನ್‌ಲೈನ್ ಅರ್ಜಿ:
- EPFO ಅಧಿಕೃತ ವೆಬ್‌ಸೈಟ್‌ಗೆ (epfindia.gov.in) ಭೇಟಿ ನೀಡಿ.
- ‘Recruitment’ ವಿಭಾಗದಲ್ಲಿ ಆಡಿಟರ್, ಜೂನಿಯರ್ ಎಂಜಿನಿಯರ್ ಹುದ್ದೆಗಳ ಅಧಿಸೂಚನೆಯನ್ನು ಓದಿ.
- ಆನ್‌ಲೈನ್ ಅರ್ಜಿ ನಮೂನೆಯನ್ನು ಸರಿಯಾಗಿ ಭರ್ತಿ ಮಾಡಿ ಸಬ್ಮಿಟ್ ಮಾಡಿ.
- ಸಬ್ಮಿಟ್ ಮಾಡಿದ ಅರ್ಜಿಯ ಪ್ರಿಂಟ್ ತೆಗೆದುಕೊಳ್ಳಿ.
- ಆಫ್‌ಲೈನ್ ಸಲ್ಲಿಕೆ (ಅರ್ಜಿ ನಮೂನೆ ಕಳುಹಿಸಲು ವಿಳಾಸ):
- ಆನ್‌ಲೈನ್‌ನಲ್ಲಿ ಭರ್ತಿ ಮಾಡಿದ ಅರ್ಜಿಯ ಪ್ರತಿಯನ್ನು ಕೆಳಗೆ ನೀಡಿರುವ ವಿಳಾಸಕ್ಕೆ ಕಳುಹಿಸಬೇಕು:
ವಿಳಾಸ: Shri Deepak Arya, Regional Provident Fund Commissioner-II (Recruitment Division), Plate A, Ground Floor, Block II, East Kidwai Nagar, New Delhi-110023
Important Links :
| Apply Online | ClickHere |
| Notification I | ClickHere |
| Notification II | ClickHere |

