Online Love : ಇನ್ಸ್ಟಾಗ್ರಾಂ ನಲ್ಲಿ ಹುಟ್ಟಿದ ಪ್ರೀತಿ, ಪ್ರಿಯತಮೆ 3 ಮಕ್ಕಳ ತಾಯಿ ಎಂದಾಗ ಪ್ರೇಮಿ ಶಾಕ್! ಆದರೂ ಮದುವೆಯಾಗಲು ನಿರ್ಧಾರ….!

Online Love – ಸಾಮಾಜಿಕ ಜಾಲತಾಣಗಳು ಇಂದಿನ ದಿನಗಳಲ್ಲಿ ಪ್ರೀತಿ-ಪ್ರೇಮಕ್ಕೆ ಹೊಸ ವೇದಿಕೆಯಾಗಿವೆ. ಪರಿಚಯವಿಲ್ಲದ ಇಬ್ಬರನ್ನು ಒಂದು ಮಾಡಿ, ಅವರ ಬದುಕನ್ನು ಒಂದಾಗಿಸಿದ ಅದೆಷ್ಟೋ ನಿದರ್ಶನಗಳಿವೆ. ಆದರೆ, ಕೆಲವೊಮ್ಮೆ ಇದೇ ಜಾಲತಾಣಗಳು ವಂಚನೆಗೂ ದಾರಿ ಮಾಡಿಕೊಡುತ್ತವೆ ಎಂಬುದಕ್ಕೆ ಇಲ್ಲೊಂದು ತಾಜಾ ಉದಾಹರಣೆ. ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ಯುವತಿಯನ್ನು ಪ್ರೀತಿಸಿ, ಆಕೆಯನ್ನು ಮದುವೆಯಾಗಲು ಮುಂದಾಗಿದ್ದ ಯುವಕನಿಗೆ, ಆಕೆ ಮದುವೆಯಾಗಿ ಮೂವರು ಮಕ್ಕಳ ತಾಯಿ ಎಂಬ ಸತ್ಯ ತಿಳಿದು ತೀವ್ರ ಆಘಾತಕ್ಕೊಳಗಾಗಿದ್ದಾನೆ.

Instagram Love Story Turns Shocking – Man Finds Lover Is Mother of 3

Online Love – ಕೋಲಾರದ ಯುವಕನಿಗೆ ಚಿಕ್ಕಮಗಳೂರಿನ ಅಪೂರ್ವಳ ಪರಿಚಯ

ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ದ್ವಾರಸಂದ್ರ ಗ್ರಾಮದ 25 ವರ್ಷದ ನವನೀತ್, ಇನ್‌ಸ್ಟಾಗ್ರಾಮ್‌ನಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೊಸಕೆರೆ ಗ್ರಾಮದ ಅಪೂರ್ವ ಎಂಬುವವರ ಪರಿಚಯ ಮಾಡಿಕೊಂಡಿದ್ದ. ಈ ಪರಿಚಯ ಬೆಳೆದು ಪ್ರೇಮಕ್ಕೆ ತಿರುಗಿದೆ. ಅಪೂರ್ವ, ನವನೀತ್‌ಗೆ ಮದುವೆಯಾಗುವುದಾಗಿ ನಂಬಿಸಿದ್ದಳು. ಅಲ್ಲದೆ, ಆತನಿಂದ ಹಣವನ್ನೂ ಪಡೆದಿದ್ದಳು ಎಂದು ತಿಳಿದುಬಂದಿದೆ.

Online Love – ಬ್ಲಾಕ್‌ಲಿಸ್ಟ್ ಮಾಡಿ ಮರೆಯಾದ ಅಪೂರ್ವ

ಕೆಲವು ದಿನಗಳ ನಂತರ ಅಪೂರ್ವ, ನವನೀತ್‌ನ ಮೊಬೈಲ್ ನಂಬರ್ ಅನ್ನು ಬ್ಲಾಕ್‌ಲಿಸ್ಟ್‌ಗೆ ಹಾಕಿ ಸಂಪರ್ಕ ಕಡಿತಗೊಳಿಸಿದ್ದಾಳೆ. ಇದರಿಂದ ಗೊಂದಲಕ್ಕೊಳಗಾದ ನವನೀತ್, ತನ್ನ ಪ್ರಿಯತಮೆಯನ್ನು ಹುಡುಕಿಕೊಂಡು ಚಿಕ್ಕಮಗಳೂರಿಗೆ ತೆರಳಿದ್ದಾನೆ.

Read this also : Love Story : 60ರ ವೃದ್ಧೆ, 30ರ ಯುವಕನೊಂದಿಗೆ ಪರಾರಿ! ಅತ್ತ ಸೊಸೆಯರ ಒಡವೆಗೂ ಕನ್ನ…!

ಪ್ರೇಯಸಿ ಮೂವರು ಮಕ್ಕಳ ತಾಯಿ!

ಚಿಕ್ಕಮಗಳೂರಿಗೆ ತೆರಳಿದ ನವನೀತ್‌ಗೆ ಅಲ್ಲಿ ತೀವ್ರ ಆಘಾತ ಕಾದಿತ್ತು. ಆತ ಪ್ರೀತಿಸುತ್ತಿದ್ದ ಅಪೂರ್ವ, ಈಗಾಗಲೇ ಮದುವೆಯಾಗಿ ಮೂವರು ಮಕ್ಕಳ ತಾಯಿ ಎಂಬ ಸತ್ಯ ಆತನಿಗೆ ತಿಳಿದುಬಂದಿದೆ. ಈ ವಿಷಯವನ್ನು ಅಪೂರ್ವ ನವನೀತ್‌ನಿಂದ ಮುಚ್ಚಿಟ್ಟಿದ್ದಳು. ತಾನು ಹುಡುಕಿಕೊಂಡು ಬಂದ ಪ್ರಿಯತಮೆ ಕೇವಲ ಹುಡುಗಿಯಲ್ಲ, ಬದಲಾಗಿ ವಿವಾಹಿತೆ ಮತ್ತು ಮೂವರು ಮಕ್ಕಳ ತಾಯಿ ಎಂಬುದು ಗೊತ್ತಾಗುತ್ತಿದ್ದಂತೆಯೇ ನವನೀತ್ ಕಂಗಾಲಾಗಿದ್ದಾನೆ.

Instagram Love Story Turns Shocking – Man Finds Lover Is Mother of 3

ಇನ್ನೂ ಯುವಕ ತೀವ್ರ ಆಘಾತಕ್ಕೊಳಗಾದರೂ, ನವನೀತ್ ನ್ಯಾಯಕ್ಕಾಗಿ ಚಿಕ್ಕಮಗಳೂರು ಎಸ್‌ಪಿ ಕಚೇರಿಯಲ್ಲಿ ದೂರು ದಾಖಲಿಸಿದ್ದಾನೆ. ಅಷ್ಟೇ ಅಲ್ಲದೆ, “ಅವಳಿಗೆ ಮದುವೆಯಾಗಿದ್ದರೆ ಏನಂತೆ? ಅವಳನ್ನೇ ಮದುವೆಯಾಗುತ್ತೇನೆ, ಮಕ್ಕಳನ್ನೂ ಸಾಕುತ್ತೇನೆ” ಎಂದು ಹೇಳಿಕೆ ನೀಡಿದ್ದಾನೆ.

Leave a Comment

Your email address will not be published. Required fields are marked *

Scroll to Top