ED Raid: ಕಾಂಗ್ರೇಸ್ ಶಾಸಕ ಸುಬ್ಬಾರೆಡ್ಡಿ ಮೇಲೆ ಇಡಿ ದಾಳಿ, ಈ ದಾಳಿ ರಾಜಕೀಯ ಪ್ರೇರಿತ, ಕಾಂಗ್ರೇಸ್ ಮುಖಂಡರ ಪ್ರತಿಭಟನೆ…!

ED Raid – ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರ ಬೆಂಗಳೂರಿನ ನಿವಾಸ, ಕಚೇರಿಗಳು ಮತ್ತು ಅವರ ವ್ಯಾಪಾರ ಪಾಲುದಾರರ ಆಸ್ತಿಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದಾರೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಅಡಿಯಲ್ಲಿ ಈ ಪರಿಶೀಲನೆ ನಡೆಸಲಾಗುತ್ತಿದೆ.
ED raid at MLA Subbareddy’s residence and offices in Bengaluru

ED Raid – ಏಕಕಾಲಕ್ಕೆ ಐದು ಕಡೆ ದಾಳಿ:

ಬೆಂಗಳೂರಿನಲ್ಲಿ ಒಟ್ಟು ಐದು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಗಿದ್ದು, ಸುಬ್ಬಾರೆಡ್ಡಿ ಅವರ ಮನೆ, ಕಚೇರಿ ಹಾಗೂ ಅವರ ಬ್ಯುಸಿನೆಸ್ ಪಾಲುದಾರರ ಮನೆ ಮತ್ತು ಕಚೇರಿಗಳನ್ನು ಪರಿಶೀಲನೆಗೆ ಒಳಪಡಿಸಲಾಗಿದೆ. ಇ.ಡಿ. ಅಧಿಕಾರಿಗಳು ಫಾರಿನ್ ಎಕ್ಸ್ಚೇಂಜ್ ಮ್ಯಾನೇಜ್ಮೆಂಟ್ ಆ್ಯಕ್ಟ್ (FEMA) ಅಡಿ ಈ ದಾಳಿಗಳನ್ನು ನಡೆಸುತ್ತಿದ್ದಾರೆ. ವಿದೇಶಿ ವಿನಿಮಯ ನಿರ್ವಹಣೆಗೆ ಸಂಬಂಧಿಸಿದ ಅಕ್ರಮಗಳ ಕುರಿತು ತನಿಖೆ ನಡೆಯುತ್ತಿದೆ ಎನ್ನಲಾಗಿದೆ.
ED raid at MLA Subbareddy’s residence and offices in Bengaluru

ಸುಬ್ಬಾರೆಡ್ಡಿ ವಿರುದ್ಧದ ಆರೋಪಗಳು:

ಶಾಸಕ ಸುಬ್ಬಾರೆಡ್ಡಿ ಅವರು ಮಲೇಷಿಯಾ, ಹಾಂಗ್ ಕಾಂಗ್ ಮತ್ತು ಜರ್ಮನಿಯಲ್ಲಿ ಆಸ್ತಿಗಳನ್ನು ಹೊಂದಿದ್ದಾರೆ ಎನ್ನಲಾಗಿದೆ. ಅಲ್ಲದೆ, ವಿದೇಶಿ ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ಹೊಂದಿರುವ ಆರೋಪವೂ ಅವರ ಮೇಲಿದೆ. ಅಕ್ರಮವಾಗಿ ವಾಹನಗಳ ಖರೀದಿ, ಹಣ ಹೂಡಿಕೆ ಸೇರಿದಂತೆ ವಿವಿಧ ಆರೋಪಗಳ ಅಡಿ ಇ.ಡಿ. ಅಧಿಕಾರಿಗಳು ಈ ಪರಿಶೀಲನೆ ನಡೆಸುತ್ತಿದ್ದಾರೆ.

ಇಡಿ ದಾಳಿ ರಾಜಕೀಯ ಪ್ರೇರಿತ ಎಂದು ಕಾಂಗ್ರೇಸ್ ಮುಖಂಡರು ಪ್ರತಿಭಟನೆ

ಇನ್ನೂ ಕಾಂಗ್ರೇಸ್ ಶಾಸಕ ಸುಬ್ಬಾರೆಡ್ಡಿಯವರ ಮೇಲೆ ಇಡಿ ದಾಳಿಯನ್ನು ಖಂಡಿಸಿ ಗುಡಿಬಂಡೆ ಪಟ್ಟಣದ ಮುಖ್ಯರಸ್ತೆಯಲ್ಲಿ ಕಾಂಗ್ರೇಸ್ ಮುಖಂಡರು ಪ್ರತಿಭಟನೆ ನಡೆಸಿದರು. ಇದೇ ಸಮಯದಲ್ಲಿ ಕೇಂದ್ರ ನಾಯಕರಾದ ನರೇಂದ್ರ ಮೋದಿ, ಅಮಿತ್ ಶಾ, ಇಡಿ ಪ್ರತಿಕೃತಿ ದಹಿಸಿ ಆಕ್ರೋಷ ಹೊರಹಾಕಿದರು. ಜೊತೆಗೆ ಈ ದಾಳಿಯನ್ನು ನಿಲ್ಲಿಸದೇ ಇದ್ದರೇ ರಾಜ್ಯವ್ಯಾಪಿ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ED raid at MLA Subbareddy’s residence and offices in Bengaluru

ಈ ವೇಳೆ ಮಾತನಾಡಿದ ಮುಖಂಡರು, ಕೇಂದ್ರ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಚುನಾವಣೆ ಮೂಲಕ ಗೆಲ್ಲಲೂ ಆಗದೇ ನಮ್ಮ ರಾಜ್ಯದ ಶಾಸಕರ ಹಾಗೂ ಸಂಸದರ ಮನೆಗಳ ಮನೆ ಐಟಿ ಹಾಗೂ ಇಡಿ ದಾಳಿಗಳನ್ನು ಮಾಡಿಸಿ ಅವರ ಶಕ್ತಿ ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿರುವ 224 ಶಾಸಕರ ಪೈಕಿ, ಹೆಚ್ಚು ಅಭಿವೃದ್ದಿ ಕೆಲಸ ಮಾಡಿರುವ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ಇಂತಹ ಅಭಿವೃದ್ದಿ ಕೆಲಸಗಳನ್ನು ಮಾಡಿದ ಶಾಸಕರ ಮನೆ ಮೇಲೆ ಕಿಡಿಗೇಡಿಗಳು ಅವರನ್ನು ನೇರವಾಗಿ ಎದುರಿಸಲು ಶಕ್ತಿಯಿಲ್ಲದೇ ಇಂತಹ ದಾಳಿಗಳನ್ನು ನಡೆಸುತ್ತಿದ್ದಾರೆ, ಅವರು ಯಾವುದೇ ಆಕ್ರಮ ಆಸ್ತಿಗಳನ್ನು ಹೊಂದಿಲ್ಲ, ಅವರು ಏನೇ ಮಾಡಿದರು ಕಾನೂನು ವ್ಯಾಪ್ತಿಯಲ್ಲಿ ಮಾಡುತ್ತಾರೆ.

ED raid at MLA Subbareddy’s residence and offices in Bengaluru

ನಮ್ಮ ಶಾಸಕರು 2018 ರಲ್ಲಿ ಅಪರೇಷನ್ ಕಮಲಕ್ಕೆ ತುತ್ತಾಗದೇ ಕಾಂಗ್ರೆಸ್ ಪಕ್ಷದ ನಿಷ್ಟಾವಂತ ಶಾಸಕರಾಗಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಶ್ರಮಿಸಿದ್ದಾರೆ. ಆದ್ದರಿಂದ ಬಿಜೆಪಿ ಪಕ್ಷದವರು ಇಡಿ ಮತ್ತು ಐಟಿಯನ್ನು ದುರ್ಬಳಕೆ ಮಾಡಿಕೊಂಡು ದಾಳಿ ಮಾಡುವುದರ ಮೂಲಕ ಸೇಡನ್ನು ತಿರಿಸಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನಿಮಗೆ ಮತದಾರರುತಕ್ಕ ಪಾಠ ಕಲಿಸುತ್ತಾರೆಂದು ಕಾಂಗ್ರೇಸ್ ಮುಖಂಡರು ಆಕ್ರೋಷ ಹೊರಹಾಕಿದರು.

Leave a Comment

Your email address will not be published. Required fields are marked *

Scroll to Top