ಕುಮಾರಸ್ವಾಮಿ ಸಹ ಬಂಧನವಾಗೋ ಸಮಯ ಹತ್ತಿರವಿದೆ ಎಂದ ಕೈ ಶಾಸಕ, ಅವರೇನೂ ಸಾಚಾನಾ ಎಂದ ಶಾಸಕ….!

ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿರುವ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ಕ್ಕೆ ಸಂಬಂಧಿಸಿದಂತೆ ರಾಜಕೀಯ ನಾಯಕರುಗಳು ಅವರದ್ದೆ ಆದ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಇದೀಗ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿಯವರೂ ಸಹ ಶೀಘ್ರದಲ್ಲೇ ಬಂಧನವಾಗಲಿದ್ದಾರೆ. ಅವರೇನೂ ಸಾಚಾನಾ ಎಂದು ಆರೋಪ ಮಾಡಿದ್ದಾರೆ. ಹೀಗಂತ ಹೇಳಿದ್ದು ಮದ್ದೂರು ಕಾಂಗ್ರೇಸ್ ಶಾಸಕ ಕದಲೂರು ಉದಯ್ ಹೊಸ ಬಾಂಬ್ ಸಿಡಿಸಿದ್ದಾರೆ.

congress mla uday comments on HDK 1

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಕಾಂಗ್ರೇಸ್ ಹಾಗೂ ಜೆಡಿಎಸ್ ನಾಯಕರು ಆರೋಪ ಪ್ರತ್ಯಾಪರೋಪಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇದೀಗ ಮಾಜಿ ಸಿಎಂ ವಿರುದ್ದವೇ ಕಾಂಗ್ರೇಸ್ ಶಾಸಕ ಕದಲೂರು ಉದಯ್ ಕುಟುಕಿದ್ದಾರೆ. ಪೆನ್ ಡ್ರೈವ್ ಪ್ರಕರಣದ ಸಂಬಂಧ ಕಳೆದ ಶುಕ್ರವಾರ ಹೊಳೆನರಸಿಪುರದ ಬಿಜೆಪಿ ಮುಖಂಡ ಜಿ.ದೇವರಾಜೇಗೌಡ ಬಂಧನವಾಗಿದೆ. ಶೀಘ್ರದಲ್ಲೇ ಕುಮಾರಸ್ವಾಮಿಯವರ ಬಂಧನವಾಗಲಿದೆ. ಅವರೇನು ಸಾಚಾನ ಎಂದು ಹೇಳುವ ಮೂಲಕ ಮತ್ತೊಂದು ಚರ್ಚೆ ಶುರು ಮಾಡಿದ್ದಾರೆ.

ಇನ್ನೂ ಶಾಸಕ ಉದಯ್ ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಅವರ ವೈಯುಕ್ತಿಕ ಜೀವನ ಕುರಿತು ಟೀಕೆ ಮಾಡಿದ್ದಾರೆ. ಕುಮಾರಸ್ವಾಮಿಯವರು ಜೈಲಿಗೆ ಹೋಗುವ ಕಾಲ ಹತ್ತಿರದಲ್ಲೇ ಇದೆ. ಅವರೇನು ಒಳ್ಳೆಯ ವ್ಯಕ್ತಿಯಲ್ಲ. ಅವರ ವಿರುದ್ದವೂ ಲೈಂಗಿಕ ಕಿರುಕುಳ, ದೌರ್ಜನದ ಬಗ್ಗೆ ನಾವು ಕೇಳಿದ್ದೇವೆ. ಈಗಾಗಲೇ ಜೆಡಿಎಸ್ ನಾಯಕ ರೇವಣ್ಣ ಜೈಲಿನಲ್ಲಿದ್ದಾರೆ. ಅವರ ಸಹೋದರ ಕುಮಾರಸ್ವಾಮಿ ಸಹ ಜೈಲಿಗೆ ಹೋಗಲಿದ್ದಾರೆ. ಪೆನ್ ಡ್ರೈವ್ ಪ್ರಕರಣದ ಬಳಿಕ ಕುಮಾರಸ್ವಾಮಿ ವಿರುದ್ದವೂ ದೂರು ನೀಡಲಿದ್ದಾರೆ ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ.

congress mla uday comments on HDK 2

ಮಾಜಿ ಸಿಎಂ ಕುಮಾರಸ್ವಾಮಿಯವರ ವಿರುದ್ದವೂ ಮುಂದಿನ ದಿನಗಳಲ್ಲಿ ಮಹಿಳೆ ದೂರು ನೀಡುತ್ತಾರೆ. ರಾಧಿಕಾ ರವರನ್ನು ಅವರು ಪತ್ನಿಯಂತೆ ಕಾಣುತ್ತಾರೆ. ಮಗಳ ವಯಸ್ಸಿನ ಅವರನ್ನು ಪುಸಲಾಯಿಸಿ ಮಗಳನ್ನು ಕೈಗೆ ಕೊಟ್ಟಿದ್ದಾರೆ. ಸದ್ಯ ಅವರನ್ನು ರೋಡಿಗೆ ಬಿಟ್ಟಿದ್ದಾರೆ. ಸಿಎಂ ಆದಂತಹವರು ಇಂತಹ ನೀಚ ಕೆಲಸ ಮಾಡುತ್ತಾರಾ, ಆ ರೀತಿಯಾದರೇ ಕುಮಾರಸ್ವಾಮಿಯವರೇನು ಸಾಚಾನಾ? ಅವರು ತಮ್ಮ ರಾಜಕೀಯದ ಜೀವನದುದ್ದಕ್ಕೂ ಬೇರೆಯವರನ್ನು ಬೆದರಿಸಿಕೊಂಡು ಬಂದಿದ್ದಾರೆ. ಅಪಪ್ರಚಾರ ಮಾಡಿ ಬೇರೆಯವರನ್ನು ಮುಳುಗಿಸಿದ್ದೇ ಅವರ ಸಾಧನೆ ಎಂದು ಕುಟುಕಿದ್ದಾರೆ.

Leave a Comment

Your email address will not be published. Required fields are marked *

Scroll to Top