Farewell : ಗುಡಿಬಂಡೆ ಪದವಿ ಕಾಲೇಜಿನ ಪ್ರೊ. ಕೃಷ್ಣಪ್ಪರವರಿಗೆ ಹೃದಯಪೂರ್ವಕ ಬೀಳ್ಕೊಡುಗೆ….!

Farewell – ಚಿಕ್ಕಬಳ್ಳಾಪುರ ಜಿಲ್ಲೆಯ  ಗುಡಿಬಂಡೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದ ಪ್ರೊ ಕೃಷ್ಣಪ್ಪ ರವರು ವಯೋ ನಿವೃತ್ತಿಯಾಗಿದ್ದು, ಅವರಿಗೆ ಕಾಲೇಜು ಆಡಳಿತ ಮಂಡಳಿ, ಸಿಡಿಸಿ ಕಮಿಟಿ ಹಾಗೂ ಸರ್ಕಾರಿ ನೌಕರರ ಸಂಘದಿಂದ ಸನ್ಮಾನಿಸಿ ಆತ್ಮೀಯವಾಗಿ (Farewell) ಬೀಳ್ಕೊಡಲಾಯಿತು.

Prof. Krishnappa receiving farewell felicitation at Gudibande Government First Grade College, surrounded by dignitaries, staff, and students during his retirement ceremony

Farewell – ಪ್ರೊ. ಕೃಷ್ಣಪ್ಪರವರ ಅಮೂಲ್ಯ ಸೇವೆಗೆ ಶ್ಲಾಘನೆ

ಈ ವೇಳೆ ಕಾಲೇಜು ಅಭಿವೃದ್ದಿ ಸಮಿತಿಯ ಸದಸ್ಯ ಕೃಷ್ಣೇಗೌಡ ಮಾತನಾಡಿ, ಗುಡಿಬಂಡೆ ತಾಲೂಕಿನಲ್ಲಿ ಕೆಲಸ ಮಾಡಲು ಅಧಿಕಾರಿಗಳು ತುಂಬಾ ಅದೃಷ್ಟ ಮಾಡಿರಬೇಕು. ಇಲ್ಲಿ ಯಾವುದೇ ರೀತಿಯ ಸಮಸ್ಯೆಗಳಾಗುವುದಿಲ್ಲ. ಈ ಹಿಂದೆ ಅನೇಕ ಅಧಿಕಾರಿಗಳು ಗುಡಿಬಂಡೆ ಎಂದರೇ ಸಾಕು ಹಿಂಜರಿಕೆ ತೋರುತ್ತಿದ್ದರು. ಆದರೆ ಇದೀಗ ಉತ್ತಮವಾದ ವಾತಾವರಣ ನಿರ್ಮಾಣವಾಗಿದೆ. ಈ ನಿಟ್ಟಿನಲ್ಲಿ ಪ್ರೊ.ಕೃಷ್ಣಪ್ಪ ರವರು ತಮ್ಮ ಸೇವಾವಧಿಯಲ್ಲಿ ಉತ್ತಮವಾದ ಸೇವೆ ಸಲ್ಲಿಸಿದ್ದಾರೆ. ಪ್ರಭಾರಿ ಪ್ರಾಂಶುಪಾಲರಾಗಿ, ಉಪನ್ಯಾಸಕರಾಗಿ ವಿದ್ಯಾರ್ಥಿಗಳಿಗೆ ಸರಿಯಾದ ರೀತಿಯಲ್ಲಿ ವಿದ್ಯಾಭ್ಯಾಸ ನೀಡುವುದರ ಜೊತೆಗೆ ಕಾಲೇಜಿನ (Farewell) ಅಭಿವೃದ್ದಿಯಲ್ಲಿ ಭಾಗವಾಗಿದ್ದಾರೆ. ಕಾಲೇಜಿಗೆ ನ್ಯಾಕ್ ಗ್ರೇಡ್ ಸಿಗಲು ಸಹ ಕೃಷ್ಣಪ್ಪರವರ ಪಾತ್ರ ತುಂಬಾನೆ ಇದೆ. ಸರ್ಕಾರಿ ನೌಕರರಿಗೆ ವಯೋನಿವೃತ್ತಿ ಎಂಬುದು ಕಡ್ಡಾಯವಾಗಿದ್ದು, ಅವರು ಇಂದು ಕಾಲೇಜು ಬಿಟ್ಟು ಹೋಗುತ್ತಿರುವುದು ಕಾಲೇಜಿಗೆ ಹಾಗೂ ವಿದ್ಯಾರ್ಥಿಗಳಿಗೆ ನಷ್ಟವಾಗಿದೆ ಎಂದರು.

ಗುಡಿಬಂಡೆ ಪ್ರೀತಿ ಮರೆಯಲಾಗದು: ಕೃಷ್ಣಪ್ಪ

ಬಳಿಕ ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರೊ.ಕೃಷ್ಣಪ್ಪ, ನನ್ನ ಸೇವಾವಧಿಯಲ್ಲಿ ನಾನು ವಿದ್ಯಾರ್ಥಿಗಳಿಗೆ ಎಂದೂ ಅನ್ಯಾಯ ಮಾಡಿಲ್ಲ. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವುದೇ ನನ್ನ ಮುಖ್ಯ ಗುರಿಯಾಗಿತ್ತು. ಇನ್ನೂ ಗುಡಿಬಂಡೆಯಲ್ಲಿ ಕಾಲೇಜಿನ ಸಿಬ್ಬಂದಿ, ಸಾರ್ವಜನಿಕರು ಸೇರಿದಂತೆ ಎಲ್ಲರೂ ನನಗೆ ಒಳ್ಳೆಯ ಸಹಕಾರ ನೀಡಿದ್ದಾರೆ. ಇದೇ ರೀತಿ (Farewell) ಎಲ್ಲಾ ಅಧಿಕಾರಿಗಳಿಗೂ ಸಹಕಾರ ನೀಡಬೇಕು. ನಾನು ಎಂದಿಗೂ ಗುಡಿಬಂಡೆಯಲ್ಲಿ ಕೆಲಸ ನಿರ್ವಹಿಸಿದ ಕ್ಷಣಗಳನ್ನು ಮರೆಯುವುದಿಲ್ಲ ಎಂದು ಭಾವುಕರಾದರು.

Prof. Krishnappa receiving farewell felicitation at Gudibande Government First Grade College, surrounded by dignitaries, staff, and students during his retirement ceremony

Read this also : ಮಾದಕ ವಸ್ತುಗಳ ಸೇವನೆಯಿಂದ ಕುಟುಂಬವೇ ನಾಶವಾಗಬಹುದು: ನ್ಯಾ.ಸವಿತಾ

ಸಮಾರಂಭದಲ್ಲಿ ಗಣ್ಯರ ಉಪಸ್ಥಿತಿ

ಈ ವೇಳೆ ಕಾಲೇಜಿನ ಪ್ರಾಂಶುಪಾಲ ಅಫ್ಜಲ್ ಬಿಜಿಲಿ, ಪ್ರೊ ನಯಾಜ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ವಿ.ನಾರಾಯಣಸ್ವಾಮಿ. ಎಸ್.ಸಿ/ಎಸ್.ಟಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಶ್ರೀರಾಮಪ್ಪ, ಶಿಕ್ಷಕರ ಸಂಘದ ಶ್ರೀರಾಮರೆಡ್ಡಿ, ಸಾರ್ವಜನಿಕ ಆಸ್ಪತ್ರೆಯ ಡಾ.ಪ್ರದೀಪ್ ಸೇರಿದಂತೆ ಕಾಲೇಜು ಅಭಿವೃದ್ದಿ ಸಮಿತಿ ಸದಸ್ಯರು, ಕಾಲೇಜಿನ ಉಪನ್ಯಾಸಕರು ಹಾಗೂ ಸಿಬ್ಬಂದಿ ಸೇರಿದಂತೆ ಹಲವರು ಇದ್ದರು.

Leave a Comment

Your email address will not be published. Required fields are marked *

Scroll to Top