HomeTechnologyHeart Attack : 22 ವರ್ಷದ ಪದವೀಧರೆ ಹೃದಯಾಘಾತಕ್ಕೆ ಬಲಿ, 24 ಗಂಟೆಗಳಲ್ಲಿ ಹಾಸನದ ಮತ್ತಿಬ್ಬರು...

Heart Attack : 22 ವರ್ಷದ ಪದವೀಧರೆ ಹೃದಯಾಘಾತಕ್ಕೆ ಬಲಿ, 24 ಗಂಟೆಗಳಲ್ಲಿ ಹಾಸನದ ಮತ್ತಿಬ್ಬರು ಹೃದಯಾಘಾತಕ್ಕೆ ಬಲಿ…!

Heart Attack – ಹೃದಯಾಘಾತ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮತ್ತೊಂದು ಹೃದಯವಿದ್ರಾವಕ ಘಟನೆ ವರದಿಯಾಗಿದೆ. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಕಟ್ಟಳ್ಳಿ ಗ್ರಾಮ ಮೂಲದ 22 ವರ್ಷದ ಯುವತಿ ಸುಪ್ರಿಯಾ ಬೆಂಗಳೂರಿನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ಘಟನೆ ಯುವ ಸಮುದಾಯದಲ್ಲಿ ಹೆಚ್ಚುತ್ತಿರುವ ಹೃದಯ ಸಂಬಂಧಿ ಸಮಸ್ಯೆಗಳ ಬಗ್ಗೆ ಗಂಭೀರ ಕಳವಳ ಮೂಡಿಸಿದೆ.

22-year-old Supriya and 32-year-old Yogesh die of heart attack in Bengaluru, part of alarming trend in Hassan district

Heart Attack – ದುರದೃಷ್ಟಕರ ಘಟನೆ ವಿವರ

ಕಟ್ಟಳ್ಳಿ ಗ್ರಾಮದ ಕೃಷ್ಣಮೂರ್ತಿ ಮತ್ತು ರೂಪಾ ದಂಪತಿಯ ಪುತ್ರಿಯಾಗಿದ್ದ ಸುಪ್ರಿಯಾ, ಕುಟುಂಬ ಸಮೇತ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ವಾಸವಿದ್ದರು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ಸುಪ್ರಿಯಾ, ತಮ್ಮ ವಿದ್ಯಾಭ್ಯಾಸದ ಜೊತೆಗೆ ಬೆಂಗಳೂರಿನಲ್ಲಿ ಕೆಲಸವನ್ನೂ ಮಾಡುತ್ತಿದ್ದರು.

ನಿನ್ನೆ (ಜೂನ್ 25) ಸುಪ್ರಿಯಾ ಮನೆಯಲ್ಲಿದ್ದಾಗ ಏಕಾಏಕಿ ತೀವ್ರ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ತಮ್ಮ ಪೋಷಕರಿಗೆ ತಿಳಿಸಿ, ನಂತರ ಕುಸಿದುಬಿದ್ದಿದ್ದಾರೆ. ಆತಂಕಗೊಂಡ ಪೋಷಕರು ಕೂಡಲೇ ಸುಪ್ರಿಯಾ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ದುರದೃಷ್ಟವಶಾತ್, ಆಸ್ಪತ್ರೆಗೆ (Heart Attack) ತಲುಪುವಷ್ಟರಲ್ಲಿ ಸುಪ್ರಿಯಾ ಕೊನೆಯುಸಿರೆಳೆದಿದ್ದರು ಎಂದು ತಿಳಿದುಬಂದಿದೆ.

32 ವರ್ಷದ ಆಟೋ ಚಾಲಕ ಯೋಗೇಶ್ ಸಾವು

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಎಂ. ಹೊನ್ನೇನಹಳ್ಳಿ ಗ್ರಾಮದ ಯೋಗೇಶ್ (32) ಬೆಂಗಳೂರಿನಲ್ಲಿ ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದರು. ಕೇವಲ ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದ ಯೋಗೇಶ್, ಬುಧವಾರ (ಜೂನ್ 25) ಬೆಳಗ್ಗೆ ಆಟೋ ಓಡಿಸಿ ಮನೆಗೆ ಬಂದು ಮಲಗಿದ್ದಾರೆ. ದುರದೃಷ್ಟವಶಾತ್, (Heart Attack) ಮಲಗಿದ್ದಲ್ಲಿಯೇ ಅವರು ಸಾವನ್ನಪ್ಪಿದ್ದಾರೆ. ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಹೃದಯಾಘಾತದಿಂದ ಸಾವನ್ನಪ್ಪಿರುವುದನ್ನು ಖಚಿತಪಡಿಸಿದ್ದಾರೆ. ಈ ಸುದ್ದಿ ಯೋಗೇಶ್ ಕುಟುಂಬದಲ್ಲಿ ಬರಸಿಡಿಲು ಬಡಿದಂತಾಗಿದೆ.

heart-attack-hassan-young-deaths-2025

ಒಂದು ತಿಂಗಳಲ್ಲಿ 14 ಸಾವು: ಆತಂಕಕಾರಿ ಅಂಕಿಅಂಶಗಳು (ಸಂಗ್ರಹ ಮಾಹಿತಿ)

ಕಳೆದೊಂದು ತಿಂಗಳಿನಿಂದ ಹಾಸನ ಜಿಲ್ಲೆಯಲ್ಲಿ (Heart Attack) ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಯೋಗೇಶ್ ಮತ್ತು ಸುಪ್ರಿಯಾ ಅವರ ಸಾವಿನೊಂದಿಗೆ ಈ ಸಂಖ್ಯೆ 14ಕ್ಕೆ ಏರಿದೆ. ಈ ವಿಚಾರವನ್ನು ವಿವಿಧ ಮೂಲಗಳಿಂದ ಸಂಗ್ರಹಿಸಿ ಇಲ್ಲಿ ಹಂಚಿಕೊಳ್ಳಲಾಗಿದೆ. Read this also : ಶಾಲೆಗೆ ನಡೆದುಕೊಂಡು ಹೋಗುವಾದ ಹೃದಯಾಘಾತಕ್ಕೆ ಬಲಿಯಾದ 10ನೇ ತರಗತಿ ವಿದ್ಯಾರ್ಥಿನಿ…!

  • ಮೇ 20: ಅರಕಲಗೂಡು ತಾಲೂಕಿನ ಅಭಿಷೇಕ್ ಮತ್ತು ಹೊಳೆನರಸೀಪುರದ 20 ವರ್ಷದ ವಿದ್ಯಾರ್ಥಿನಿ ಸಂಧ್ಯಾ ನಿಧನ.
  • ಮೇ 28: ಮತ್ತೋರ್ವ ವಿದ್ಯಾರ್ಥಿನಿ ಸಾವು.
  • ಜೂನ್ 11: ಹೊಳೆನರಸೀಪುರದ ಯುವಕ ನಿಶಾಂತ್ ಸಾವು.
  • ಜೂನ್ 12: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಸಾರಿಗೆ ಸಿಬ್ಬಂದಿ ನಾಗಪ್ಪ ಸಾವು, ಅದೇ ದಿನ ಹಾಸನ ನಗರಸಭೆ ಮಾಜಿ ಸದಸ್ಯ ನೀಲಕಂಠಪ್ಪ ನಿಧನ.
  • ಜೂನ್ 13: ಚನ್ನರಾಯಪಟ್ಟಣದ ಗ್ರಾಮ ಲೆಕ್ಕಿಗ ದೇವರಾಜ್ ಕಾರಿನಲ್ಲೇ ಹೃದಯಾಘಾತಕ್ಕೆ ಬಲಿ. ಅದೇ ದಿನ ಸತೀಶ್ ಎಂಬುವರು ಹಠಾತ್ ಸಾವಿಗೀಡಾಗಿದ್ದರು.
  • ಜೂನ್ 14: ಕಾಂತರಾಜು ನಿಧನ.
  • ಜೂನ್ 18: ಅರಸೀಕೆರೆ ಮೂಲದ ಶಿರಾದಲ್ಲಿ ಕೆಲಸ ಮಾಡುತ್ತಿದ್ದ ಅರಣ್ಯ ಇಲಾಖೆ ನೌಕರ ನವೀನ್ ಸಾವು.
  • ಜೂನ್ 21: ಬೇಲೂರಿನ ನಿಶಾದ್ ಅಹ್ಮದ್ ಹಾಗೂ ಹಾಸನ ಮೂಲದ ಚೇತನ್ ಹೃದಯಾಘಾತಕ್ಕೆ ಬಲಿಯಾಗಿದ್ದರು.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular