Thursday, February 12, 2026
HomeNationalTelangana Crime : ತೆಲಂಗಾಣದಲ್ಲಿ ನಡೆದ ಘಟನೆ, ಪ್ರೇಮ ವಿರೋಧಿಸಿದ್ದಕ್ಕೆ ತಾಯಿಯನ್ನೇ ಕೊಂದ 10ನೇ ಕ್ಲಾಸ್...

Telangana Crime : ತೆಲಂಗಾಣದಲ್ಲಿ ನಡೆದ ಘಟನೆ, ಪ್ರೇಮ ವಿರೋಧಿಸಿದ್ದಕ್ಕೆ ತಾಯಿಯನ್ನೇ ಕೊಂದ 10ನೇ ಕ್ಲಾಸ್ ವಿದ್ಯಾರ್ಥಿನಿ…!

Telangana Crime – ತೆಲಂಗಾಣದ ಜೆಡ್ಡಿಮೆಟ್ಲಾದಲ್ಲಿ ನಡೆದ ಆಘಾತಕಾರಿ ಘಟನೆಯೊಂದು ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ತನ್ನ ಪ್ರೇಮ ಸಂಬಂಧವನ್ನು ವಿರೋಧಿಸಿದ್ದಕ್ಕೆ, ಕೇವಲ 16 ವರ್ಷದ ಮಗಳೊಬ್ಬಳು ತನ್ನ ಪ್ರಿಯಕರ ಮತ್ತು ಸಹೋದರನೊಂದಿಗೆ ಸೇರಿಕೊಂಡು ಸ್ವಂತ ತಾಯಿಯನ್ನೇ ಅಮಾನುಷವಾಗಿ ಹತ್ಯೆ ಮಾಡಿದ್ದಾಳೆ. ಈ ಘಟನೆ ಸ್ಥಳೀಯರಲ್ಲಿ ತೀವ್ರ ಆಘಾತ ಮತ್ತು ಆತಂಕವನ್ನು ಮೂಡಿಸಿದೆ.

Telangana teenage girl accused of murdering mother with help of boyfriend and brother over love affair in Jeddimetla suburb of Hyderabad

Telangana Crime – ಪ್ರೀತಿ ಪ್ರೇಮದ ಬೆನ್ನತ್ತಿದ್ದ ಮಗಳು: ತಾಯಿಯ ಬುದ್ಧಿಮಾತುಗಳು ಕೊಲೆಯಲ್ಲಿ ಅಂತ್ಯ

10ನೇ ತರಗತಿಯಲ್ಲಿ ಓದುತ್ತಿದ್ದ ಈ ಬಾಲಕಿ, ತನ್ನ ಪ್ರೇಮ ಸಂಬಂಧದ ವಿಷಯ ತಾಯಿ ಅಂಜಲಿ (39) ಅವರಿಗೆ ತಿಳಿದಾಗ ತೀವ್ರ ಕೋಪಗೊಂಡಿದ್ದಳು. ಮಗಳಿಬ್ಬರ ಪ್ರೇಮ ವಿರೋಧಿಸಿ, ಅಂಜಲಿ ಬುದ್ಧಿ ಹೇಳಲು ಪ್ರಯತ್ನಿಸಿದ್ದೇ ಈ ದುರಂತಕ್ಕೆ ಕಾರಣವಾಗಿದೆ. ತಾಯಿಯ ಮಾತಿನಿಂದ ಸಿಟ್ಟಾಗಿದ್ದ ಬಾಲಕಿ, ಅಮ್ಮನ ಕಥೆಯನ್ನೇ ಮುಗಿಸಲು ಪ್ಲಾನ್ ಮಾಡಿದ್ದಾಳೆ.

Telangana Crime – ಪ್ರಿಯಕರನೊಂದಿಗೆ ಸೇರಿ ತಾಯಿಯ ಹತ್ಯೆಗೆ ಸ್ಕೆಚ್!

ತಾಯಿಯ ಮಾತಿನಿಂದ ಕೆರಳಿದ ಬಾತಲಿ, ತನ್ನ 19 ವರ್ಷದ ಬಾಯ್‌ಫ್ರೆಂಡ್ ಪಗಿಲ್ಲಾ ಶಿವ ಬಳಿ ಅಮ್ಮ ಬೈದ ವಿಚಾರ ಹೇಳಿದ್ದಾಳೆ. ಆಗ ಬಾಯ್‌ಫ್ರೆಂಡ್ ಶಿವ, ತಾಯಿಯ ಕೊಲೆ ಮಾಡುವ ಬಗ್ಗೆ ಸಲಹೆ ನೀಡಿದ್ದಾನೆ ಎನ್ನಲಾಗಿದೆ. ಕೇವಲ ಬಾಯ್‌ಫ್ರೆಂಡ್ ಮಾತ್ರವಲ್ಲದೆ, ತನ್ನ 18 ವರ್ಷದ ಸಹೋದರ ಯಶ್ವಂತ್‌ನನ್ನೂ ಸಹ ಈ ಸಂಚಿನಲ್ಲಿ ಸೇರಿಸಿಕೊಂಡಿದ್ದಾಳೆ.

Read this also : ಅಂತರಧರ್ಮೀಯ ವಿವಾಹದ ಆಕ್ರೋಶ, ಜೀವಂತ ಮಗಳಿಗೇ ಶ್ರಾದ್ಧ ಮಾಡಿದ ಪೋಷಕರು, ಪಶ್ಚಿಮ ಬಂಗಾಳದಲ್ಲಿ ನಡೆದ ಘಟನೆ…!

Telangana teenage girl accused of murdering mother with help of boyfriend and brother over love affair in Jeddimetla suburb of Hyderabad

Telangana Crime – ಅಂಜಲಿ ಹತ್ಯೆಯಾಗಿದ್ದು ಹೇಗೆ?

ಮೂವರು ಸೇರಿಕೊಂಡು ಅಂಜಲಿ ಅವರ ಕುತ್ತಿಗೆ ಹಿಸುಕಿ ಉಸಿರುಗಟ್ಟಿಸಿದ್ದಾರೆ. ನಂತರ ಕಬ್ಬಿಣದ ರಾಡ್‌ಗಳಿಂದ ತಲೆಗೆ ಹೊಡೆದು ಹತ್ಯೆ ಮಾಡಿದ್ದಾರೆ. ಈ ಭೀಕರ ಘಟನೆ ಮೆಡ್ಚಾಲ್ ಜಿಲ್ಲೆಯ ಹೈದರಾಬಾದ್ ಉಪನಗರ ವ್ಯಾಪ್ತಿಗೆ ಬರುವ ಜೆಡ್ಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಇದು ಪೂರ್ವಯೋಜಿತ ಕೃತ್ಯ ಎಂದು ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಅಪ್ರಾಪ್ತ ಬಾಲಕಿ ಸೇರಿದಂತೆ ಮೂವರನ್ನು ಬಂಧಿಸಿ ಕಸ್ಟಡಿಗೆ ಪಡೆದಿದ್ದಾರೆ. ಈ ಕೊಲೆಯ ಹಿಂದಿರುವ ನಿಜವಾದ ಕಾರಣವನ್ನು ಪತ್ತೆಹಚ್ಚಲು ಪೊಲೀಸರು ಮೂವರು ಆರೋಪಿಗಳನ್ನೂ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

by ISM Kannada News Deskhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular