Leopard : ಗುಡಿಬಂಡೆಯ ವರ್ಲಕೊಂಡ ಗ್ರಾಮದದಲ್ಲಿ ಚಿರತೆ ಆತಂಕ: ಗ್ರಾಮಸ್ಥರ ನಿದ್ದೆಗೆಡಿಸಿದ ಚಿರತೆ ಹಾವಳಿ..!

Leopard – ಗುಡಿಬಂಡೆ ತಾಲೂಕಿನ ವರ್ಲಕೊಂಡ ಗ್ರಾಮದ ವ್ಯಾಪ್ತಿಯಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಸ್ಥಳೀಯರ ರೈತರು, ಕೂಲಿಕಾರರು ಹಾಗೂ ಜನರು ಭಯಭೀತರಾಗಿದ್ದಾರೆ. ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆಯನ್ನು ಹಿಡಿಯಬೇಕೆಂದು ಇಲ್ಲಿನ ಜನರ ಒತ್ತಾಯವಾಗಿದೆ.

Drone footage captures leopard roaming near Varahagiri Hill in Varlakonda, causing fear among local villagers

Leopard – ಡ್ರೋನ್ ಕ್ಯಾಮರಾದಲ್ಲಿ ಸೆರೆಯಾದ ಚಿರತೆ ದೃಶ್ಯ

ಚಿಕ್ಕಬಳ್ಳಾಪುರದ ಗುಡಿಬಂಡೆ ತಾಲೂಕಿನ ವರ್ಲಕೊಂಡ ಗ್ರಾಮದ ವರಾಹಗಿರಿ ಬೆಟ್ಟದಲ್ಲಿ ಕಳೆದ ಮೂರು ದಿನಗಳಿಂದ ಮೂರು ಚಿರತೆಗಳು ಕಾಣಿಸಿಕೊಂಡಿದೆ. ಇದನ್ನು ಸ್ಥಳೀಯರು ನೋಡಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಜನರು ಭಯಭೀತರಾಗಿದ್ದಾರೆ. ಭಯದಿಂದಲೇ ಕೃಷಿ ಚಟುವಟಿಕೆಗಳು ಸೇರಿದಂತೆ ಎಲ್ಲಾ ಕೆಲಸಗಳನ್ನು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

Read this also : ನಿಂಬೆ ಸಿಪ್ಪೆಯಲ್ಲಿ ಅಡಗಿದೆ ಆರೋಗ್ಯದ ನಿಧಿ! ಇನ್ನು ಕಸಕ್ಕೆಸೆಯುವ ಮುನ್ನ ಯೋಚಿಸಿ….!

ಇನ್ನೂ ಈ ಚಿರತೆ ಇರುವ ದೃಶ್ಯಗಳಹ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಸಹ ವೈರಲ್ ಆಗಿದ್ದು, ಜನರು ಮತ್ತಷ್ಟು ಭಯಭೀತರಾಗಿದ್ದಾರೆ. ಕೂಡಲೇ ಸಂಬಂಧಪಟ್ಟ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಚಿರತೆಯನ್ನು ಸೆರೆ ಹಿಡಿಯಬೇಕೆಂದು ಜನರು ಒತ್ತಾಯಿಸಿದ್ದಾರೆ.

Drone footage captures leopard roaming near Varahagiri Hill in Varlakonda, causing fear among local villagers

Leopard – ಚಿರತೆಯನ್ನು ಹಿಡಿಯುವಂತೆ ಸ್ಥಳೀಯರ ಮನವಿ

ಇನ್ನೂ ಈ ಕುರಿತು ಸ್ಥಳೀಯ ಮುಖಂಡ ರಾಜು ಮಾತನಾಡಿ, ವರ್ಲಕೊಂಡ ಬೆಟ್ಟದ ಸುತ್ತಮುತ್ತಲಿನಲ್ಲಿ ಚಿರತೆಗಳು ಕಾಣಿಸಿಕೊಂಡಿದೆ. ಈ ಭಾಗದಲ್ಲಿ ಜನರು ಕೃಷಿ ಚಟುವಟಿಕೆಗಳನ್ನು, ನರೇಗಾ ಕಾಮಗಾರಿಗಳನ್ನು ಮಾಡುತ್ತಿರುತ್ತಾರೆ. ಜೊತೆಗೆ ಕೆಲವು ಕುಟುಂಬಗಳು ತಮ್ಮ ಜಮೀನುಗಳಲ್ಲಿಯೇ ವಾಸವಿದ್ದಾರೆ. ಜಾನುವಾರುಗಳನ್ನು ಸಹ ಸಾಕಿದ್ದಾರೆ. ಇದೀಗ ಚಿರತೆಗಳು ಡ್ರೋನ್ ಕ್ಯಾಮೆರಾದಲ್ಲಿ ಕಾಣಿಸಿದ್ದು, ನಮಗೆ ತುಂಬಾನೆ ಭಯವಾಗಿದೆ. ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆಯನ್ನು ಹಿಡಿದು ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ.

Leave a Comment

Your email address will not be published. Required fields are marked *

Scroll to Top