Mobile Addiction : ಮೊಬೈಲ್ ವಿಚಾರಕ್ಕೆ ಹೆಂಡತಿಯನ್ನೇ ಕೊಂದ ಪತಿ: ಅನಾಥವಾದ ಕಂದಮ್ಮಗಳು!

Mobile Addiction – ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿದೆ. ಆದರೆ, ಇದೇ ಮೊಬೈಲ್ ವ್ಯಸನ ಕೆಲವೊಮ್ಮೆ ವಿಪರೀತ ಪರಿಣಾಮಗಳನ್ನು ಉಂಟುಮಾಡುತ್ತದೆ ಎಂಬುದಕ್ಕೆ ಉಡುಪಿಯಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ಹೆಚ್ಚು ಮೊಬೈಲ್ ಬಳಸುತ್ತಾಳೆ ಎಂಬ ಕ್ಷುಲ್ಲಕ ಕಾರಣಕ್ಕೆ ಪತಿಯೊಬ್ಬ ತನ್ನ ಪತ್ನಿಯನ್ನೇ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಈ ದುರ್ಘಟನೆಯಿಂದಾಗಿ ಇಬ್ಬರು ಮಕ್ಕಳು ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ.

Crime scene in Udupi where man murdered wife over mobile addiction, leaving children orphaned

Mobile Addiction – ಉಡುಪಿಯ ಬ್ರಹ್ಮಾವರದಲ್ಲಿ ನಡೆದ ಭೀಕರ ಘಟನೆ

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹಿಲಿಯಾಣ ಗ್ರಾಮದ ಹೊಸಮಠ ಎಂಬಲ್ಲಿ ಈ ಭೀಕರ ಘಟನೆ ನಡೆದಿದೆ. ರೇಖಾ (27) ಕೊಲೆಯಾದ ಮಹಿಳೆ. ಆಕೆಯ ಪತಿ, ಕೊಳಂಬೆ ಗ್ರಾಮದ ನಿವಾಸಿ ಗಣೇಶ್ ಪೂಜಾರಿ (42) ಎಂಬಾತನೇ ಈ ಕೃತ್ಯ ಎಸಗಿದ್ದಾನೆ. ಸದ್ಯ ಪೊಲೀಸರು ಆರೋಪಿ ಗಣೇಶ್ ಪೂಜಾರಿಯನ್ನು ಬಂಧಿಸಿದ್ದಾರೆ.

Mobile Addiction –  ದಂಪತಿಗಳ ನಡುವೆ ಹೆಚ್ಚಾಗಿದ್ದ ಮೊಬೈಲ್ ಜಗಳ

ಗಣೇಶ್ ಪೂಜಾರಿ ವೃತ್ತಿಯಲ್ಲಿ ಪೇಂಟಿಂಗ್ ಕೆಲಸ ಮಾಡುತ್ತಿದ್ದ. ಸುಮಾರು 8 ವರ್ಷಗಳ ಹಿಂದೆ ರೇಖಾ ಜೊತೆ ಆತನ ವಿವಾಹವಾಗಿತ್ತು. ದಂಪತಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ರೇಖಾ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದು, ಗಣೇಶ್ ಪೂಜಾರಿ ತನ್ನ ಪತ್ನಿ ಹೆಚ್ಚು ಮೊಬೈಲ್ ಬಳಸುವ ವಿಚಾರವಾಗಿ ಆಗಾಗ್ಗೆ ಜಗಳ ತೆಗೆಯುತ್ತಿದ್ದ. ಈ ಸಂಬಂಧ ಈ ಹಿಂದೆ ಶಂಕರನಾರಾಯಣ ಪೊಲೀಸರಿಗೂ ದೂರು ನೀಡಲಾಗಿತ್ತು. ಪೊಲೀಸರು ದಂಪತಿಗೆ ಬುದ್ಧಿವಾದ ಹೇಳಿ, ಮುಚ್ಚಳಿಕೆ ಬರೆಸಿಕೊಂಡು ಕಳುಹಿಸಿದ್ದರು.

Mobile Addiction – ಕುಡಿತದ ಚಟವೂ ಕಾರಣವಾಯ್ತಾ?

ಆರೋಪಿ ಗಣೇಶ್‌ಗೆ ಕುಡಿತದ ಚಟವೂ ಇತ್ತು ಎನ್ನಲಾಗಿದೆ. ಆತನ ಕುಡಿತದ ಚಟದಿಂದ ರೇಖಾ ರೋಸಿ ಹೋಗಿದ್ದಳು. ಅನೇಕ ಬಾರಿ ಬುದ್ಧಿವಾದ ಹೇಳಿದರೂ ಗಣೇಶ್ ತನ್ನ ದುಶ್ಚಟ ಬಿಟ್ಟಿರಲಿಲ್ಲ. ಪತಿಯ ಈ ದುರ್ವರ್ತನೆಯಿಂದಾಗಿ ರೇಖಾ ಮೊಬೈಲ್‌ಗೆ ಹೆಚ್ಚು ಅಡಿಕ್ಟ್ ಆಗಿದ್ದಳು ಎನ್ನಲಾಗುತ್ತಿದೆ. ಮೊಬೈಲ್ ಬಳಸುವುದನ್ನು ಸಹ ಗಣೇಶ್ ಆಕ್ಷೇಪಿಸುತ್ತಿದ್ದ. ಗುರುವಾರ ತಡರಾತ್ರಿ, ಗಣೇಶ್ ಮನೆಗೆ ಬಂದು ಕ್ಷುಲ್ಲಕ ಕಾರಣಕ್ಕೆ ಪತ್ನಿ ರೇಖಾ ಜೊತೆ ಜಗಳ ತೆಗೆದಿದ್ದಾನೆ. ಜಗಳ ವಿಕೋಪಕ್ಕೆ ಹೋಗಿ, ಗಣೇಶ್ ಕತ್ತಿಯಿಂದ ರೇಖಾಗೆ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡ ರೇಖಾ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾಳೆ.

Crime scene in Udupi where man murdered wife over mobile addiction, leaving children orphaned

Mobile Addiction –  ಆರೋಪಿ ಗಣೇಶ್ ಬಂಧನ

ಪತ್ನಿಯನ್ನು ಕೊಲೆ ಮಾಡಿದ ನಂತರ ಗಣೇಶ್ ಮನೆಯಿಂದ ಪರಾರಿಯಾಗಿದ್ದ. ಆದರೆ, ಕುಂದಾಪುರ ವೃತ್ತ ನಿರೀಕ್ಷಕ ಜಯರಾಮ್ ಗೌಡ, ಶಂಕರನಾರಾಯಣ ಪೊಲೀಸ್ ಠಾಣೆಯ ಉಪನಿರೀಕ್ಷಕ ನಾಸೀರ್ ಹುಸೇನ್ ಮತ್ತು ಸಿಬ್ಬಂದಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಆರೋಪಿ ಗಣೇಶ್ ಪೂಜಾರಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಈ ಸಂಬಂಧ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read this also : ಪ್ರೀತಿಸಿ ಮದುವೆಯಾದ ಪತಿಯ ಶೀಲ ಸಂಕಿಸಿ ಪತಿ, ಪತ್ನಿಗೆ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿಬಿಟ್ಟ….!

Mobile Addiction – ಅನಾಥರಾದ ಪುಟ್ಟ ಮಕ್ಕಳು

ಈ ದುರ್ಘಟನೆಯಿಂದ ದಂಪತಿಗಳ ಇಬ್ಬರು ಪುಟ್ಟ ಮಕ್ಕಳು ಅನಾಥರಾಗಿದ್ದಾರೆ. ತಾಯಿ ಮಸಣ ಸೇರಿದ್ದರೆ, ತಂದೆ ಜೈಲು ಪಾಲಾಗಿದ್ದಾನೆ. ಒಬ್ಬರಿಗೆ ಮೊಬೈಲ್ ಚಟ, ಮತ್ತೊಬ್ಬರಿಗೆ ಕುಡಿತದ ಚಟ – ಈ ಎರಡು ವ್ಯಸನಗಳು ಎರಡು ಅಮಾಯಕ ಕಂದಮ್ಮಗಳನ್ನು ದಿಕ್ಕಿಲ್ಲದಂತೆ ಮಾಡಿವೆ.

Leave a Comment

Your email address will not be published. Required fields are marked *

Scroll to Top