Local News – ಪೌರಕಾರ್ಮಿಕರ ಸೇವೆಯನ್ನು ಎಲ್ಲರೂ ಗೌರವಿಸಬೇಕು: ನಾರಾಯಣಸ್ವಾಮಿ

Local News – ಪಟ್ಟಣದಲ್ಲಿ ಸ್ವಚ್ಚತೆ ಕಾಪಾಡುವುದರ ಮೂಲಕ ಜನರ ಆರೋಗ್ಯವನ್ನು ರಕ್ಷಣೆ ಮಾಡುವ ಕೆಲಸದಲ್ಲಿ ನಿರಂತರವಾಗಿ ತೊಡಗಿಸಿಕೊಂಡ ಪೌರ ಕಾರ್ಮಿಕರನ್ನು ಎಲ್ಲರೂ ಗೌರವಿಸಬೇಕು, ಜೊತೆಗೆ ಅವರ ಸೇವೆಯನ್ನು ಸಹ ಸ್ಮರಿಸಬೇಕೆಂದು ಸಫಾಯಿ ಕರ್ಮಚಾರಿ ಸಮಿತಿ ಸದಸ್ಯ ಜೀವಿಕ ನಾರಾಯಣಸ್ವಾಮಿ ತಿಳಿಸಿದರು.

Felicitation ceremony for civic workers in Gudibande, Chikkaballapur - Local News

Local News – ಗುಡಿಬಂಡೆಯಲ್ಲಿ ಪೌರಕಾರ್ಮಿಕರಿಗೆ ಸನ್ಮಾನ

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಪಂಚಾಯತಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ನಿವೃತ್ತಿಯಾದ ಪೌರಕಾರ್ಮಿಕರು ಹಾಗೂ ಸಿಬ್ಬಂದಿಯ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿನಿತ್ಯ ಪಟ್ಟಣವನ್ನು ಸ್ವಚ್ಚವಾಗಿಡುವಲ್ಲಿ ಪೌರಕಾರ್ಮಿಕರ ಪಾತ್ರ ಅಪಾರವಾದುದು. ಅವರು ಮಾಡುವಂತಹ ಸೇವೆ ಎಲ್ಲದಕ್ಕಿಂತ ಮಿಗಿಲಾದುದು. ರಸ್ತೆಯಲ್ಲಿ ಒಂದು ನಾಯಿ ಸತ್ತುಬಿದಿದ್ದರೇ ಯಾರೂ ಸಹ ಅದನ್ನು ಮುಟ್ಟಲು ಸಹ ಹೋಗುವುದಿಲ್ಲ ಆದರೆ ಪೌರ ಕಾರ್ಮಿಕ ಯಾವುದೇ ಭಯವಿಲ್ಲದೆ ಅಥವಾ ಬೇಸರ ಪಡದೇ ಅದನ್ನು ಸ್ವಚ್ಚಗೊಳಿಸುತ್ತಾನೆ.

ಆದರೆ ಪ್ರಮಾಣಿಕವಾಗಿ ಕೆಲಸ ಮಾಡುವಂತಹ ಪೌರಕಾರ್ಮಿಕರಿಗೆ ಸರ್ಕಾರದಿಂದ ಸರಿಯಾದ ಸೌಲಭ್ಯಗಳು ಸಿಗುತ್ತಿಲ್ಲ. ಇದೀಗ ನಿವೃತ್ತಿಯಾದವರಿಗೆ ಯಾವುದೇ ಸೌಲಭ್ಯ ಸಹ ಸಿಗುತ್ತಿಲ್ಲ. ಮುಂದೆಯಾದರೂ ಇತರೇ ಪೌರಕಾರ್ಮಿಕರಿಗಾದರೂ ಪಿಎಫ್, ಎಲ್.ಐ.ಸಿ ಸೇರಿದಂತೆ ಹಲವು ಸೌಲಭ್ಯಗಳನ್ನು ದೊರಕಿಸಿಕೊಡಲು ಪಪಂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮುಂದಾಗಬೇಕು. ಪೌರಕಾರ್ಮಿಕರಿಗೆ ಸುರಕ್ಷತಾ ಕಿಟ್ ಗಳನ್ನು ಸಹ ನೀಡಬೇಕು ಎಂದರು.

Local News – ಪೌರಕಾರ್ಮಿಕರ ಸೌಲಭ್ಯಗಳ ಬಗ್ಗೆ ಪಪಂ ಮುಖ್ಯಾಧಿಕಾರಿ ಮಾಹಿತಿ

ಬಳಿಕ ಪಪಂ ಮುಖ್ಯಾಧಿಕಾರಿ ಸಭಾ ಶಿರೀನ್ ಮಾತನಾಡಿ, ಪಟ್ಟಣ ಪಂಚಾಯತಿ ಕಚೇರಿಯ ಅಧೀನದಲ್ಲಿ ಕೆಲಸ ಮಾಡುವಂತಹ ಪೌರಕಾರ್ಮಿಕರಿಗೆ ಇಲಾಖೆಯಿಂದ ಸುರಕ್ಷತಾ ಕಿಟ್ ಗಳನ್ನು ನೀಡಲಾಗಿದೆ. 2 ತಿಂಗಳಿಗೊಮ್ಮೆ ಅವರಿಗೆ ಆರೋಗ್ಯ ಪರೀಕ್ಷೆಯನ್ನು ಸಹ ಮಾಡಿಸಲಾಗುತ್ತಿದೆ. ಸರ್ಕಾರದಿಂದ ಸಿಗುವಂತಹ ಸೌಲಭ್ಯಗಳನ್ನು ದೊರಕಿಸಿಕೊಡಲು ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.

Local News – ಪೌರಕಾರ್ಮಿಕರಿಗೆ ಆರೋಗ್ಯ ತಪಾಸಣೆ ಮಾಡಿಸಿ

ಇದೇ ಸಮಯದಲ್ಲಿ ಸಫಾಯಿ ಕರ್ಮಚಾರಿ ಸಮಿತಿ ಸದಸ್ಯೆ ರತ್ನಮ್ಮ ಹಾಗೂ ಜೀವಿಕ ಸಂಘಟನೆಯ ಅಮರಾವತಿ ಪೌರ ಕಾರ್ಮಿಕರಿಗೆ ಕೇಂದ್ರ ಸರ್ಕಾರ ಪಿಂಚಣಿ ಯೋಜನೆ ಹಾಗೂ ವಿಮೆಗಳನ್ನು ಮಾಡಿಸಬೇಕಾಗಿ ಹಾಗೂ ಅವರಿಗೆ ಆಗಾಗ ಆರೋಗ್ಯ ತಪಾಸಣೆಯನ್ನು ಮಾಡಿಸಬೇಕಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.

Felicitation ceremony for civic workers in Gudibande, Chikkaballapur - Local News

Read this also : ಸರ್ಕಾರಿ ಶಾಲೆಗಳಿಗೆ ದಾನಿಗಳ ಕೊಡುಗೆ ಅವಶ್ಯಕ: ದಾಮೋದರ್ ರಾಜ್

ಕಾರ್ಯಕ್ರಮದಲ್ಲಿ ಪಪಂ ಕಚೇರಿಯಲ್ಲಿ ಪೌರಕಾರ್ಮಿಕರಾಗಿ ಸೇವೆ ಸಲ್ಲಿಸಿದ ಪೌರಕಾರ್ಮಿಕರು ಹಾಗೂ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಈ ಸಮಯದಲ್ಲಿ ಪಪಂ ಅಧ್ಯಕ್ಷ ವಿಕಾಸ್, ಉಪಾಧ್ಯಕ್ಷ ಗಂಗರಾಜು, ಸದಸ್ಯರಾದ ವೀಣಾ, ರಾಜೇಶ್, ಅನುಷಾ, ನಗೀನ್ ತಾಜ್, ಬಷೀರಾ, ಬಾಬು, ರಾಜೇಶ್, ಮಂಜುಳಾ, ಬಷೀರ್‍, ಅಂಬರೀಶ್, ಆದಿನಾರಾಯಣಪ್ಪ ಸೇರಿದಂತೆ ಹಲವರು ಹಾಜರಿದ್ದರು.

Leave a Comment

Your email address will not be published. Required fields are marked *

Scroll to Top