...
Tuesday, February 10, 2026
HomeStateLocal News : ಗಂಟೆಗಟ್ಟಲೇ ಪೂಜೆ ಮಾಡುವುದು ಬೇಡ, 5 ನಿಮಿಷ ದೇವರನ್ನು ಸ್ಮರಿಸಿದರೇ ದೇವರು...

Local News : ಗಂಟೆಗಟ್ಟಲೇ ಪೂಜೆ ಮಾಡುವುದು ಬೇಡ, 5 ನಿಮಿಷ ದೇವರನ್ನು ಸ್ಮರಿಸಿದರೇ ದೇವರು ಒಲಿಯುತ್ತಾನೆ: ಸುಬ್ಬಾರೆಡ್ಡಿ

Local News – ಪ್ರತಿಯೊಬ್ಬರೂ ದೇವರನ್ನು ಪೂಜೆ ಮಾಡುತ್ತಾರೆ. ಆದರೆ ಗಂಟೆ ಗಂಟ್ಟಲೇ ಪೂಜೆ ಮಾಡುವುದಕ್ಕಿಂದ 5 ನಿಮಿಷ ದೇವರನ್ನು ಸ್ಮರಿಸಿದರೇ ದೇವರು ಒಲಿಯುತ್ತಾನೆ. ಈ ನಿಟ್ಟಿನಲ್ಲಿ ಮನಸಾರೆ ದೇವರನ್ನು ಪೂಜಿಸಬೇಕೆಂದು ಶಾಸಕ ಸುಬ್ಬಾರೆಡ್ಡಿ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಸುರಸದ್ಮಗಿರಿ ಬೆಟ್ಟದ ತಪ್ಪಲಿನಲ್ಲಿ ಗುಡಿಬಂಡೆ  ಶ್ರೀಮಾತಾ ಗಾಯತ್ರಿ ಸೇವಾ ಟ್ರಸ್ಟ್ ವತಿಯಿಂದ ನಿರ್ಮಾಣಗೊಂಡ ಸರ್ವಧರ್ಮ ಸಮನ್ವಯ ಗಾಯತ್ರಿ ವಿಶ್ವಧ್ಯಾನ ಮಂದಿರ ಸಮ್ಮುಚ್ಚಯ ಹಾಗೂ ಯಶೋಧಮ್ಮ ಮತ್ತು ರಾಮಚಂದ್ರರಾವ್ ಸ್ಮಾರಕ ವೇದವಿನ್ಯಾಸ ಪಾಠಶಾಲೆ, ಜ್ಞಾನಯಜ್ಞ ಮಂಟಪಗಳ ಲೋಕಾರ್ಪಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

MLA Subbareddy speaking at the inauguration of the Sarva Dharma Gayatri Meditation Mandir at Gudibande - Local News

Local News – ದೇವರನ್ನು ಮನಸಾರೆ ಪೂಜಿಸಿ

ಗಾಯತ್ರಿ ಸೇವಾ ಟ್ರಸ್ಟ್ ರವರು ಗುಡಿಬಂಡೆ ಬೆಟ್ಟದ ತಪ್ಪಲಿನಲ್ಲಿ ಇದೀಗ ನಿರ್ಮಾಣ ಆಗಿರುವ ಧ್ಯಾನ ಮಂದಿರ ತುಂಬಾ ಅದ್ಬುತವಾಗಿ ನಿರ್ಮಾಣಗೊಂಡಿದೆ. ಇದರಿಂದ ಸರ್ವಧರ್ಮಗಳ ಸಮನ್ವಯ ಸಾಧ್ಯವಾಗಲಿದೆ. ಪ್ರತಿಯೊಬ್ಬರು ಪ್ರತಿನಿತ್ಯ 5 ನಿಮಿಷಗಳ ಕಾಲ ದೇವರ ಪ್ರಾರ್ಥನೆ ಮಾಡಬೇಕು. 5 ನಿಮಿಷಗಳ ಕಾಲ ದೇವರ ಧ್ಯಾನ ಮಾಡಿದರೇ ಸಾಕು ಗಂಟೆಗಳ ಕಾಲ ಪೂಜೆ ಮಾಡುವ ಅವಶ್ಯಕತೆಯಿಲ್ಲ. ಮನಸಾರೆ ದೇವರನ್ನು ಪ್ರಾರ್ಥಿಸಿದರೇ ದೇವರು ಒಲಿಯುತ್ತಾನೆ.

Local News – ಗುಡಿಬಂಡೆ ಅಭಿವೃದ್ದಿ ಹೆಚ್ಚು ಅನುದಾನ

ನಮ್ಮ ಸರ್ಕಾರದಲ್ಲಿ ಅನೇಕ ಅಭಿವೃದ್ದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಲಕ್ಷಾಂತರ ಅನುದಾನ ಈ ಧ್ಯಾನ ಮಂದಿರ ನಿರ್ಮಾಣಕ್ಕೆ ಒದಗಿಸಲಾಗಿದೆ. ಇದೀಗ 1 ಕೋಟಿ ವೆಚ್ಚದಲ್ಲಿ ಗುಡಿಬಂಡೆ ಬೆಟ್ಟದ ತಪ್ಪಲಿನಲ್ಲಿ ಕಲ್ಯಾಣಿಯನ್ನು ಪುನಃಚ್ಚೇತನ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ಬ್ರಾಹ್ಮಣರಹಳ್ಳಿ ಗ್ರಾಮದ ಬಳಿ ಡ್ಯಾಂ ನಿರ್ಮಾಣವಾಗಿದ್ದು, ಈ ಎರಡೂ ನೀರಿನ ಮೂಲಗಳಿಂದ ಗುಡಿಬಂಡೆ ಜನತೆಗೆ ಪ್ಲೋರೈಡ್ ಹಾಗೂ ಶುದ್ದ ಕುಡಿಯುವ ನೀರನ್ನು ಒದಗಿಸುವ ಯೋಜನೆ ರೂಪಿಸಲಾಗಿದೆ. ಮುಂದಿನ ದಿನಗಳಲ್ಲಿ ಗುಡಿಬಂಡೆ ಅಭಿವೃದ್ದಿಗೆ ಮತ್ತಷ್ಟು ಅನುದಾನ ತರುತ್ತೇನೆ. ಜೂ.19 ರಂದು ನಡೆಯಲಿರುವ ಕ್ಯಾಬಿನೆಟ್ ಸಭೆಯಲ್ಲಿ ಗುಡಿಬಂಡೆ ಪ್ರವಾಸೋದ್ಯಮ ಅಭಿವೃದ್ದಿ ಸೇರಿದಂತೆ ಹಲವು ಕಾಮಗಾರಿಗಳಿಗೆ ಮಂಜೂರು ಮಾಡಿಸುತ್ತೇನೆ ಎಂದರು.

MLA Subbareddy speaking at the inauguration of the Sarva Dharma Gayatri Meditation Mandir at Gudibande - Local News

Local News – ಸರ್ವಧರ್ಮ ಧ್ಯಾನ ಮಂದಿರ ವಿಶ್ವ ಮಟ್ಟದಲ್ಲಿ ಖ್ಯಾತಿ ಪಡೆಯಲಿದೆ

ಬಳಿಕ ಶ್ರೀಮಾತಾ ಗಾಯತ್ರಿ ಸೇವಾ ಟ್ರಸ್ಟ್ ನ ಅಧ್ಯಕ್ಷ ಎಸ್.ಗಿರೀಶ್ ರಾವ್ ಮಾತನಾಡಿ, ಗುಡಿಬಂಡೆ ದೊಡ್ಡ ಆದ್ಯಾತ್ಮಿಕ ಪುಣ್ಯಕ್ಷೇತ್ರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.  ಇದೀಗ ನಿರ್ಮಾಣಗೊಂಡಿರುವ ಧ್ಯಾನ ಮಂದಿರ ಕೇವಲ ಒಂದು ಸಮುದಾಯ ಅಥವಾ ಒಂದು ಜಾತಿಗೆ ಸೀಮಿತವಲ್ಲ, ಇದರ ಹೆಸರೇ ಸರ್ವ ಧರ್ಮ ಧ್ಯಾನ ಮಂದಿರ. ಎಲ್ಲಾ ಧರ್ಮೀಯರು ಸೇರಿದಂತಹ ಮಂದಿರವಾಗಿದೆ. ಮುಂದಿನ ದಿನಗಳಲ್ಲಿ ಈ ಧ್ಯಾನ ಮಂದರಿ ವಿಶ್ವ ಮಟ್ಟದಲ್ಲಿ ಖ್ಯಾತಿ ಗಳಿಸಿಕೊಳ್ಳಲಿದೆ. ಈ ಮಂದಿರ ನಿರ್ಮಾಣಕ್ಕೆ ಸಹಕರಿಸಿದಂತಹ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.

Read this also : ಗುಡಿಬಂಡೆಯಲ್ಲಿ ಜ್ಞಾನ, ಭಕ್ತಿ ಮತ್ತು ಸಮಾಜ ಸೇವೆಗಳ ಸಂಗಮ: ಸರ್ವಧರ್ಮ ಸಮನ್ವಯ ಗಾಯತ್ರಿ ವಿಶ್ವಧ್ಯಾನ ಮಂದಿರ ಸಮುಚ್ಚಯ ಲೋಕಾರ್ಪಣೆ…!

Local News – ಕಾರ್ಯಕ್ರಮದಲ್ಲಿ ಹಾಜರಿದ್ದ ಗಣ್ಯರು

ಕಾರ್ಯಕ್ರಮದಲ್ಲಿ ಶ್ರೀಮಾತಾ ಗಾಯತ್ರಿ ಸೇವಾ ಟ್ರಸ್ಟ್ ನ ಸ.ನ.ನಾಗೇಂದ್ರ, ಅಖಿಲ ಭಾರತ ಬ್ರಾಹ್ಮಣ ಮಹಾ ಸಭಾದ ಅಧ್ಯಕ್ಷ ಎಸ್.ರಘುನಾಥ್ ರವರುಗಳು ಮಾತನಾಡಿದರು. ಈ ಸಮಯದಲ್ಲಿ ಪಪಂ ಅಧ್ಯಕ್ಷ ವಿಕಾಸ್, ಶ್ರೀ ಶಂಕರ ಆಸ್ಪತ್ರೆಯ ಶ್ರೀನಾಥ್, ಇಐ ಟೆಕ್ನಾಲಿಜೀಸ್ ಸಂಸ್ಥೆಯ ಎನ್.ರಂಗನಾಥ್, ಫಿಲಿಪ್ಸ್ ಕಂಪನಿಯ ಸಿಇಒ ಅರುಣ್ ಕುಮಾರ್‍, ಆರ್‍.ವಿ.ಡೆಂಟಲ್ ಕಾಲೇಜಿನ ಕೆ.ಎಸ್.ನಾಗೇಶ್, ವಾಹಿನಿ ಸುರೇಶ್, ಚಲಪತಿ ಸೇರಿದಂತೆ ಹಲವರು ಹಾಜರಿದ್ದರು.

by ISM Kannada News Deskhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Seraphinite AcceleratorOptimized by Seraphinite Accelerator
Turns on site high speed to be attractive for people and search engines.