Saturday, November 15, 2025
HomeNationalಆಂಧ್ರದಲ್ಲಿ ಈ ಬಾರಿ ಅಧಿಕಾರ ಯಾರದ್ದು ಎಂದು ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ, ಆತ ಹೇಳಿದ್ದು...

ಆಂಧ್ರದಲ್ಲಿ ಈ ಬಾರಿ ಅಧಿಕಾರ ಯಾರದ್ದು ಎಂದು ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ, ಆತ ಹೇಳಿದ್ದು ಏನು?

ಆಂಧ್ರಪ್ರದೇಶದಲ್ಲಿ ಭಾರಿ ಖ್ಯಾತಿ ಗಳಿಸಿರುವ ಜ್ಯೋತಿಷಿ ವೇಣು ಸ್ವಾಮಿ ದೊಡ್ಡ ದೊಡ್ಡ ಸೆಲೆಬ್ರೆಟಿಗಳ ಜ್ಯೋತಿಷ್ಯ ನುಡಿದು ಸುದ್ದಿಯಾಗುತ್ತಿರುತ್ತಾರೆ. ಅದರಲ್ಲೂ ಸಿನಿರಂಗದ ಅನೇಕ ನಟ-ನಟಿಯರ ಬಗ್ಗೆ ಜ್ಯೋತಿಷ್ಯ ನುಡಿದು ಸುದ್ದಿಯಾಗಿದ್ದಾರೆ. ಇದೀಗ ಇದೇ ವೇಣು ಸ್ವಾಮಿ ಈ ಭಾರಿ ಆಂಧ್ರ ಪ್ರದೇಶದಲ್ಲಿ ಅಧಿಕಾರ ಹಿಡಿಯುವುದು ಯಾರು, ಎನ್.ಡಿ.ಎ ಒಕ್ಕೂಟ ಏನಾಗುತ್ತದೆ, ನಟ ಪವನ್ ಕಲ್ಯಾಣ್ ರವರು ಏನಾಗುತ್ತಾರೆ ಎಂಬೆಲ್ಲಾ ವಿಚಾರಗಳನ್ನು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

astrologer venu swamy shocking predictions AP results 0

ಆಂಧ್ರಪ್ರದೇಶದಲ್ಲಿ ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆ ಅಬ್ಬರ ಜೋರಾಗಿದೆ. ಈ ಭಾರಿ ವೈ.ಎಸ್.ಆರ್‍. ಕ್ರಾಂಗ್ರೇಸ್ ಪಕ್ಷವನ್ನು ಅಧಿಕಾರದಿಂದ ದೂರ ಇಡಲು ಚಂದ್ರಬಾಬು ನೇತೃತ್ವದ ತೆಲುಗು ದೇಶಂ ಪಾರ್ಟಿ ಹಾಗೂ ನಟ ಪವನ್ ಕಲ್ಯಾಣ್ ರವರ ಜನಸೇನಾ ಪಕ್ಷ ಎನ್.ಡಿ.ಎ ಮೈತ್ರಿ ಕೂಟ ಸೇರಿಕೊಂಡಿದೆ. ಆ ಮೂಲಕ ಈ ಬಾರಿ ಆಂಧ್ರದಲ್ಲಿ ನಮ್ಮದೇ ಸರ್ಕಾರ ರಚನೆಯಾಗಲಿದೆ ಎಂಬ ವಿಶ್ವಾದಲ್ಲಿದೆ ಎನ್.ಡಿ.ಎ ಕೂಟ. ಆದರೆ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಆಂಧ್ರ ಪ್ರದೇಶದಲ್ಲಿ ಈ ಬಾರಿ ಜಯ ಯಾರದ್ದು, ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬುದು ಅವರವರ ಜಾತಕದ ಆಧಾರದ ಮೇರೆಗೆ ಭವಿಷ್ಯ ನುಡಿದಿದ್ದಾರೆ.

astrologer venu swamy shocking predictions AP results 2

ಇನ್ನೂ ಜ್ಯೋತಿಷಿ ವೇಣು ಸ್ವಾಮಿ ಪ್ರಕಾರ ಎನ್.ಡಿ.ಎ ಕೂಟಕ್ಕೆ ಈ ಬಾರಿ ಶಾಕ್ ತಪ್ಪಿದ್ದಲ್ಲ. ಮತ್ತೊಮ್ಮೆ ವೈ.ಎಸ್. ಜಗನ್ ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರಂತೆ. ಪವನ್ ಕಲ್ಯಾಣ್-ಚಂದ್ರಬಾಬು ನಾಯ್ಡು ರವರ ಜಾತಕದಂತೆ ಮೈತ್ರಿ ವರ್ಕೌಟ್ ಆಗೊಲ್ಲ. ಪವನ್ ಕಲ್ಯಾಣ್ ಚಂದ್ರಬಾಬು ನಾಯ್ಡು ಕೈಯಲ್ಲಿ ಮೋಸ ಹೋಗುತ್ತಾರೆ. ಗ್ರಹಗಳ ಪ್ರಕಾರ ಚಂದ್ರಬಾಬು, ಪವನ್ ಕಲ್ಯಾಣ್ ರವರದ್ದು ಪ್ರತಿಕೂಲ ನಕ್ಷತ್ರಗಳು. ಚಂದ್ರಬಾಬು ರವರದ್ದು ಪುಷ್ಯಮಿ ನಕ್ಷತ್ರ, ಪವನ್ ಕಲ್ಯಾಣ್ ರವರದ್ದು ಉತ್ತರಾಷಾಡ ನಕ್ಷತ್ರ. ಈ ಎರಡೂ ನಕ್ಷತ್ರಗಳು ವಿರೋಧಿಗಳಿದ್ದಂತೆ. ಆದ್ದರಿಂದ ಅವರ ಮೈತ್ರಿ ವರ್ಕೌಟ್ ಆಗೊಲ್ಲ ಎಂದಿದ್ದಾರೆ.

astrologer venu swamy shocking predictions AP results 1

ಇನ್ನೂ ಚಂದ್ರಬಾಬು ಹಾಗೂ ಪವನ್ ಕಲ್ಯಾಣ್ ರವರ ನಕ್ಷತ್ರಗಳ ಪ್ರಭಾವ ಮೈತ್ರಿ ಮೇಲೆ ಬೀಳುತ್ತದೆ. ಅದರಿಂದ ಮತಗಳು ಬರೊಲ್ಲ. ಮೈತ್ರಿಗೆ ಸೋಲು ಖಚಿತ. ಮತ್ತೆ ವೈ.ಎಸ್.ಆರ್‍.ಪಿ ಗೆದ್ದು ಅಧಿಕಾರಕ್ಕೆ ಬರಲಿದೆ. ಪವನ್ ಕಲ್ಯಾಣ್ ರವರಿಗೆ ಸಿಎಂ ಆಗುವಂತಹ ಯೋಗವಿಲ್ಲ ಅದು ಎಂದಿಗೂ ಆಗೊಲ್ಲ. ನನಗೆ ಪವನ್ ಕಲ್ಯಾಣ್ ರವರ ಮೇಲೆ ಯಾವುದೇ ದ್ವೇಷವಿಲ್ಲ. ಅವರ ಜಾತಕದಂತೆ ಹೇಳುತ್ತಿದ್ದೇನೆ ಎಂದ ಅವರು ಪಿಟಾಪುರಂ ಕ್ಷೇತ್ರದಲ್ಲಿ ಪವನ್ ಕಲ್ಯಾಣ್ ಗೆಲ್ಲುತ್ತಾರಾ ಇಲ್ಲವಾ ಎಂಬುದನ್ನು ಮಾತ್ರ ಹೇಳಿಲ್ಲ. ಸದ್ಯ ವೇಣು ಸ್ವಾಮಿ ನೀಡಿದ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿವೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular