Saturday, August 30, 2025
HomeNationalಕುಟುಂಬದ ಇತರ ಪುರುಷರೊಂದಿಗೆ ಹಾಸಿಗೆ ಹಂಚಿಕೊಳ್ಳುವಂತೆ ಪತ್ನಿಗೆ ಕಿರುಕುಳ, ಪ್ರಕರಣ ದಾಖಲಾಗುತ್ತಿದ್ದಂತೆ ಪರಾರಿಯಾದ ಪತಿ…..!

ಕುಟುಂಬದ ಇತರ ಪುರುಷರೊಂದಿಗೆ ಹಾಸಿಗೆ ಹಂಚಿಕೊಳ್ಳುವಂತೆ ಪತ್ನಿಗೆ ಕಿರುಕುಳ, ಪ್ರಕರಣ ದಾಖಲಾಗುತ್ತಿದ್ದಂತೆ ಪರಾರಿಯಾದ ಪತಿ…..!

ಸಮಾಜದಲ್ಲಿ ಕೆಲ ಮಹಿಳೆಯರು ವಿವಿಧ ರೀತಿಯಲ್ಲಿ ಕಿರುಕುಳಕ್ಕೆ ಒಳಗಾಗುತ್ತಿರುತ್ತಾರೆ. ಮಹಿಳೆಯರ ಮೇಲೆ ನಡೆಯುವಂತಹ ದೌರ್ಜನ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಕಠಿಣ ಕಾನೂನು ಇದ್ದರೂ ಸಹ ದೌರ್ಜನ್ಯಗಳು, ಹಲ್ಲೆಗಳು ನಿಲ್ಲುತ್ತಿಲ್ಲ. ಅಂತಹುದೇ ಮನುಕುಲ ತಲೆತಗ್ಗಿಸುವಂತಹ ಘಟನೆಯೊಂದು ರಾಜಸ್ತಾನದಲ್ಲಿ ನಡೆದಿದೆ.

husband torchers wife 1

ರಾಜಸ್ತಾನದ ಸಂದ್ವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ತನ್ನ ಪತಿ ಕುಟುಂಬದಲ್ಲಿರುವ ಇತರೆ ಪುರುಷರೊಂದಿಗೆ ಲೈಂಗಿಕ ಕ್ರಿಯೆ ನಡೆಸುವಮತೆ ಪತ್ನಿಗೆ ಕಿರುಕುಳ ನೀಡುತ್ತಿದ್ದ ಆರೋಪದ ಮೇರೆಗೆ ಮಹಿಳೆಯೊಬ್ಬರು ಪತಿ, ಮಾವ ಹಾಗೂ ಸೋದರ ಮಾವ ಸೇರಿದಂತೆ 8 ಮಂದಿಯ ಮೇಲೆ ಪ್ರಕರಣ ದಾಖಲಾಗಿದೆ. ದೂರು ನೀಡಿದ ವಿಷಯ ತಿಳಿಯುತ್ತಿದ್ದಂತೆ ಪತಿ ನಾಪತ್ತೆಯಾಗಿದ್ದಾನೆ. ಈ ಸಂತ್ರಸ್ತ ಮಹಿಳೆಗೆ ಮೂರು ಗಂಡು ಮಕ್ಕಳು, ಓರ್ವ ಹೆಣ್ಣು ಮಗಳಿದ್ದಾರೆ. ಸಂತ್ರಸ್ತ ಮಹಿಳೆಗೆ ಸುಮಾರು 15-20 ವರ್ಷಗಳಿಂದ ಪತಿಯಿಂದ ಲೈಂಗಿಕ ಕಿರುಕುಳ ಅನುಭವಿಸುತ್ತಿದ್ದಾರೆ ಎನ್ನಲಾಗಿದೆ. ಸಂತ್ರಸ್ತೆಯ ಪತಿ ನಿರಂತರವಾಗಿ ಅಮಲಿನ ಪದಾರ್ಥ ನೀಡಿ ಪತಿಯ ಕುಟುಂಬದ ಪರ ಪುರುಷರೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸುತ್ತಿದ್ದಾನೆ. ಈ ವೇಳೆ ಆಕೆ ನಿರಾಕರಿಸಿದರೇ ಮನಸಿಗೆ ಇಚ್ಚೆ ಬಂದಂತೆ ಥಳಿಸುತ್ತಿದ್ದ ಎಂದು ಸಂತ್ರಸ್ತೆ ದೂರು ನೀಡಿದ್ದಾರೆ.

girl gang rape jharkhand 1

ಪಾಪಿ ಗಂಡ ಪ್ರತನಿತ್ಯ ಹೆಂಡತಿಗೆ ಟೀ ನಲ್ಲಿ ಅಮಲಿನ ಪದಾರ್ಥವನ್ನು ಮಿಕ್ಸ್ ಮಾಡಿ ಕುಡಿಸುತ್ತಿದ್ದನಂತೆ. ಟೀ ಕುಡಿದು ಪ್ರಜ್ಞಾಹೀನಳಾಗಿ ಬಿದ್ದ ಪತ್ನಿಯ ಮೇಲೆ ಕುಟುಂಬದ ಇತರರಿಂದ ಅತ್ಯಾಚಾರ ಮಾಡಿಸುತ್ತಿದ್ದನಂತೆ. ಆದರೆ ಇದು ತಿಳಿದ ಪತ್ನಿ ಒಂದು ದಿನ ಗಂಡನ ಮಾತಿಗೆ ವಿರೋಧ ವ್ಯಕ್ತಪಡಿಸಿದ್ದಾಳೆ. ಇದರಿಂದ ಆಕ್ರೋಷಗೊಂಡ ಪತಿ ಹರಿತವಾದ ಆಯುಧದಿಂದ ಹಲ್ಲೆ ಮಾಡಲು ಮುಂದಾಗಿದ್ದನಂತೆ.  ಈ ಸಮಯದಲ್ಲಿ ಆಕೆ ಆತನಿಂದ ತಪ್ಪಿಸಿಕೊಂಡು ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಳಂತೆ. ಇದೀಗ ಮತ್ತೆ ಆತ ಕೊಲ್ಲುವ ಬೆದರಿಕೆ ಹಾಕುತ್ತಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ ಎಂದು ಹೇಳಲಾಗಿದೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular