Video – ಸಣ್ಣ ಪುಟ್ಟ ವಿಷಯಗಳಿಗೆ ಜಗಳಗಳು ಸಾಮಾನ್ಯ. ಆದರೆ ಕೆಲವೊಮ್ಮೆ ಅವು ಮಿತಿ ಮೀರಿದಾಗ ಪರಿಸ್ಥಿತಿ ತಮಾಷೆಯಾಗಿ ಅಥವಾ ಆಘಾತಕಾರಿಯಾಗಿ ಬದಲಾಗುತ್ತದೆ. ಇತ್ತೀಚೆಗೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದ ಒಂದು ಘಟನೆ ಇದಕ್ಕೊಂದು ಉತ್ತಮ ಉದಾಹರಣೆ.
ಸಾಮಾನ್ಯವಾಗಿ ನೀರಿಗಾಗಿ, ಬಸ್ಸಿನಲ್ಲಿ ಸೀಟಿಗಾಗಿ ಹೀಗೆ ಹತ್ತು ಹಲವು ವಿಷಯಗಳಿಗೆ ಮಹಿಳೆಯರ ನಡುವೆ ನಡೆಯುವ ವಾಗ್ವಾದಗಳನ್ನು ನೋಡುತ್ತೇವೆ. ಕೆಲವೊಮ್ಮೆ ಅವು ಕೈ ಕೈ ಮಿಲಾಯಿಸುವ ಹಂತಕ್ಕೂ ತಲುಪುತ್ತವೆ. ಆದರೆ, ಇದೀಗ ಬೈಕ್ ಓಡಿಸುತ್ತಿರುವಾಗಲೇ ಗಂಡನಿಗೆ ಹೆಂಡತಿ ಚಪ್ಪಲಿಯಿಂದ ಥಳಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಈ ಘಟನೆ ಲಕ್ನೋದಲ್ಲಿ ನಡೆದಿದೆ ಎಂದು ಹೇಳಲಾಗಿದ್ದು, ಈ ವೈರಲ್ ವಿಡಿಯೋ (Video) ಸಖತ್ ಚರ್ಚೆಗೆ ಗ್ರಾಸವಾಗಿದೆ.
Video – ಏನಿದು ವೈರಲ್ ವಿಡಿಯೋ?
@deepikaBhardwaj ಎಂಬ X ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ, ಒಬ್ಬ ವ್ಯಕ್ತಿ ಬೈಕ್ ಓಡಿಸುತ್ತಿದ್ದರೆ, ಹಿಂದೆ ಕುಳಿತಿರುವ ಮಹಿಳೆ ಇದ್ದಾರೆ. ಆರಂಭದಲ್ಲಿ ಎಲ್ಲವೂ ಸಾಮಾನ್ಯವಾಗಿದ್ದಂತೆ ಕಾಣುತ್ತದೆ. ಆದರೆ, ಕೆಲವೇ ಕ್ಷಣಗಳಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ಆರಂಭವಾಗುತ್ತದೆ. ಕೋಪಗೊಂಡ ಮಹಿಳೆ, ಬೈಕ್ ಚಲಾಯಿಸುತ್ತಿದ್ದ ವ್ಯಕ್ತಿಗೆ ಚಪ್ಪಲಿಯಿಂದ ಹಿಗ್ಗಾಮುಗ್ಗಾ ಥಳಿಸಲು ಶುರುಮಾಡುತ್ತಾರೆ. ಆ ವ್ಯಕ್ತಿ ಬೈಕ್ ಓಡಿಸುವುದನ್ನು ಮುಂದುವರಿಸುತ್ತಿದ್ದರೂ, ಮಹಿಳೆ ಜೋರಾಗಿ ಕೂಗುತ್ತಾ, ಬಿರುಸಿನಿಂದ ಹೊಡೆಯುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ದೃಶ್ಯವನ್ನು ಅಕ್ಕಪಕ್ಕದಲ್ಲಿ ಇದ್ದವರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಬೈಕ್ ಚಪ್ಪಲಿ ವಿಡಿಯೋ (Video) ಎಂದು ಟ್ರೆಂಡ್ ಆಗುತ್ತಿದೆ. ಆದರೆ, ಈ ರೀತಿ ಥಳಿಸಲು ನಿಖರ ಕಾರಣವೇನು ಎಂಬುದು ಮಾತ್ರ ಇನ್ನೂ ತಿಳಿದುಬಂದಿಲ್ಲ.
Read this also : ಅಕ್ಕನ ಟ್ಯಾಲೆಂಟ್ ಗೆ ಫಿದಾ ಆದ ನೆಟ್ಟಿಗರು, ಈರುಳ್ಳಿ ಕತ್ತರಿಸಲು ಹೊಸ ತಂತ್ರ ಕಂಡುಹಿಡಿದ ಮಹಿಳೆ….!
ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here
Video – ನೆಟ್ಟಿಗರಿಂದ ಸಖತ್ ಕಾಮೆಂಟ್‌ಗಳು!
ಈ ವಿಡಿಯೋ ಎರಡು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದ್ದು, ನೆಟ್ಟಿಗರು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. “ಹೆಂಡ್ತೀನಾ ಬೈಕ್‌ನಲ್ಲಿ ಹಿಂಬದಿ ಕೂರಿಸಿಕೊಳ್ಳುವ ಗಂಡಸರೇ ಸ್ವಲ್ಪ ಹುಷಾರು!” ಎಂದು ಒಬ್ಬ ಬಳಕೆದಾರರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, “ಮಹಿಳೆ ಪುರುಷನನ್ನು ಹೊಡೆದರೆ ಅದು ಸಬಲೀಕರಣ, ಅದೇ ಪುರುಷ ಮಹಿಳೆಯನ್ನು ಹೊಡೆದರೆ ಅಪರಾಧ” ಎಂದು ವಿಡಂಬನಾತ್ಮಕವಾಗಿ ಬರೆದಿದ್ದಾರೆ. ಇನ್ನು ಕೆಲವರು, “ಸಾಮಾಜಿಕ ಜಾಲತಾಣಗಳು ಮಹಿಳೆಯರ ಮತ್ತೊಂದು ಮುಖವನ್ನು ಬಹಿರಂಗಪಡಿಸುತ್ತವೆ” ಎಂದು ಕಾಮೆಂಟ್ ಮಾಡಿದ್ದಾರೆ.