DCC Bank Election: ಚುನಾವಣೆ ಹೊತ್ತಿನಲ್ಲೇ ಪಕ್ಷಾಂತರ, ಕಾಂಗ್ರೆಸ್ ಮುಖಂಡರು ಬಿಜೆಪಿಗೆ ಸೇರ್ಪಡೆ….!

DCC Bank Election – ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಬ್ಯಾಂಕ್‌ನ ಆಡಳಿತ ಮಂಡಳಿಯ 18 ನಿರ್ದೇಶಕರ ಸ್ಥಾನಗಳಿಗೆ ಮೇ 28 ರಂದು ಚುನಾವಣೆ ಘೋಷಣೆಯಾಗಿದೆ. ಈ ಚುನಾವಣೆಯ ಹೊತ್ತಿನಲ್ಲೇ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಇಬ್ಬರು ಪ್ರಭಾವಿ ಕಾಂಗ್ರೆಸ್ ಮುಖಂಡರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

DCC Bank Election – ಬಿಜೆಪಿಗೆ ಸೇರಿದ ಪ್ರಮುಖರು

ಮಾಜಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಹಳೇಗುಡಿಬಂಡೆಯ ಹೆಚ್.ಎನ್. ಮಂಜುನಾಥರೆಡ್ಡಿ ಮತ್ತು ಮತ್ತೋರ್ವ ಮುಖಂಡ ಶಿವಣ್ಣ ಅವರು ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಸೇರಿದ್ದಾರೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ.ಕೆ. ಸುಧಾಕರ್ ಅವರ ತಂದೆ ಕೇಶವರೆಡ್ಡಿ ಅವರ ಸಮ್ಮುಖದಲ್ಲಿ ಈ ಇಬ್ಬರೂ ಮುಖಂಡರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.

Former Congress leaders H.N. Manjunath Reddy and Shivanna join BJP in the presence of Keshava Reddy before the Kolar-Chikkaballapur DCC Bank election

ಡೆಲಿಗೇಟ್‌ಗಳ ವಿವರ

ಗುಡಿಬಂಡೆ ತಾಲೂಕಿನ ಡಿಸಿಸಿ ಬ್ಯಾಂಕ್ ನಿರ್ದೇಶಕರನ್ನು ನೇಮಕ ಮಾಡಲು ತಾಲೂಕಿನ 8 ವಿ.ಎಸ್.ಎಸ್.ಎನ್. ಗಳಿಂದ 8 ಜನರನ್ನು ಡೆಲಿಗೇಟ್ ಮಾಡಲಾಗಿದೆ. ಈ ಡೆಲಿಗೇಟ್‌ಗಳಲ್ಲಿ ಕಾಂಗ್ರೆಸ್ ಬೆಂಬಲಿತ 5 ಮತ್ತು ಬಿಜೆಪಿ ಬೆಂಬಲಿತರು ಸೇರಿ ಒಟ್ಟು 8 ಮಂದಿ ಆಯ್ಕೆಯಾಗಿದ್ದಾರೆ. ಈ ಎಂಟು ಮಂದಿಯ ಪೈಕಿ ಕಾಂಗ್ರೆಸ್ ಪಕ್ಷದಿಂದ ಹೆಚ್.ಎನ್. ಮಂಜುನಾಥರೆಡ್ಡಿ, ಬುಳ್ಳಸಂದ್ರ ಬಾಬು ಮತ್ತು ಕೆ.ಜಿ. ಆನಂದರೆಡ್ಡಿ ಅವರು ನಿರ್ದೇಶಕ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಗಳಾಗಿದ್ದರು. ಈ ಮೂವರಲ್ಲಿ ಬುಳ್ಳಸಂದ್ರ ಬಾಬು ಅಥವಾ ಕೆ.ಜೆ. ಆನಂದರೆಡ್ಡಿ ಅವರಲ್ಲಿ ಒಬ್ಬರಿಗೆ ಕಾಂಗ್ರೆಸ್ ಪಕ್ಷದ ಬೆಂಬಲ ಇರುವುದಾಗಿ ಸುದ್ದಿಗಳು ಹರಿದಾಡಿದ್ದವು.

ಪಕ್ಷಾಂತರಕ್ಕೆ ಕಾರಣ

ತಮಗೆ ಕಾಂಗ್ರೆಸ್ ಪಕ್ಷದಿಂದ ಬೆಂಬಲ ಸಿಗುವುದಿಲ್ಲ ಎಂಬ ಮಾಹಿತಿ ದೊರೆತ ನಂತರ ಮಾಜಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಹೆಚ್.ಎನ್. ಮಂಜುನಾಥರೆಡ್ಡಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ತಾಲೂಕಿನ ಕಾಂಗ್ರೆಸ್ ಮುಖಂಡರು ಮಂಜುನಾಥರೆಡ್ಡಿ ಅವರು ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. Read this also : Atal Pension Yojana : ಅಟಲ್ ಪೆನ್ಷನ್ ಯೋಜನೆಯಡಿ ಈಗ 7.65 ಲಕ್ಷ ಸದಸ್ಯರು, ಈ ಪಿಂಚಣಿ ಯಾರಿಗೆಲ್ಲಾ ಲಾಭ? ಇಲ್ಲಿದೆ ಸಂಪೂರ್ಣ ಮಾಹಿತಿ..!

DCC Bank Election – ತಾಲೂಕಿನಿಂದ ಡೆಲಿಗೇಟ್ ಆದ 8 ಮಂದಿ

  • ಪೋಲಂಪಲ್ಲಿ ವಿ.ಎಸ್.ಎಸ್.ಎನ್ ನಿಂದ ಪಿ.ವಿ. ನಾರಾಯಣಪ್ಪ
  • ಕಸಬಾ ವಿ.ಎಸ್.ಎಸ್.ಎನ್ ನಿಂದ ಹೆಚ್.ಎನ್. ಮಂಜುನಾಥರೆಡ್ಡಿ
  • ಹಂಪಸಂದ್ರ ವಿ.ಎಸ್.ಎಸ್.ಎನ್ ನಿಂದ ಕೆ.ಜೆ. ಆನಂದರೆಡ್ಡಿ
  • ಪಸುಪಲೋಡು ವಿ.ಎಸ್.ಎಸ್.ಎನ್ ನಿಂದ ಎಂ.ವಿ. ಶಿವಣ್ಣ
  • ಚೌಟಕುಂಟಹಳ್ಳಿ ವಿ.ಎಸ್.ಎಸ್.ಎನ್ ನಿಂದ ಬುಳ್ಳಸಂದ್ರ ಬಾಬು
  • ತಿರುಮಣಿ ವಿ.ಎಸ್.ಎಸ್.ಎನ್ ನಿಂದ ರಾಮರೆಡ್ಡಿ
  • ಸೋಮೇನಹಳ್ಳಿ ವಿ.ಎಸ್.ಎಸ್.ಎನ್ ನಿಂದ ನರಸಿಂಹಮೂರ್ತಿ
  • ಚಿಕ್ಕಕುರುಬರಹಳ್ಳಿ ವಿ.ಎಸ್.ಎಸ್.ಎನ್ ನಿಂದ ಪಾವಜೇನಹಳ್ಳಿ ನಾಗರಾಜರೆಡ್ಡಿ

Former Congress leaders H.N. Manjunath Reddy and Shivanna join BJP in the presence of Keshava Reddy before the Kolar-Chikkaballapur DCC Bank election

ಮುಂದಿನ ನಡೆ ಏನು?

ನಿರ್ದೇಶಕ ಚುನಾವಣೆ ನಡೆದರೆ 5 ಮಂದಿ ಮತ ಪಡೆಯುವಂತಹ ಅಭ್ಯರ್ಥಿಗಳು ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಲಿದ್ದಾರೆ. ಸದ್ಯ ಕಾಂಗ್ರೆಸ್ ಪಕ್ಷವನ್ನು ತೊರೆದು ಇಬ್ಬರು ಪ್ರಭಾವಿಗಳು ಬಿಜೆಪಿ ಸೇರ್ಪಡೆಯಾಗಿರುವುದು ಮುಂದಿನ ದಿನಗಳಲ್ಲಿ ಯಾವ ರೀತಿಯ ರಾಜಕೀಯ ತಿರುವು ಪಡೆದುಕೊಳ್ಳಲಿದೆ ಎಂದು ಕಾದು ನೋಡಬೇಕಿದೆ.

Leave a Comment

Your email address will not be published. Required fields are marked *

Scroll to Top