Muda Scam ಇಡಿ ತನಿಖೆಗೆ ಹೈಕೋರ್ಟ್ ಅನುಮತಿ – ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ?

Muda Scam – ಮುಡಾ ಹಗರಣ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ED) ತನಿಖೆಗೆ ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ಇಂದು ಹಸಿರು ನಿಶಾನೆ ತೋರಿದೆ. ಮುಡಾ ಮಾಜಿ ಆಯುಕ್ತ ಡಿ.ಬಿ. ನಟೇಶ್ ಅವರ ಹೇಳಿಕೆ ಮತ್ತು ದಾಖಲೆಗಳ ಆಧಾರದಲ್ಲಿ ಇತರ ಆರೋಪಿಗಳ ವಿರುದ್ಧ ತನಿಖೆಗೆ ಇಡಿಗೆ ಅವಕಾಶ ನೀಡಿ ಕೋರ್ಟ್ ಆದೇಶ ಹೊರಡಿಸಿದೆ. ಈ ಆದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಪ್ರಮುಖರಿಗೆ ಕಾನೂನಿನ ಸಂಕಷ್ಟ ಎದುರಾಗುವ ಸಾಧ್ಯತೆ ದಟ್ಟವಾಗಿದೆ.

Muda Scam – ಏನಾಗಿತ್ತು ಈ ಹಿಂದೆ?

ಈ ಮೊದಲು ಹೈಕೋರ್ಟ್ ಏಕಸದಸ್ಯ ಪೀಠವು ಇಡಿ ತನಿಖೆಗೆ ತಡೆ ನೀಡಿ, ಡಿ.ಬಿ. ನಟೇಶ್ ಮನೆ ಶೋಧ ಮತ್ತು ದಾಖಲೆ ಜಪ್ತಿ ಆದೇಶ ರದ್ದುಗೊಳಿಸಿತ್ತು. ಸಿಎಂ ಪತ್ನಿ ಪಾರ್ವತಿ ಹಾಗೂ ಭೈರತಿ ಸುರೇಶ್ ಅವರಿಗೆ ಇಡಿ ನೀಡಿದ್ದ ಸಮನ್ಸ್ ಕೂಡ ರದ್ದಾಗಿತ್ತು. ಆದರೆ, ಇಡಿ ಈ ಆದೇಶವನ್ನು ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು. ಇದೀಗ ವಿಭಾಗೀಯ ಪೀಠವು ಇಡಿ ತನಿಖೆಗೆ ಅನುಮತಿ ನೀಡಿದ್ದು, ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

Muda Scam – ಇಡಿ ಮತ್ತೆ ಸಕ್ರಿಯ

ಈ ಹಿಂದೆ ಇಡಿ ಬೆಂಗಳೂರು, ಮೈಸೂರಿನಲ್ಲಿ ದಾಳಿ ನಡೆಸಿ, ರಾಕೇಶ್ ಪಾಪಣ್ಣ, ಅವರ ತಂದೆ ಪಾಪಣ್ಣ ಮತ್ತು ನಟೇಶ್ ಮನೆಗಳಿಂದ ದಾಖಲೆಗಳನ್ನು ಜಪ್ತಿ ಮಾಡಿತ್ತು. ಆದರೆ, ಕೋರ್ಟ್ ತಡೆಯಿಂದ ತನಿಖೆ ಸ್ಥಗಿತಗೊಂಡಿತ್ತು. ಇದೀಗ ಹೈಕೋರ್ಟ್ ಅನುಮತಿಯಿಂದ ಇಡಿ ಮತ್ತೆ ಕಾರ್ಯಪ್ರವೃತ್ತವಾಗಲಿದೆ. ಇದೇ ವೇಳೆ, ಲೋಕಾಯುಕ್ತ ವರದಿಯನ್ನು ತಿರಸ್ಕರಿಸುವಂತೆ ಇಡಿ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ. ಕೋರ್ಟ್ ತೀರ್ಪು ಈ ಪ್ರಕರಣದ ಭವಿಷ್ಯ ನಿರ್ಧರಿಸಲಿದೆ.

Read this also : ಮುಡಾ ಕೇಸ್ ಪ್ರಕರಣದ ತನಿಖೆ ನಡೆಸಲು ಇ.ಡಿಗೆ ಅಧಿಕಾರವೇ ಇಲ್ಲ ಎಂದ ಸಿಎಂ ಸಿದ್ದರಾಮಯ್ಯ…!

Muda Scam – ಸಿಬಿಐ ತನಿಖೆಗೆ ನಕಾರ

ಮುಡಾ ಹಗರಣವನ್ನು ಸಿಬಿಐಗೆ ವರ್ಗಾಯಿಸಬೇಕೆಂದು ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿ ಹೈಕೋರ್ಟ್‌ನಲ್ಲಿ ವಜಾಗೊಂಡಿತ್ತು. ಸಿಎಂ ಪತ್ನಿ ಪಾರ್ವತಿಗೆ ಇಡಿ ಸಮನ್ಸ್ ರದ್ದಾಗಿದ್ದರಿಂದ ಸಿದ್ದರಾಮಯ್ಯ ದಂಪತಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿತ್ತು. ಆದರೆ, ಇದೀಗ ಇಡಿ ತನಿಖೆಗೆ ಅವಕಾಶ ಸಿಕ್ಕಿದ್ದು, ಆರೋಪಿಗಳಿಗೆ ಒತ್ತಡ ಹೆಚ್ಚಾಗಿದೆ.

1 thought on “Muda Scam ಇಡಿ ತನಿಖೆಗೆ ಹೈಕೋರ್ಟ್ ಅನುಮತಿ – ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ?”

  1. Pingback: MUDA Scam :  ಸಿದ್ದರಾಮಯ್ಯಗೆ ಸಂಕಷ್ಟ? ತನಿಖೆ ಮುಂದುವರಿಸಲು ಲೋಕಾಯುಕ್ತಕ್ಕೆ ಕೋರ್ಟ್ ಆದೇಶ…! - ISM Kannada News

Leave a Comment

Your email address will not be published. Required fields are marked *

Scroll to Top