Wednesday, July 30, 2025
HomeInternationalWatch: ಅಮೆರಿಕಾದಲ್ಲಿ ವಿಚಿತ್ರ ಕಳ್ಳತನ ಯತ್ನ: ಹೆಬ್ಬಾವುಗಳನ್ನು ಬಳಸಿ ಗ್ಯಾಸ್ ಸ್ಟೇಷನ್‌ನಲ್ಲಿ ಕಳ್ಳತನಕ್ಕೆ ಯತ್ನಿಸಿದ ಕಳ್ಳರು…!

Watch: ಅಮೆರಿಕಾದಲ್ಲಿ ವಿಚಿತ್ರ ಕಳ್ಳತನ ಯತ್ನ: ಹೆಬ್ಬಾವುಗಳನ್ನು ಬಳಸಿ ಗ್ಯಾಸ್ ಸ್ಟೇಷನ್‌ನಲ್ಲಿ ಕಳ್ಳತನಕ್ಕೆ ಯತ್ನಿಸಿದ ಕಳ್ಳರು…!

Watch – ಅಮೆರಿಕಾದ ಟೆನ್ನೆಸ್ಸೀ ರಾಜ್ಯದ ಗ್ಯಾಸ್ ಸ್ಟೇಷನ್ ಒಂದರಲ್ಲಿ ನಡೆದ ವಿಚಿತ್ರ ಕಳ್ಳತನ ಯತ್ನದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಘಟನೆ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ದುಷ್ಕರ್ಮಿಗಳು ಕಳ್ಳತನಕ್ಕೆ ಹೆಬ್ಬಾವುಗಳನ್ನು ಬಳಸಲು ಪ್ರಯತ್ನಿಸಿದ ಘಟನೆ ಇದಾಗಿದೆ.

Watch – ಘಟನೆಯ ವಿವರ ಹೀಗಿದೆ:

ನಿನ್ನೆ ರಾತ್ರಿ, ಟೆನ್ನೆಸ್ಸೀ ರಾಜ್ಯದ ಒಂದು ಗ್ಯಾಸ್ ಸ್ಟೇಷನ್‌ನಲ್ಲಿ ಮೂವರು ವ್ಯಕ್ತಿಗಳು ಒಳನುಗ್ಗಿ ಕಳ್ಳತನಕ್ಕೆ ಯತ್ನಿಸಿದ್ದಾರೆ. ಸಿಸಿಟಿವಿ ದೃಶ್ಯಗಳ ಪ್ರಕಾರ, ಮಹಿಳೆಯೊಬ್ಬರು ಕ್ಯಾಷಿಯರ್‌ನೊಂದಿಗೆ ಮಾತನಾಡುತ್ತಿದ್ದರೆ, ಇನ್ನೊಬ್ಬ ವ್ಯಕ್ತಿ ಕೈಯಲ್ಲಿ ಹೆಬ್ಬಾವನ್ನು ಹಿಡಿದುಕೊಂಡು ಒಳಗೆ ಬಂದಿದ್ದಾರೆ. ಆ ವ್ಯಕ್ತಿ ಹೆಬ್ಬಾವನ್ನು ಕೌಂಟರ್ ಮೇಲೆ ಇಟ್ಟಿದ್ದು, ಇದರಿಂದ ಕ್ಯಾಷಿಯರ್ ಗಾಬರಿಗೊಂಡಿದ್ದಾರೆ. ತಕ್ಷಣ ಕ್ಯಾಷಿಯರ್ ಫೋಟೋ ತೆಗೆಯಲು ಪ್ರಯತ್ನಿಸಿದ್ದು, ಆಗ ದುಷ್ಕರ್ಮಿಗಳು ಮೊಬೈಲ್ ಫೋನ್ ಕಸಿದುಕೊಳ್ಳಲು ಪ್ರಯತ್ನಿಸಿದ್ದಾರೆ.

Watch - A gas station in Tennessee where criminals attempted a robbery using snakes

Read this also : ಕಳ್ಳತನ ಮಾಡಲು ಮನೆಯೊಳಗೆ ನುಗ್ಗಿದ ಕಳ್ಳರು, ಏನು ಸಿಗದೇ ಇದ್ದ ಕಾರಣ ಅವರು ಮಾಡಿದ್ದಾದ್ರೂ ಏನು ಗೊತ್ತಾ?

ಕ್ಯಾಷಿಯರ್ ತನ್ನ ಫೋನ್ ಅನ್ನು ರಕ್ಷಿಸಿಕೊಂಡಿದ್ದು, ನಂತರ ಮೂರನೇ ವ್ಯಕ್ತಿಯೊಬ್ಬರು ಮತ್ತೊಂದು ಹೆಬ್ಬಾವನ್ನು ತಂದು ಕೌಂಟರ್ ಮೇಲೆ ಎಸೆದಿದ್ದಾರೆ. ಈ ಘಟನೆಯಿಂದ ಕ್ಯಾಷಿಯರ್ ತೀವ್ರವಾಗಿ ಭಯಭೀತರಾಗಿದ್ದಾರೆ. ತಕ್ಷಣ ಕ್ಯಾಷಿಯರ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಆಗಮಿಸುವ ಮುನ್ನ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

Watch – ವೈರಲ್ ಆದ ವಿಡಿಯೋ

ಪೊಲೀಸರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುತ್ತಿದ್ದಾರೆ. ದುಷ್ಕರ್ಮಿಗಳು ಕಳ್ಳತನಕ್ಕಾಗಿಯೇ ಹೆಬ್ಬಾವುಗಳನ್ನು ಗ್ಯಾಸ್ ಸ್ಟೇಷನ್‌ಗೆ ತಂದಿದ್ದಾರೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಆದರೆ, ದುಷ್ಕರ್ಮಿಗಳು ಏನನ್ನಾದರೂ ಕದ್ದಿದ್ದಾರೆಯೇ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Viral Video is here : Click Here

ಈ ಘಟನೆಯ ಸಿಸಿಟಿವಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅನೇಕ ಜನರು ಇದನ್ನು ಹಂಚಿಕೊಂಡಿದ್ದಾರೆ. ಕೆಲವರು ದುಷ್ಕರ್ಮಿಗಳ ಕೃತ್ಯಕ್ಕೆ ಆಶ್ಚರ್ಯ ವ್ಯಕ್ತಪಡಿಸಿದರೆ, ಇನ್ನು ಕೆಲವರು ಈ ಘಟನೆಯನ್ನು ಹಾಸ್ಯಸ್ಪದವಾಗಿ ಪರಿಗಣಿಸಿದ್ದಾರೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular