HomeStateDharmasthala : ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ವಾತ್ಸಲ್ಯ ಮನೆ ಹಸ್ತಾಂತರ...!

Dharmasthala : ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ವಾತ್ಸಲ್ಯ ಮನೆ ಹಸ್ತಾಂತರ…!

Dharmasthala – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಮೇಡಿಮಾಕಲಹಳ್ಳಿ ಗ್ರಾಮದ ನಿವಾಸಿ ಮುದ್ದಮ್ಮ ಎಂಬುವವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವಾತ್ಸಲ್ಯ ಕಾರ್ಯಕ್ರಮದಡಿ ಮನೆ ಮಂಜೂರಾಗಿದ್ದು, ಮನೆಯನ್ನು ಮುದ್ದಮ್ಮರವರಿಗೆ ಹಸ್ತಾಂತರ ಮಾಡಲಾಯಿತು.

Dharmasthala - Muddamma receiving a newly constructed house under the Dharmasthala Vatsalya Program in Chikkaballapur district

Dharmasthala –  ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳು

ಈ ವೇಳೆ ಮಾತನಾಡಿದ ಯೋಜನೆಯ ಬೆಂಗಳೂರು ಪ್ರಾದೇಶಿಕ ವಿಭಾಗದ ನಿರ್ದೇಶಕ ಎಂ.ಸೀನಪ್ಪ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳಲ್ಲಿ ವಾತ್ಸಲ್ಯ ಕಾರ್ಯಕ್ರಮವು ಹೆಸರಿಗೆ ತಕ್ಕಂತೆ ಅನಾಥರಿಗೆ ನಿರ್ಗತಿಕರಿಗೆ ಸೂರು ಕಲ್ಪಿಸಿ ಕೊಡುವ ಮತ್ತು ಸಾಂತ್ವಾನ ನೀಡುವ ಕಾರ್ಯಕ್ರಮವಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಮಾತೃಶ್ರೀ ಹೇಮಾವತಿ ಅಮ್ಮನವರು ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ. ರಾಜ್ಯದಾದ್ಯಂತ ಸುಮಾರು ೨೦ ಸಾವಿರ ಕುಟುಂಬಗಳಿಗೆ ಮಾಶಾಸನ ನೀಡುತ್ತಿದ್ದಾರೆ ಹಾಗೂ 500 ವಾತ್ಸಲ್ಯ ಮನೆ ರಚನೆ ಮಾಡಿಕೊಟ್ಟಿದ್ದಾರೆ ಅದಲ್ಲದೆ ಜಲಮಂಗಲ ಕಾರ್ಯಕ್ರಮ  ಕೆರೆ ಹೂಳೆತ್ತುವ ಕಾರ್ಯಕ್ರಮ ಹೀಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹತ್ತು ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದೆ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದ ಮೂಲಕ ಮಹಿಳಾ ಸಬಲೀಕರಣಕ್ಕಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಮುದ್ದಮ್ಮ ರವರು  ನೆಮ್ಮದಿಯ ಬದುಕು ಕಟ್ಟಿಕಕೊಂಡು ತಮ್ಮ ಜೀವನವನ್ನು ಕಳೆಯಲು ಈ ದಿನ ಸರಳವಾದ ಮನೆಯನ್ನು ನಿರ್ಮಾಣ ಮಾಡಲು ನಮ್ಮ ಯೋಜನೆ ಅವಕಾಶ ಕಲ್ಪಿಸಿದ್ದಾರೆ ಮುದ್ದಮ್ಮ ರವರ ಬದುಕು, ನೆಮ್ಮದಿಯಿಂದ ಸಾಗಲಿ ಎಂಬುದಾಗಿ ಎಂದು ಶುಭ ಹಾರೈಸಿದರು.

Read this also : ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ನಾವೆಲ್ಲರೂ ಮುಂದಾಗಬೇಕು: ಪ್ರಶಾಂತ್

Dharmasthala- ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜೆನೆಯ ಕಾರ್ಯಕ್ರಮಗಳು ಶ್ಲಾಘನೀಯ

ಬಳಿಕ ತಾಲೂಕು ಪಂಚಾಯತಿ ಇ.ಒ ನಾಗಮಣಿ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಉತ್ತಮ ಕಾರ್ಯಗಳನ್ನು ಮಾಡುತ್ತಿದೆ. ಮಾತೃಶ್ರೀ ಹೇಮಾವತಿ ಅಮ್ಮನವರು ನಿರ್ಗತಿಕರ ಅನಾಥರ ಸಮೀಕ್ಷೆಗಳನ್ನು ಮಾಡಿಸಿ ಅವರಿಗೆ ಊರು ಕಲ್ಪಿಸಿ ಕೊಡುವ ಹಾಗೂ ಮಾಸಾಶನ ನೀಡುವ ಕಾರ್ಯಕ್ರಮವನ್ನು ಮಾಡುತ್ತಿರುವುದು ಶ್ಲಾಘನೀಯ ಇಂತಹ ಕಾರ್ಯಕ್ರಮಗಳನ್ನು ಅವರು ಮಾಡುವಾಗ ನಾವೆಲ್ಲರೂ ಅವರಿಗೆ ಸಹಕಾರ ನೀಡಬೇಕು ಎಂದರು.

Dharmasthala - Muddamma receiving a newly constructed house under the Dharmasthala Vatsalya Program in Chikkaballapur district

Dharmasthala – ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದವರು

ಈ ಸಂದರ್ಭದಲ್ಲಿ ಜನಜಾಗೃತಿ ವೇದಿಕೆಯ ಸದಸ್ಯರಾದ ಪರಿಮಳ ರೆಡ್ಡಿ ರವರು ಯೋಜನೆಯ ಕಾರ್ಯಕ್ರಮಗಳ ಬಗ್ಗೆ ತಿಳಿಸಿ ಮುದ್ದಮ್ಮ ರವರಿಗೆ ಶುಭ ಹಾರೈಸಿದರು. ಈ ಸಮಯದಲ್ಲಿ  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಚಿಕ್ಕಬಳ್ಳಾಪುರ ಜಿಲ್ಲಾ ನಿರ್ದೇಶಕರಾದ ಸಿ.ಎಸ್.ಪ್ರಶಾಂತ್, ಗ್ರಾ.ಪಂ. ಅಧ್ಯಕ್ಷ ಭೀಮಪ್ಪ, ಪಿಡಿಒ ಶ್ರೀನಿವಾಸಮೂರ್ತಿ,  ಬೆಂಗಳೂರು ಪ್ರಾದೇಶಿಕ ಜ್ಞಾನವಿಕಾಸ ಯೋಜನಾಧಿಕಾರಿ ಸಂಧ್ಯಾ ವಿ ಶೆಟ್ಟಿ, ಚಿಕ್ಕಬಳ್ಳಾಪುರ ತಾಲೂಕಿನ ಯೋಜನಾಧಿಕಾರಿ ಧನಂಜಯ್  ಸೇರಿದಂತೆ ಹಲವರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular