Crime – ಅಕ್ರಮ ಸಂಬಂಧಗಳ ಕಾರಣದಿಂದ ಅದೆಷ್ಟೋ ಕುಟುಂಬಗಳು ಬೀದಿಗೆ ಬಿದ್ದಿದೆ. ಅದರಲ್ಲೂ ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಪರಿಚಯವಾದವರು ಕೊಲೆಯಾದ ಘಟನೆಗಳ ಬಗ್ಗೆಯೂ ಕೇಳಿರುತ್ತೇವೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ತಾನು ತಾಳಿ ಕಟ್ಟಿದ ಪತ್ನಿಯನ್ನು ಬಿಟ್ಟು ಇನ್ಸ್ಟಾಗ್ರಾಂ ನಲ್ಲಿ ಪರಿಚಯವಾದ ಸುಂದರಿಯ ಹಿಂದೆ ಹೋದ ವ್ಯಕ್ತಿಯೊರ್ವ ಕೊಲೆಯಾಗಿದ್ದಾನೆ. ಈ ಕೊಲೆಗೆ ಇನ್ಸ್ಟಾಗ್ರಾಂ ಸುಂದರಿಯೇ ಕಾರಣ ಎಂಬ ಅನುಮಾನ ಸಹ ವ್ಯಕ್ತವಾಗಿದೆ ಎಂದು ತಿಳಿದುಬಂದಿದೆ.
ಮೈಸೂರು ತಾಲ್ಲೂಕಿನ ಅನುಗನಹಳ್ಳಿಯ ನಿವಾಸಿ ದೊರೆಸ್ವಾಮಿ ಅಲಿಯಾಸ್ ಸೂರ್ಯ (32) ಇನ್ಸ್ಟಾಗ್ರಾಮ್ನಲ್ಲಿ ಪರಿಚಯವಾದ ಸುಂದರಿ ಶ್ವೇತಾಳ ಬಲೆಗೆ ಬಿದ್ದು ದುರಂತ ಅಂತ್ಯ ಕಂಡಿದ್ದಾನೆ. ಮದುವೆಯಾಗಿ ಇಬ್ಬರು ಮಕ್ಕಳ ತಂದೆಯಾಗಿದ್ದರೂ ಸಹ ಸೋಷಿಯಲ್ ಮೀಡಿಯಾದ ಮೂಲಕ ಶ್ವೇತಾಳೊಂದಿಗೆ ಸಂಬಂಧ ಬೆಳೆಸಿದ್ದ ಸೂರ್ಯ, ಕಳೆದ ಮಾರ್ಚ್ 14 ರಾತ್ರಿ ಕೊಲೆಯಾಗಿದ್ದಾನೆ. ಸುಮಾರು ಆರೇಳು ವರ್ಷಗಳ ಹಿಂದೆ ಮೈಸೂರಿನ ಹಿನಕಲ್‌ನ ನಿವಾಸಿ ದೀಪಿಕಾಳ ಮದುವೆಯಾಗಿದ್ದ ರೌಡಿ ಶೀಟರ್ ಸೂರ್ಯ ಇದೀಗ ಇನ್ಸ್ಟಾ ಸುಂದರಿಯ ಹಿಂದೆ ಬಿದ್ದು ಕೊಲೆಯಾಗಿದ್ದಾನೆ.

ನಿನ್ನೆ (ಮಾರ್ಚ್ 14) ರಾತ್ರಿ ಅನುಗನಹಳ್ಳಿಯ ತೋಟದ ಮನೆಯಲ್ಲಿ ಶ್ವೇತಾ ಹಾಗೂ ಸೂರ್ಯ ಒಟ್ಟಾಗಿ ಇದ್ದರು. ಆದರೆ ಬೆಳಿಗ್ಗೆ, ಸೂರ್ಯನ ಮೃತದೇಹ ಪತ್ತೆಯಾಗಿದೆ. ಅದೇ ಸ್ಥಳದಲ್ಲಿ ಹೋಟೆಲ್ ಆಹಾರ ಪದಾರ್ಥಗಳು ಬಿದ್ದಿದ್ದು, ಶ್ವೇತಾಳ ಸಂಬಂಧಿತ ವಸ್ತುಗಳು ಪತ್ತೆಯಾಗಿವೆ. ಶ್ವೇತಾ ಮಾತ್ರ ಕಾಣೆಯಾಗಿದ್ದು, ಈ ಪ್ರಕರಣದ ಹಿಂದೆ ಆಕೆಯ ಕೈವಾಡ ಇರಬಹುದೆಂದು ಅನುಮಾನ ವ್ಯಕ್ತವಾಗಿದೆ. ಇನ್ನೂ ಸೂರ್ಯ ಮತ್ತು ದೀಪಿಕಾ ಮದುವೆಯಾದ ಆರಂಭದಲ್ಲಿ ಸಂತೋಷ ಜೀವನ ಸಾಗಿಸುತ್ತಿದ್ದರು. ಆದರೆ ಶ್ವೇತಾ ಅವರ ಜೀವನಕ್ಕೆ ಪ್ರವೇಶಿಸಿದ ಬಳಿಕ ಎಲ್ಲವೂ ಬದಲಾಗಿದೆ. ಸೂರ್ಯ, ಶ್ವೇತಾಳೊಂದಿಗೆ ಫೋಟೋಗಳನ್ನು ಸ್ಟೇಟಸ್ ನಲ್ಲಿ ಅಪ್‌ಲೋಡ್ ಮಾಡುತ್ತಿದ್ದ. ಇದರಿಂದ ಕೋಪಗೊಂಡ ಪತ್ನಿ ದೀಪಿಕಾ ಮತ್ತು ತಾಯಿ ಪುಷ್ಪ ಮನೆ ಬಿಟ್ಟು ತವರು ಮನೆ ಸೇರಿದ್ದರು. ಈ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಸೂರ್ಯಗೆ ದಿನದಿನಕ್ಕೂ ಶ್ವೇತಾ ಹಣಕ್ಕಾಗಿ ತೊಂದರೆ ಕೊಡುತ್ತಿದ್ದಳಂತೆ. ಆಸ್ತಿ ಮಾರಾಟ ಮಾಡೋಕೆ ಪ್ರೇರೇಪಿಸುತ್ತಿದ್ದಳಂತೆ. ಆದರೆ ಕುಟುಂಬಸ್ಥರು ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ, ಸೂರ್ಯನೇ ಮನೆಯವರ ಮೇಲೆ ಒತ್ತಡ ತರುತ್ತಿದ್ದನಂತೆ. ಪತ್ನಿ ದೀಪಿಕಾ, ತಾಯಿ ಪುಷ್ಪ ಈ ಪರಿಸ್ಥಿತಿಯಿಂದ ಬೇಸತ್ತು ಮನೆ ಬಿಟ್ಟು ಹೋಗಿದ್ದರು. ಸೂರ್ಯ ತನ್ನ ಕುಟುಂಬದವರಿಗೂ ಬೆದರಿಕೆ ಹಾಕಿದ್ದನಂತೆ. ಈ ಭಯದಿಂದಲೇ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಕೊನೆಯ ದಿನಗಳವರೆಗೆ ಸೂರ್ಯ ಟಾರ್ಚರ್ ಬಗ್ಗೆ ಕುಟುಂಬಸ್ಥರಿಗೆ ವಾಯ್ಸ್ ಮೆಸೆಜ್ ಕಳುಹಿಸುತ್ತಿದ್ದ ಎನ್ನಲಾಗಿದೆ. ಸದ್ಯ ಈ ಕೊಲೆಯ ಹಿಂದಿನ ಸತ್ಯಾಸತ್ಯತೆ ಪೊಲೀಸರ ತನಿಖೆಯಿಂದ ಹೊರಬರಬೇಕಿದೆ.