Kodagu: ಕೊಡಗಿನಲ್ಲಿ ನಿರ್ಮಾಣವಾದ ಕರ್ನಾಟಕದ ಮೊದಲ ಅತೀ ಎತ್ತರದ ಗಾಜಿನ ಸೇತುವೆ, ಪ್ರವಾಸೋದ್ಯಮಕ್ಕೆ ಮತ್ತೊಂದು ಗರಿ….!

ಕರ್ನಾಟಕ ರಾಜ್ಯ ಕೊಡಗು ವ್ಯಾಪ್ತಿಯ ಪ್ರವಾಸೋದ್ಯಮ ಈಗಾಗಲೇ ಅಸಂಖ್ಯಾತ ಪ್ರವಾಸಿಗರನ್ನು ತನ್ನತ್ತ ಸೆಳೆದುಕೊಳ್ಳುತ್ತಿದೆ. ಇದೀಗ ಮತಷ್ಟು ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಮತ್ತೊಂದು ಪ್ರಯತ್ನವನ್ನು ಮಾಡಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಮತ್ತೊಂದು ಅತೀ ಉದ್ದದ ಗಾಜಿನ ಸೇತುವೆ ಸಿದ್ದಗೊಂಡಿದ್ದು, ಈ ಸೇತುವೆ ಕರ್ನಾಟಕದ ಮೊದಲ ಅತಿ ಉದ್ದ ಹಾಗೂ ಎತ್ತರದ ಗ್ಲಾಸ್ ಬ್ರಿಡ್ಜ್ ಇದಾಗಿದೆ. ಮಡಿಕೇರಿ ತಾಲೂಕಿನ ಕೆ.ನಿಡುಗಣೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಬ್ಬಿಫಾಲ್ಸ್ ಜಂಕ್ಷನ್ ಬಳಿ ಈ ಗಾಜಿನ ಸೇತುವೆಯನ್ನು ನಿರ್ಮಾಣ ಮಾಡಲಾಗಿದೆ.

kodagu glass bridge 0

ಕರ್ನಾಟಕದ ಕೊಡಗು ವ್ಯಾಪ್ತಿಯ ಪ್ರಾಕೃತಿಕ ತಾಣಗಳಿಗೆ ಅಸಂಖ್ಯಾತ ಪ್ರವಾಸಿಗರು ಭೇಟಿ ನೀಡಲು ಬರುತ್ತಿರುತ್ತಾರೆ. ಇದೀಗ ಈ ಪ್ರವಾಸೋದ್ಯಮಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಮಡಿಕೇರಿ ವ್ಯಾಪ್ತಿಯ ಅಬ್ಬಿಫಾಲ್ಸ್ ಬಳಿ ಕರ್ನಾಟಕದ ಮೊದಲ ಗಾಜಿನ ಸೇತುವೆ ನಿರ್ಮಾಣ ಮಾಡಲಾಗಿದೆ. ಈ ಸೇತುವೆ ತಳಮಟ್ಟದಿಂದ ಬರೋಬ್ಬರಿ 250ಅಡಿ ಎತ್ತರ ಹಾಗೂ 80 ಅಡಿಗೂ ಹೆಚ್ಚು ಉದ್ದವಿದೆ. ಭೂಮಿಯ ಮಟ್ಟದಿಂದ 250 ಅಡಿ ಎತ್ತರವಿರುವುದರಿಂದ ಈ ಗಾಜಿನ ಸೇತುವೆ ಮೇಲೆ ನಡೆಯಲು ಕೆಲವರಿಗೆ ಭಯವಾಗಬಹುದು. ಜೊತೆಗೆ ಅನೇಕರು ಥ್ರಿಲ್ ಆಗಿಯೂ ಫೀಲ್ ಆಗುತ್ತಿರುತ್ತಾರೆ. ಈ ಗಾಜಿನ ಸೇತುವೆ ಮೇಲೆ ಹೆಜ್ಜೆಯಿಟ್ಟರೇ ಎತ್ತರದಿಂದ ಕೆಳಗೆ ಬೀಳುತ್ತೇವೆ ಎಂಬ ಭಯ ಆವರಿಸುತ್ತದೆ.

ಇನ್ನೂ ಈ ಸೇತುವೆಯ ಮೇಲೆ ನಡೆಯುತ್ತಾ ಹೋಗುತ್ತಿದ್ದರೇ ಸುತ್ತಲೂ ಇರುವಂತಹ ಹಸಿರು, ಬೆಟ್ಟಗುಡ್ಡಗಳ ರಾಶಿ ನೋಡುಗರ ಮನಸೋರೆಗೊಳ್ಳುವಂತೆ ಮಾಡುತ್ತದೆ.  80 ಅಡಿಯಷ್ಟು ದೂರು ಇರುವ ಈ ಸೇತುವೆಯಲ್ಲಿ ನಡೆದು ಸೇತುವೆಯ ತುದಿಗೆ ತಲುಪಿದರೇ ಆಳವಾದ ಜಾಗದಲ್ಲಿ ಹಸಿರು ಕಾಡು ಪ್ರವಾಸಿಗರನ್ನು ಮಂತ್ರಮುಗ್ದರನ್ನಾಗಿ ಮಾಡುವುದು ಪಕ್ಕಾ ಎಂದೇ ಹೇಳಲಾಗುತ್ತದೆ. ಸೇತುವೆ ತುದಿಯಲ್ಲಿ ಗೋಪುರವಿದ್ದು, ಈ ಗೋಪುರದ ಮೇಲೆ ಹುಟ್ಟುಹಬ್ಬ ಸೇರಿದಂತೆ ಕೆಲವೊಂದು ಸೆಲೆಬ್ರೇಷನ್ ಗಳನ್ನು ಸಹ ಮಾಡಿಕೊಳ್ಳಬಹುದು. ಅಬ್ಬಿ ಜಲಪಾತದ ಕಡೆ ಹೋಗುವಂತಹ ಪ್ರವಾಸಿಗರು ಈ ಗಾಜಿನ ಸೇತುವೆಯನ್ನು ವೀಕ್ಷಣೆ ಮಾಡಬಹುದು.ಈ ಸೇತುವೆಯ ಮೇಲೆ ಒಂದೇ ಸಮಯದಲ್ಲಿ 35 ಮಂದಿ ನಿಂತು ವೀಕ್ಷಣೆ ಮಾಡಬಹುದಾಗಿದೆ. ಸೇತುವೆಯ ಎರಡೂ ಭಾಗಗಳಲ್ಲಿ ತಡೆಗೋಡೆಗಳಿಗೆ ಬಣ್ಣ ಬಣ್ಣದ ದೀಪಗಳನ್ನು ಅಲಂಕರಿಸಲಾಗಿದೆ. ಪ್ರತಿ ಒಬ್ಬರಿಗೆ 300 ರೂಪಾಯಿ ಪ್ರವೇಶ ಶುಲ್ಕವನ್ನು ನಿಗಧಿಪಡಿಸಲಾಗಿದೆ.

Leave a Comment

Your email address will not be published. Required fields are marked *

Scroll to Top