Tuesday, November 5, 2024

ಚುನಾವಣಾ ಪ್ರಚಾರದಲ್ಲಿ ವಿವಾದಾತ್ಮಕ ಹೇಳಿಕೆ ಕೊಟ್ಟ ಮಲ್ಲಿಕಾರ್ಜುನ ಖರ್ಗೆ, ಶಿವ ಹಾಗೂ ರಾಮನ ಚುನಾವಣೆ ಎಂದ ಖರ್ಗೆ..!

ಸದ್ಯ ಲೋಕಸಭಾ ಚುನಾವಣೆಯ ಕಾವು ಬಿಸಿಲಿನ ತಾಪಕ್ಕಿಂತ ಜೋರಾಗಿದೆ ಎನ್ನಬಹುದು. ಚುನಾವಣಾ ಪ್ರಚಾರದ ನಿಮಿತ್ತ ಕಾಂಗ್ರೇಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದು, ಭಾರಿ ಚರ್ಚೆಗೆ ಕಾರಣವಾಗಿದೆ. ಛತ್ತೀಸ್ ಗಢದ ಚುನಾವಣಾ ಪ್ರಚಾರದಲ್ಲಿ ಮಲ್ಲಿಕಾರ್ಜುನ ಖರ್ಗೆ ಶಿವ ವರ್ಸಸ್ ರಾಮನ ಚುನಾವಣೆ ಎಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದು, ಅವು ರಾಜಕೀಯ ಅಂಗಳದಲ್ಲಿ ಚರ್ಚೆಗೆ ಕಾರಣವಾಗಿದೆ ಎನ್ನಲಾಗುತ್ತಿದೆ.

Mallikarjun Kharge controversy comments 1

ಲೋಕಸಭಾ ಚುನಾವಣೆಯ ನಿಮಿತ್ತ ಛತ್ತೀಸ್ ಘಢದಲ್ಲಿ ಕಾಂಗ್ರೇಸ್ ಅಭ್ಯರ್ಥಿ ಶಿವಕುಮಾರ್‍ ದಹರಿಯಾ ರವರನ್ನು ಬೆಂಬಲಿಸಿ ಕಾಂಗ್ರೇಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಚಾರ ನಡೆಸಿದ್ದರು. ಈ ವೇಳೆ ರಾಮ ಹಾಗೂ ಶಿವನ ಕುರಿತು ಹೇಳಿಕೆ ನೀಡಿ ವಿವಾದ ಹುಟ್ಟಿಹಾಕಿದ್ದಾರೆ. ಛತ್ತೀಸ್ ಘಡದಲ್ಲಿ ತಮ್ಮ ಅಭ್ಯರ್ಥಿಯ ಪರ ಪ್ರಚಾರ ನಡೆಸುವಾಗ ಖರ್ಗೆ ಅಭ್ಯರ್ಥಿ ಶಿವಕುಮಾರ್‍ ದಹರಿಯಾ ರವರ ಹೆಸರು ಉಲ್ಲೇಖಿಸುವುದನ್ನು ಮರೆತಿದ್ದರು. ಬಳಿಕ ಶಿವಕುಮಾರ್‍ ರವರೇ ಅವರ ಹೆಸರನ್ನು ಎರೆಡೆರೆಡು ಬಾರಿ ನೆನಪಿಸಿದ್ದರು. ಈ ಸಮಯದಲ್ಲಿ ಶಿವಕುಮಾರ್‍ ದಹರಿಯಾ ರವರನ್ನು ಶಿವನಿಗೆ ಹೋಲಿಕೆ ಮಾಡಿದ್ದಾರೆ. ಶಿವನು ರಾಮನಿಗೆ ಸಮನಾಗಿ ಸ್ಪರ್ಧೆ ಮಾಡಬಹುದು ಜೊತೆಗೆ ಕಠಿಣ ಸ್ಪರ್ಧೆಯನ್ನು ಕೊಡಬಹುದು ಎಂದು ಹೇಳಿದ್ದಾರೆ. ಪ್ರಚಾರದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಶಿವಕುಮಾರ್‍ ರವರ ಹೆಸರಿನಲ್ಲಿ ಶಿವ ಇದ್ದಾನೆ. ನನ್ನ ಹೆಸರು ಮಲ್ಲಿಕಾರ್ಜುನ, ಇದು ಸಹ ಶಿವನ ಹೆಸರಾಗಿದೆ. ಆಂಧ್ರಪ್ರದೇಶದ ಶ್ರೀಶೈಲದಲ್ಲಿ ಮಲ್ಲಿಕಾರ್ಜುನ ಎಂಬ ಜ್ಯೋತಿರ್ಲಿಂಗವಿದೆ. ಶಿವನು ರಾಮನಿಗೆ ಸಮನಾಗಿ ಸ್ಪರ್ಧೆ ಮಾಡಬಹುದು ಎಂದು ರಾಮ ಹಾಗೂ ಶಿವನ ನಡುವಣ ಸಂಬಂಧ ಸೃಷ್ಟಿಸಿ ವಿವಾದ ಸೃಷ್ಟಿಯಾಗುವಂತೆ ಮಾಡಿದ್ದಾರೆ.

Mallikarjun Kharge controversy comments 0

ಇನ್ನೂ ಈ ಹೇಳಿಕೆಗೆ ಬಿಜೆಪಿ ಕಿಡಿಕಾರಿದ್ದು, ತೀವ್ರ ವಾಗ್ದಾಳಿ ನಡೆಸಿದೆ. ಛತ್ತೀಸ್ ಗಢದ ಉಪಮುಖ್ಯಮಂತ್ರಿ ವಿಜಯ್ ಶರ್ಮಾ ಮಾತನಾಡಿ, ರಾಮನನ್ನು ಕಾಂಗ್ರೇಸ್ ಪಕ್ಷ ತನ್ನ ಶತ್ರು ಎಂಬಂತೆ ಪರಿಗಣಿಸುತ್ತದೆ ಎಂಬುದು ಖರ್ಗೆ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಕಾಂಗ್ರೇಸ್ ನವರು ಶಿವನೆಂದು ತಮ್ಮನ್ನು ಬಿಂಬಿಸಿಕೊಂಡು ಜಂಭ ಕೊಚ್ಚಿಕೊಳ್ಳುತ್ತಿದ್ದಾರೆ. ಆದರೆ ಶಿವನು ಶ್ರೀರಾಮನನ್ನು ತನ್ನ ಆರಾಧ್ಯ ದೈವ ಎಂದು ಪರಿಗಣಿಸುತ್ತಾನೆ ಎಂಬುದು ಅವರಿಗೆ ತಿಳಿದಿಲ್ಲ. ಶ್ರೀರಾಮನ ಅಸ್ತಿತ್ವವನ್ನು ಆಗಾಗ ನಿರಾಕರಿಸುತ್ತಲೇ ಇದೆ. ರಾಮಮಂದಿರದ ಆಹ್ವಾನವನ್ನು ತಿರಸ್ಕರಿಸಿದ ಮಲ್ಲಿಕಾರ್ಜುನ್ ರವರ ಮಗ ಸನಾತನ ಸಂಸ್ಥೆಯನ್ನು ನಾಶಪಡಿಸುವುದಾಗಿ ಬೆದರಿಕೆ ಹಾಕಿದ್ದನ್ನು ಸಹ ಬೆಂಬಲಿಸಿದ್ದರು ಎಂದು ಖರ್ಗೆ ಹೇಳಿಕೆಯ ವಿರುದ್ದ ಆಗ್ರಹ ವ್ಯಕ್ತಪಡಿಸಿದ್ದಾರೆ.

by Admin
by Adminhttp://ismkannadanews.com
Welcome to ISM News, if you want to contact us, then feel free to say anything about www.ismkannadanews.com. We'll appreciate your feedback.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe

Latest Articles

error: Content is protected !!