Sunday, August 31, 2025
HomeEntertainmentನನ್ನ ದೇಹದಲ್ಲಿ ಬದಲಾವಣೆಯಾಗುತ್ತದೆ, ಆಕ್ಸಿಜೆನ್ ಇಡಬೇಕಾಗದ ಪರಿಸ್ಥಿತಿ, ಹೆಲ್ತ್ ಬಗ್ಗೆ ಅಪ್ಡೇಟ್ ನೀಡಿದ ನಟಿ ಅನಸೂಯ….!

ನನ್ನ ದೇಹದಲ್ಲಿ ಬದಲಾವಣೆಯಾಗುತ್ತದೆ, ಆಕ್ಸಿಜೆನ್ ಇಡಬೇಕಾಗದ ಪರಿಸ್ಥಿತಿ, ಹೆಲ್ತ್ ಬಗ್ಗೆ ಅಪ್ಡೇಟ್ ನೀಡಿದ ನಟಿ ಅನಸೂಯ….!

ತೆಲುಗು ನಟಿ ಅನಸೂಯ ಭಾರದ್ವಾಜ್ ಬಗ್ಗೆ ಹೆಚ್ಚಿನ ಪರಿಚಯದ ಅವಶ್ಯಕತೆಯಿಲ್ಲ. ಕಿರುತೆರೆಯಿಂದ ದೂರವಾಗಿ ಆಕೆ ಇದೀಗ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದು, ವರ್ಷಕ್ಕೆ ಐದಾರು ಸಿನೆಮಾಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿ ಕೆರಿಯರ್‍ ಸಾಗಿಸುತ್ತಿದ್ದಾರೆ. ಬಹುತೇಕ ಎಲ್ಲಾ ಸಿನೆಮಾಗಳಲ್ಲೂ ಆಕೆ ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಸದಾ ಸೋಷಿಯಲ್ ಮಿಡಿಯಾದಲ್ಲಿ ಬ್ಯುಸಿಯಾಗಿರುವ ಈಕೆ ಆಗಾಗ ಕೆಲವೊಂದು ಪೋಸ್ಟ್ ಗಳ ಮೂಲಕ ಸುದ್ದಿಯಾಗುತ್ತಿರುತ್ತಾರೆ. ಇದೀಗ ಆಕೆ ತನ್ನ ಹೆಲ್ತ್ ಬಗ್ಗೆ ಕೆಲವೊಂದು ಹೇಳಿಕೆಗಳನ್ನು ನೀಡಿದ್ದು, ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

Anasuya Bharadwaj health comments 2

ತೆಲುಗಿನ ಜಬರ್ದಸ್ತ್ ಶೋ ಮೂಲಕ ಫೇಂ ಪಡೆದುಕೊಂಡಂತಹ ನಟಿ ಅನಸೂಯ ಸದ್ಯ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದು, ಕಿರುತೆರೆಯಿಂದ ಸಂಪೂರ್ಣವಾಗಿ ದೂರವಾಗಿದ್ದಾರೆ. ಸಿನೆಮಾಗಳಲ್ಲಿ ಅವಕಾಶಗಳು ಹರಿದುಬರುತ್ತಿರುವ ಹಿನ್ನೆಲೆಯಲ್ಲಿ ಆಕೆ ಕಿರುತೆರೆಯಿಂದ ದೂರವಾದರು ಎಂದೇ ಹೇಳಬಹುದಾಗಿದೆ. ಇನ್ನೂ ಆಕೆ ಸಿನೆಮಾಗಳಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ ಸಹ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುತ್ತಾರೆ. ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ತಮ್ಮ ವೈಯುಕ್ತಿಕ ಅಪ್ಡೇಟ್ ಗಳ ಜೊತೆಗೆ, ಪೊಟೋಶೂಟ್ಸ್, ವಿಡಿಯೋ ಗಳನ್ನು ಹಂಚಿಕೊಳ್ಳುತ್ತಾ ಅಭಿಮಾನಿಗಳೊಂದಿಗೆ ಟಚ್ ನಲ್ಲಿ ಇರುತ್ತಾರೆ. ಇದೀಗ ಆಕೆ ತಮ್ಮ ಆರೋಗ್ಯದ ಬಗ್ಗೆ ಕೆಲವೊಂದು ಹೇಳಿಕೆಗಳನ್ನು ನೀಡಿದ್ದು, ಅವು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

Anasuya Bharadwaj health comments 1

ಇನ್ನೂ ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಅನಸೂಯ ತಮ್ಮ ಹೆಲ್ತ್ ಬಗ್ಗೆ ಮಾತನಾಡಿದ್ದಾರೆ. ಆಕೆ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವುದಾಗಿ ಹೇಳಿದ್ದಾರೆ. ಸಂದರ್ಶನದಲ್ಲಿ ಅನಸೂಯ ಡೈಟಿಂಗ್ ಮಾಡುತ್ತಿದ್ದಾರೆ, ಆದರೂ ಸುಂದರವಾಗಿಯೇ ಕಾಣುತ್ತೀರಾ ಅಲ್ಲವೇ ಎಂದು ಆಂಕರ್‍ ಈ ಸಂದರ್ಶನದಲ್ಲಿ ಕೇಳಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಿದ ಅನಸೂಯ ನಾನು ಸುಂದರವಾಗಿ ಕಾಣಿಸಲು ಡೈಟಿಂಗ್ ಮಾಡುತ್ತಿಲ್ಲ. ಆರೋಗ್ಯದ ಪರವಾಗಿ ನಾನು ಹೇಗೆ ಫೀಲ್ ಆಗುತ್ತಿದ್ದೀನಿ ಎಂಬ ಕಾರಣದಿಂದ ಡೈಟ್ ಮಾಡುತ್ತಿದ್ದೇನೆ. ನನಗೆ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಯಲ್ಲಿ ಆಕ್ಸಿಜನ್ ಹಾಕಬೇಕಾದ ಪರಿಸ್ಥಿತಿ ಬಂದಿತ್ತು. ಆರೋಗ್ಯದ ಪರವಾಗಿ ನಾನು ಅಂತಹ ಸಮಸ್ಯೆಗಳಲ್ಲಿ ಇರುವುದು ನನಗೆ ಇಷ್ಟವಿಲ್ಲ. ನಾನು ತುಂಬಾ ಎಮೋಷನಲ್ ಆದರೆ ಮಾಂಸ ಖಂಡಗಳಲ್ಲಿ ನೋವು ಬರುತ್ತಿತ್ತು, ಜೊತೆಗೆ ಉಸಿರಾಟ ಸಮಸ್ಯೆ ಬರುತ್ತಿತ್ತು.

Anasuya Bharadwaj health comments 0

ಅಲ್ಲಿಂದ ನಾನು ಬ್ರೀಥಿಂಗ್ ಯೋಗ, ಪ್ರಾಣಾಯಾಮ ಮಾಡುತ್ತಿದ್ದೇನೆ. ವರ್ಕೌಟ್ ಮಾಡುತ್ತಿದ್ದೆನೆ. ಫಿಜಿಕಲ್ ಆಗಿ ಫಿಟ್ ಆಗಿದ್ದಾರೆ ಮೆಂಟಲಿ ಸ್ಟ್ರಾಂಗ್ ಆಗಿರುತ್ತೇವೆ. ಈ ಕಾರಣದಿಂದಲೇ ನನ್ನ ವಿವಿಧ ರೀತಿಯಲ್ಲಿ ನೀವು ನೋಡುತ್ತಿರುತ್ತೀರಾ. ನನ್ನ ಚಿಕ್ಕಮಗ ಹುಟ್ಟಿದ 20 ದಿನಗಳಲ್ಲೇ ನಾನು ಶೂಟಿಂಗ್ ಗೆ ಹೋಗಿದ್ದೆ. ಈ ಸಮಯದಲ್ಲಿ ತುಂಬಾ ದಪ್ಪವಾಗಿದ್ದೆ. ನಾನು ದಪ್ಪ ಇದ್ದೀನಿ ಎಂದು ಫೀಲ್ ಆಗಿಲ್ಲ. ನನಗೆ ನನ್ನ ಕೆಲಸ ಮುಖ್ಯ ಎಂದೇ ಭಾವಿಸುತ್ತೇನೆ ಎಂದು ಅನಸೂಯ ಹೇಳಿದ್ದಾರೆ. ಸದ್ಯ ಆಕೆ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಪುಲ್ ಬ್ಯುಸಿಯಾಗಿದ್ದಾರೆ. ಕೊನೆಯದಾಗಿ ಆಕೆ ರಜಾಕರ್‍ ಎಂಬ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಆಕೆ ಪುಷ್ಪಾ-2 ಸಿನೆಮಾದ ಜೊತೆಗೆ ಮತಷ್ಟು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular