Reena Rajput Viral Video : ವೀವ್ಸ್‌ಗಾಗಿ 75ರ ವೃದ್ಧನ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಮಹಿಳೆ ಯೂ-ಟರ್ನ್; ಅಸಲಿ ಕಥೆ ಏನು?

Reena Rajput viral video about engagement controversy and remarriage

ಲೈಕ್ಸ್ ಮತ್ತು ಫಾಲೋವರ್ಸ್‌ ಹುಚ್ಚಾಟಕ್ಕೆ ಮಿತಿಯೇ ಇಲ್ಲ ಅನ್ನೋದನ್ನ ಮತ್ತೊಮ್ಮೆ ಸಾಬೀತುಪಡಿಸಿದೆ ಈ ಘಟನೆ. 75 ವರ್ಷದ ವೃದ್ಧನ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡು ಭಾರೀ ಸಂಚಲನ ಸೃಷ್ಟಿಸಿದ್ದ ಬ್ಲಾಗರ್ ರೀನಾ ರಜಪೂತ್ (Reena Rajput Viral Video), ಈಗ ಸಡನ್ನಾಗಿ ಯೂ-ಟರ್ನ್ ಹೊಡೆದು ನೆಟ್ಟಿಗರಿಗೆ ಬಿಗ್ ಶಾಕ್ ಕೊಟ್ಟಿದ್ದಾರೆ. ಜನರೆಲ್ಲಾ ಹುಬ್ಬೇರಿಸಿ ನೋಡುತ್ತಿದ್ದ ಈ ‘ಅಜ್ಜ-ಯುವತಿಯ ಲವ್‌ಸ್ಟೋರಿ’ ಕೇವಲ ಫೇಕ್ ಡ್ರಾಮಾ ಅನ್ನೋದು ಬಯಲಾಗಿದ್ದು, ಅತ್ತ ದೂರವಾಗಿದ್ದ ಪತಿ ವಾಪಸ್ ಬರುತ್ತಿದ್ದಂತೆ ಆತನ ಜೊತೆಗೇ ಹೊಸ ಸಂಸಾರ ಶುರುಮಾಡಿದ್ದಾರೆ.

Reena Rajput Viral Video – 75 ವರ್ಷದ ವೃದ್ಧನ ಜೊತೆಗಿನ ನಿಶ್ಚಿತಾರ್ಥ ಬರೀ ನಾಟಕವೇ?

ಉತ್ತರ ಪ್ರದೇಶದ ಔರೈಯಾ ಜಿಲ್ಲೆಯ ಅರಿಯಾರಿ ಗ್ರಾಮದ 75 ವರ್ಷದ ರಾಮ್‌ಸಾಗರ್ (ರಾಮ್‌ಸುಗ್ಗರ್) ಎಂಬ ವೃದ್ಧನ ಜೊತೆ ರೀನಾ ರಜಪೂತ್ (ರಾಣಿ) ಎಂಬ ಮಹಿಳಾ ವ್ಲಾಗರ್ ನಿಶ್ಚಿತಾರ್ಥ ಮಾಡಿಕೊಂಡ ವಿಡಿಯೋ ವೈರಲ್ ಆಗಿತ್ತು. ಇನ್‌ಸ್ಟಾಗ್ರಾಮ್‌ನಲ್ಲಿ ರೀನಾ ಹಂಚಿಕೊಂಡಿದ್ದ ಈ ವಿಡಿಯೋ ನೋಡಿ ನೆಟ್ಟಿಗರು ಹುಬ್ಬೇರಿಸಿದ್ದರು. Read this also : ಚಲನ್ ತಪ್ಪಿಸಲು ಹೋಗಿ ಪತ್ನಿಯನ್ನೇ ರಸ್ತೆಯಲ್ಲಿ ಬೀಳಿಸಿ ಪರಾರಿಯಾದ ಭೂಪ! ಉತ್ತರಾಖಂಡದ ವಿಡಿಯೋ ವೈರಲ್

Reena Rajput viral video about engagement controversy and remarriage

ಆದರೆ ಈಗ ವ್ಲಾಗರ್ ರೀನಾ ಏಕಾಏಕಿ ಯೂ-ಟರ್ನ್ ಹೊಡೆದಿದ್ದಾರೆ. ವೃದ್ಧನ ಜೊತೆಗಿನ ನಿಶ್ಚಿತಾರ್ಥವನ್ನು ಸಂಪೂರ್ಣವಾಗಿ ನಿರಾಕರಿಸಿರುವ ಆಕೆ, “ಅದೆಲ್ಲಾ ಕೇವಲ ಸೋಶಿಯಲ್ ಮೀಡಿಯಾ ವಿಡಿಯೋಗಾಗಿ (Reena Rajput Viral Video) ಮಾಡಿದ ನಾಟಕಷ್ಟೇ, ನಿಜವಾದ ಮದುವೆಯಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ.

ಹಳೆ ಗಂಡನ ಜೊತೆ ಮತ್ತೆ ಸಪ್ತಪದಿ ತುಳಿದ ರೀನಾ!

ವೃದ್ಧನ ಜೊತೆಗಿನ ಎಂಗೇಜ್ಮೆಂಟ್ ವಿಡಿಯೋ ವೈರಲ್ ಆಗಿದ್ದೇ ತಡ, ರೀನಾಳ ನಿಜವಾದ ಪತಿ ಅಖಾಡಕ್ಕೆ ಇಳಿದಿದ್ದಾರೆ. ಈ ವಿಡಿಯೋ ನೋಡಿದ ನಂತರ ದೂರವಾಗಿದ್ದ ಆಕೆಯ ಗಂಡ ಈಗ ಮನೆಗೆ ವಾಪಸ್ ಬಂದಿದ್ದಾರೆ. ಪತಿ ಮರಳಿ ಬಂದ ಖುಷಿಯಲ್ಲಿ ರೀನಾ ಅವರ ಜೊತೆ ವಾಸಿಸಲು ಶುರು ಮಾಡಿದ್ದಲ್ಲದೆ, ಅವರನ್ನೇ ಮತ್ತೆ ಮದುವೆಯಾಗುವ ನಿರ್ಧಾರ ಮಾಡಿದ್ದಾರೆ.

ತನ್ನ ಮಾತಿನಂತೆಯೇ ಇನ್‌ಸ್ಟಾಗ್ರಾಮ್‌ನಲ್ಲಿ ಹೊಸ ವಿಡಿಯೋ (Viral Video Link Here) ಹಂಚಿಕೊಂಡಿರುವ ರೀನಾ, ತಮ್ಮ ಮರುಮದುವೆಯ ಸಂಭ್ರಮವನ್ನು ತೋರಿಸಿದ್ದಾರೆ. ಒಂದು ವಿಡಿಯೋದಲ್ಲಿ ರೀನಾ ಮತ್ತು ಆಕೆಯ ಪತಿ ಪರಸ್ಪರ ಹಾರ ಬದಲಾಯಿಸಿಕೊಂಡಿದ್ದರೆ, ಮತ್ತೊಂದು ವಿಡಿಯೋದಲ್ಲಿ ಪತಿ (Reena Rajput Viral Video) ಆಕೆಯ ಹಣೆಗೆ ಕುಂಕುಮ (ಸಿಂಧೂರ) ಇಡುತ್ತಿರುವ ದೃಶ್ಯಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ವೃದ್ಧ ರಾಮ್‌ಸಾಗರ್ ಮತ್ತು ಮಗಳು ರಾಧಾ ವಿರುದ್ಧವೇ ಆಕ್ರೋಶ!

ಈ ಇಡೀ ಪ್ರಕರಣದ ಹಿಂದೆ ಕಂಟೆಂಟ್ ಕ್ರಿಯೇಷನ್ ನಂಟಿದೆ. ವೃದ್ಧ ರಾಮ್‌ಸಾಗರ್ ಅವರಿಗೆ ರಾಧಾ ಎಂಬ ಮಗಳಿದ್ದು, ಆಕೆಯೂ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋಗಳನ್ನು ಮಾಡುತ್ತಾಳೆ.

Reena Rajput viral video about engagement controversy and remarriage

ಕಂಟೆಂಟ್ ಮಾಡುವ ಸಲುವಾಗಿ ರೀನಾ ಆಗಾಗ ರಾಮ್‌ಸಾಗರ್ ಮನೆಗೆ ಭೇಟಿ ನೀಡುತ್ತಿದ್ದರು. ಈ ವೇಳೆ ವೃದ್ಧ ಹಾಗೂ ರೀನಾ ನಡುವೆ ಪ್ರೇಮಾಂಕುರವಾಗಿ ಇಬ್ಬರೂ ಮದುವೆಯಾಗಲು (Reena Rajput Viral Video) ನಿರ್ಧರಿಸಿದ್ದಾರೆ ಎಂದು ರಾಧಾ ವಿಡಿಯೋ ಹಂಚಿಕೊಂಡಿದ್ದರು. ಆದರೆ ಈಗ ಪತಿ ವಾಪಸ್ ಬರುತ್ತಿದ್ದಂತೆ ವರಸೆ ಬದಲಿಸಿರುವ ರೀನಾ, ವಿಡಿಯೋ ವೈರಲ್ ಮಾಡಿದ ರಾಧಾ ವಿರುದ್ಧವೇ ತಿರುಗಿಬಿದ್ದಿದ್ದು, ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇವಲ ಫೇಮಸ್ ಆಗುವ ಹುಚ್ಚಿಗೆ ಸಂಬಂಧಗಳನ್ನು ಹಾಗೂ ಮದುವೆಯಂತಹ ಪವಿತ್ರ ಬಂಧವನ್ನು ತಮಾಷೆಯ ವಸ್ತುವನ್ನಾಗಿ ಮಾಡಿಕೊಳ್ಳುತ್ತಿರುವ ಇಂತಹ ಸೋಶಿಯಲ್ ಮೀಡಿಯಾ ಸ್ಟಂಟ್‌ಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

Leave a Comment

Your email address will not be published. Required fields are marked *

Scroll to Top