ದಿನೇ ದಿನೇ ತಂತ್ರಜ್ಞಾನ ಬೆಳೆಯುತ್ತಿದ್ದರೂ ಇನ್ನೂ ದೇಶದ ಹಲವು ಕಡೆ ಮೂಡನಂಬಿಕೆಗಳು ಜೀವಂತವಾಗಿದೆ. ಅದರಲ್ಲೂ ಕೆಲವು ಕಡೆ ಮಾಟಮಂತ್ರ, ಭಾಣಾಮತಿ, ಕ್ಷುದ್ರ ಪೂಜೆಗಳು ನಡೆಯುತ್ತಿರುತ್ತವೆ. ಈ ಪೂಜೆಗಳ ಸಮಯದಲ್ಲಿ ನರಬಲಿಗಳನ್ನು ಸಹ ನೀಡಿರುತ್ತಾರೆ ಎಂಬ ಸುದ್ದಿಗಳನ್ನು ಕೇಳಿರುತ್ತೇವೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. 9 ವರ್ಷದ ಬಾಲಕನೊಬ್ಬನನ್ನು ಮಾಟಮಂತ್ರಕ್ಕಾಗಿ (Black Magic) ಬಲಿ ಕೊಡಲಾಗಿದೆ. ಬ್ಲಾಕ್ ಮ್ಯಾಜಿಕ್ ಗಾಗಿ ಶಾಲೆಯ ಮಾಲೀಕರೇ ಬಲಿಕೊಟ್ಟ ಘಟನೆ ನಡೆದಿದೆ.
ಅಂದಹಾಗೆ ಈ ಘಟನೆ ಉತ್ತರಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ನಡೆದಿದೆ. ಮೃತ ಬಾಲಕನನ್ನು ಕೃತಾರ್ಥ್ ಎಂದು ಗುರ್ತಿಸಲಾಗಿದೆ. ಮೃತ ಬಾಲಕ (Black Magic) ಡಿ.ಎಲ್. ಪಬ್ಲಿಕ್ ಶಾಲೆಯಲ್ಲಿ ಎರಡನೇ ತರಗತಿಯಲ್ಲಿ ಓದುತ್ತಿದ್ದ ಎನ್ನಲಾಗಿದೆ. ಡಿ.ಎಲ್. ಪಬ್ಲಿಕ್ ಶಾಲೆಯ ಮಾಲೀಕ ಜಸೋಧನ್ ಸಿಂಗ್ ಬ್ಲಾಕ್ ಮ್ಯಾಜಿಕ್ ಹಾಗೂ ತಾಂತ್ರಿಕ ಆಚರಣೆಗಳನ್ನು (Black Magic)ತುಂಬಾ ನಂಬುತ್ತಿದ್ದ. ಆತನಿಗೆ ಮಾಟಮಂತ್ರದ ಪೂಜೆಗಳಲ್ಲಿ ಭಾಗಿಯಾಗುವ ಹುಚ್ಚು ತುಂಬಾನೆ ಇತ್ತು. ತನ್ನ ಶೈಕ್ಷಣಿಕ ಸಂಸ್ಥೆ ದೊಡ್ಡ ಮಟ್ಟಕ್ಕೆ ಜನಪ್ರಿಯತೆ ಪಡೆಯಲು ಒಂದು ಮಗುವನ್ನು ಬಲಿಕೊಟ್ಟು ಪೂಜೆ ಮಾಡಬೇಕೆಂದು ನಂಬಿದ್ದ ಮಾಲೀಕ ಈ ಕುರಿತು ತನ್ನ ಮಗನಿಗೆ ಹೇಳಿದ್ದ. (Black Magic) ಜಸೋಧನ್ ಸಿಂಗ್ ಮಗ ದಿನೇಶ್ ಭಗೆಲ್ ಇದೇ ಶಾಲೆಯ ನಿರ್ದೇಶಕನಾಗಿದ್ದ. ಮಗುವನ್ನು ಬಲಿಕೊಟ್ಟು ಕ್ಷುದ್ರ ಪೂಜೆ ಮಾಡಲು ತಂದೆ ಮಗ ಇಬ್ಬರೂ ನಿರ್ಧರಿಸಿದ್ದರು.
ಇನ್ನೂ ಸೆ.23 ರಂದು ತಂದೆ ಹಾಗೂ ಮಗು ಸೇರಿ ಮೂರು ಮಂದಿ (Black Magic) ಶಾಲಾ ಸಿಬ್ಬಂದಿಯೊಂದಿಗೆ ಮೃತ ಕೃತಾರ್ಥ್‌ನನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಬಾಲಕನಿಗೆ ಡ್ರಗ್ಸ್ ನೀಡಿ ಎಚ್ಚರ ತಪ್ಪಿಸಲಾಗಿದೆ. ಹುಡುಗನಿಗೆ ಪ್ರಜ್ಞೆ ಬಂದಾಗ ಆಲುತ್ತಾ ಕಿರುಚಾಡಿದ್ದಾನೆ. (Black Magic) ಆಗ ಬಾಲಕನ ಕತ್ತು ಹಿಸುಕಿಕೊಂದು ಮೃತದೇಹವನ್ನು ಕಾರ್ ನಲ್ಲಿ ತೆಗೆದುಕೊಂಡ ಬರಲಾಗಿತ್ತು ಎಂದು ತಿಳಿದುಬಂದಿದೆ. (Black Magic) ಕ್ಷುದ್ರ ಪೂಜೆಗಳೆಲ್ಲಾ ಮುಗಿದ ಬಳಿಕ ಬಾಲಕನ ಮನೆಗೆ ಕರೆ ಮಾಡಿ ನಿಮ್ಮ ಮಗನ ಆರೋಗ್ಯ ಸರಿಯಾಗಿಲ್ಲ ಆದ್ದರಿಂದ ಅವನನ್ನು ಕಾರ್ ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೇವೆ ಎಂದು ಹೇಳಿದ್ದಾರೆ.
ಬಳಿಕ (Black Magic) ಮಗನ ಹಾಸ್ಟಲ್ ನತ್ತ ಓಡಿಬಂದ ಕೃತಾರ್ಥ್ ಪೋಷಕರು, ನಡು ರಸ್ತೆಯಲ್ಲಿಯೇ ದಿನೇಶ್ ಬಾಗೆಲ್ ಕಾರನ್ನು ತಡೆದು ಏನಾಯ್ತು ಎಂದು ವಿಚಾರಿಸಿದ್ದಾರೆ. ಈ ಸಮಯದಲ್ಲಿ ಮಗನ ಸ್ಥಿತಿ ಕಂಡು (Black Magic) ಪೋಷಕರಿಗೆ ಅನುಮಾನ ಬಂದಿದೆ. ಬಳಿಕ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ. (Black Magic) ಬಳಿಕ ಐದು ಮಂದಿಯನ್ನು ಹತ್ರಾಸ್ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶಾಲಾ ಮಾಲೀಕ ಜಸೋಧನ್ ಸಿಂಗ್, ಅವರ ಪುತ್ರ ದಿನೇಶ್ ಭಗೆಲ್, ಶಾಲೆಯ ಪ್ರಿನ್ಸಿಪಾಲ್ ಲಕ್ಷ್ಮಣ ಸಿಂಗ್, ರಾಮಪ್ರಕಾಶ್ ಸೋಳಂಕಿ ಹಾಗೂ ವಿರುಪಾಕ್ಷ ಸಿಂಗ್ ಎನ್ನುವ ಇಬ್ಬರು ಶಾಲಾ ಶಿಕ್ಷಕರನ್ನು ಬಂಧಿಸಿ ಎಫ್.ಐ.ಆರ್ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.