Wednesday, February 4, 2026
HomeNationalViral : ಗಂಡನಿಗೆ 'ಆ' ಶಕ್ತಿ ಇಲ್ಲ! ಮೊದಲ ರಾತ್ರಿಯೇ ತವರಿಗೆ ಓಡಿದ ನವವಧು.. ಗೋರಖ್‌ಪುರದಲ್ಲಿ...

Viral : ಗಂಡನಿಗೆ ‘ಆ’ ಶಕ್ತಿ ಇಲ್ಲ! ಮೊದಲ ರಾತ್ರಿಯೇ ತವರಿಗೆ ಓಡಿದ ನವವಧು.. ಗೋರಖ್‌ಪುರದಲ್ಲಿ ವಿಚಿತ್ರ ಘಟನೆ

ಮದುವೆ ಅಂದ್ರೆ ನೂರೆಂಟು ಕನಸುಗಳು.. ಒಳ್ಳೆ ಹುಡುಗ, ಕೈತುಂಬಾ ಸಂಬಳ, ಆಸ್ತಿ, ಅಂತಸ್ತು ಇದ್ರೆ ಸಾಕು ಮಗಳು ಚೆನ್ನಾಗಿರ್ತಾಳೆ ಅಂತ ಪೋಷಕರು ಅಂದುಕೊಳ್ತಾರೆ. ಆದ್ರೆ ಇಲ್ಲೊಬ್ಬರು ಇಂಜಿನಿಯರ್ ಅಂತ ನಂಬಿ ಮಗಳಿಗೆ ಮದುವೆ ಮಾಡಿಸಿದ್ರು. ಆದ್ರೆ ಮದುವೆಯಾದ ಕೇವಲ ಮೂರೇ ದಿನಕ್ಕೆ ನವವಧು ಗಂಡನ ಮನೆ ಬಿಟ್ಟು ತವರಿಗೆ ಓಡಿ ಬಂದಿದ್ದಾಳೆ. ಅಷ್ಟಕ್ಕೂ ಆ ಫಸ್ಟ್ ನೈಟ್ (First Night) ದಿನ ನಡೆದಿದ್ದೇನು? ಇಲ್ಲಿದೆ ನೋಡಿ ಆಘಾತಕಾರಿ ಸ್ಟೋರಿ.

Bride leaves husband’s home after discovering groom’s impotence during the first night in Gorakhpur - Viral News

Viral – ಶ್ರೀಮಂತ ಇಂಜಿನಿಯರ್ ಅಂತ ಮದುವೆ, ಕೊನೆಗೆ ಆಗಿದ್ದೇ ಬೇರೆ!

ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ (Gorakhpur) ಇಂಥದ್ದೊಂದು ವಿಚಿತ್ರ ಘಟನೆ ನಡೆದಿದೆ. 25 ವರ್ಷದ ಯುವಕನೊಬ್ಬ ಬಿ.ಟೆಕ್ ಮುಗಿಸಿ ದೊಡ್ಡ ಕಂಪನಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ಅಗರ್ಭ ಶ್ರೀಮಂತ ಕೃಷಿ ಕುಟುಂಬದ ಏಕೈಕ ಮಗ. ಆಸ್ತಿ, ಅಂತಸ್ತು, ಓದು ಎಲ್ಲವೂ ಇದೆ ಎಂದು ನಂಬಿದ ಹುಡುಗಿಯ ಮನೆಯವರು ನವೆಂಬರ್ 28 ರಂದು ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು. ನವೆಂಬರ್ 29 ರಂದು ವಧು ಖುಷಿ ಖುಷಿಯಾಗಿ ಗಂಡನ ಮನೆಗೆ ಕಾಲಿಟ್ಟಿದ್ದಳು.

Viral – ಫಸ್ಟ್ ನೈಟ್‌ನಲ್ಲೇ ಸಿಡಿತು ಬಾಂಬ್!

ನವ ಜೋಡಿಗಳಿಬ್ಬರೂ ಮೊದಲ ರಾತ್ರಿಗೆ ಸಜ್ಜಾಗಿದ್ದರು. ಆದರೆ ಅಲ್ಲಿ ನಡೆದಿದ್ದೇ ಬೇರೆ. ಗಂಡ ತನ್ನ ಪತ್ನಿಗೆ ಒಂದು ಆಘಾತಕಾರಿ ಸತ್ಯವನ್ನು ಬಾಯಿಬಿಟ್ಟಿದ್ದಾನೆ. “ನಾನು ದೈಹಿಕವಾಗಿ ಸದೃಢವಾಗಿಲ್ಲ (Impotent), ದಾಂಪತ್ಯ ಜೀವನಕ್ಕೆ ನಾನು ಅನ್‌ಫಿಟ್” ಎಂದು ಹೇಳಿಕೊಂಡಿದ್ದಾನೆ. ಗಂಡನ ಬಾಯಿಂದ ಈ ಮಾತು ಕೇಳಿ ಆ ಹೊಸ ಹುಡುಗಿಯ ಕಾಲ ಕೆಳಗಿನ ಭೂಮಿಯೇ ಕುಸಿದಂತಾಗಿದೆ. ತಾನು ಎಂಥಾ ಮೋಸಕ್ಕೆ ಬಲಿಯಾದೆ ಎಂದು ಅರಿತ ಆಕೆ, ಮರುದಿನವೇ ಗಂಡನ ಮನೆಯಿಂದ ಕಾಲ್ಕಿತ್ತು ತವರು ಮನೆ ಸೇರಿದ್ದಾಳೆ.

Viral – 4ನೇ ದಿನಕ್ಕೆ ಡಿವೋರ್ಸ್ ನೋಟಿಸ್!

ತವರು ಮನೆಗೆ ಹೋದವಳೇ ಸುಮ್ಮನೆ ಕೂರಲಿಲ್ಲ. ಮದುವೆಯಾದ ನಾಲ್ಕೇ ದಿನಕ್ಕೆ ಗಂಡನಿಗೆ ವಿಚ್ಛೇದನ (Divorce) ನೋಟಿಸ್ ಕಳುಹಿಸಿದ್ದಾಳೆ. “ಮದುವೆಗೂ ಮುನ್ನವೇ ಇಂಥದೊಂದು ಗಂಭೀರ ಸಮಸ್ಯೆಯನ್ನು ಮುಚ್ಚಿಟ್ಟು, ನನ್ನ ಜೀವನದ ಜೊತೆ ಆಟವಾಡಿದ ಮೋಸಗಾರನ ಜೊತೆ ನಾನು ಬದುಕಲು ಸಾಧ್ಯವಿಲ್ಲ” ಎಂದು ಪತ್ರದಲ್ಲಿ ಸ್ಪಷ್ಟವಾಗಿ ಬರೆದಿದ್ದಾಳೆ. Read this also : ರೀಲ್ಸ್‌ ಹುಚ್ಚಿಗೆ ಗಂಡ-ಮಕ್ಕಳನ್ನೇ ಬಿಟ್ಟ ಮಹಿಳೆ! ಪ್ರಿಯಕರನಿಗಾಗಿ ಬಸ್ ಹತ್ತಿದವಳಿಗೆ ಕಾದಿತ್ತು ಬಿಗ್‌ ಶಾಕ್ – ಇಲ್ಲಿದೆ ರೋಚಕ ಸ್ಟೋರಿ

Viral – ಬಯಲಾಯ್ತು ಗಂಡನ ಕರಾಳ ಅತೀತ!

ವಿಚ್ಛೇದನ ನೋಟಿಸ್ ಕೈ ಸೇರುತ್ತಿದ್ದಂತೆ, ಎರಡೂ ಕುಟುಂಬದವರು ಸೇರಿ ಪಂಚಾಯ್ತಿ ನಡೆಸಿದ್ದಾರೆ. ಸುಮಾರು 4 ಗಂಟೆಗಳ ಕಾಲ ನಡೆದ ಚರ್ಚೆಯಲ್ಲಿ ಸ್ಫೋಟಕ ಸತ್ಯವೊಂದು ಹೊರಬಿದ್ದಿದೆ. ಏನಂದ್ರೆ, ಈ ಇಂಜಿನಿಯರ್ ಹುಡುಗನಿಗೆ ಇದು ಮೊದಲ ಮದುವೆಯಲ್ಲ! ಎರಡು ವರ್ಷಗಳ ಹಿಂದೆಯೇ ಇವನಿಗೆ ಬೇರೆ ಹುಡುಗಿ ಜೊತೆ ಮದುವೆಯಾಗಿತ್ತು. ಆಕೆಗೂ ಕೂಡ ಇವನ ದೈಹಿಕ ಸಮಸ್ಯೆಯ ಬಗ್ಗೆ ಗೊತ್ತಾಗಿ, ಕೇವಲ ಒಂದೇ ತಿಂಗಳಿಗೆ ಇವನನ್ನು ಬಿಟ್ಟು ಹೋಗಿದ್ದಳಂತೆ. ಈ ವಿಷಯವನ್ನು ಮುಚ್ಚಿಟ್ಟು ಹುಡುಗನ ಮನೆಯವರು ಈಗ ಎರಡನೇ ಮದುವೆ ಮಾಡಿಸಿದ್ದರು ಎಂಬುದು ಹುಡುಗಿಯ ಮನೆಯವರ ಆರೋಪ.

Bride leaves husband’s home after discovering groom’s impotence during the first night in Gorakhpur - Viral News

Viral – ಮೆಡಿಕಲ್ ಟೆಸ್ಟ್‌ನಲ್ಲಿ ಸಿಕ್ಕಿಬಿದ್ದ ಭೂಪ!

ಪಂಚಾಯ್ತಿಯಲ್ಲಿ ಮಾತುಕತೆ ನಡೆದರೂ ಅನುಮಾನ ಬಗೆಹರಿಯದಿದ್ದಾಗ, ಕೊನೆಗೆ ಹುಡುಗನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಮೆಡಿಕಲ್ ಟೆಸ್ಟ್ (Medical Test) ಮಾಡಿಸಲಾಗಿದೆ. ವರದಿ ನೋಡಿದ ವೈದ್ಯರು, “ಈತ ತಂದೆಯಾಗಲು ಅಥವಾ ದಾಂಪತ್ಯ ಜೀವನ ನಡೆಸಲು ದೈಹಿಕವಾಗಿ ಸಮರ್ಥನಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ವೈದ್ಯಕೀಯ ವರದಿ ಬಂದ ನಂತರ ಹುಡುಗಿಯ ಕಡೆಯವರ ಆರೋಪ ನಿಜವೆಂದು ಸಾಬೀತಾಗಿದೆ.

by ISM Kannada News Deskhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular