ಪ್ರಾಯದ ಯುವಕ-ಯುವತಿಯರಿಗೆ ಮೊಡವೆಗಳಿಂದ ಸೌಂದರ್ಯ ಹಾಳಾಗುತ್ತದೆ. ಇದರಿಂದ ತುಂಬಾನೆ ಕಿರಿಕಿರಿ ಅನುಭವಿಸುತ್ತಾರೆ.
ಚರ್ಮದ ಕೂದಲಿನ ಕಿರುಚೀಲ ಎಣ್ಣೆಯಿಂದ ಮತ್ತು ಸತ್ತ ಚರ್ಮದ ಕೋಶಗಳಿಂದ ಮುಚ್ಚಿಹೋದಾಗ ಮೊಡವೆಗಳು ಬರುತ್ತವೆ
ಮುಖದ ಮೇಲೆ ಮೂಡುವ ಮೊಡವೆಗಳಿಂದ ನೋವು ಮತ್ತು ಕಿರಿಕಿರಿ ಹಾಗೂ ಮುಜುಗರವನ್ನು ಉಂಟು ಮಾಡುತ್ತದೆ
ಮೊಡವೆಗಳು ಚರ್ಮದ ಮೇಲೆ ಕಪ್ಪು ಚುಕ್ಕೆಗಳಾಗಿ, ವೈಟ್ ಹೆಡ್ ಗಳಾಗಿ ಅಥವಾ ಗಾಯಗಳ ರೂಪದಲ್ಲಿ ಕಾಣಿಸಿಕೊಳ್ಳಬಹುದು
ಮೊಡವೆಗಳು ಹಾರ್ಮೋನ್ ಗಳ ಅಸಮತೋಲನ, ಒತ್ತಡ, ಆಹಾರ ಮತ್ತು ಕೆಲವು ಔಷಧಿಗಳಿಂದ ಹುಟ್ಟುತ್ತವೆ
ಕೃತಕ ಸಕ್ಕರೆಯಿಂದ ತಯಾರಿಸಿದ ಕ್ಯಾಂಡಿ, ಪೇಸ್ಟ್ರಿ ಅಥವಾ ಇತರೆ ವಸ್ತುಗಳನ್ನು ತಿನ್ನುವುದರಿಂದ ಮೊಡವೆ ಹುಟ್ಟುತ್ತದೆ
ಬೇಸಿಗೆ ಕಾಲದಲ್ಲಿ ಮೊಟ್ಟೆ ತಿನ್ನುವುದರಿಂದ ಮೊಡವೆಗಳು ಬರಬಹುದು
ಚೀಸ್, ಪೂರ್ಣ ಕೊಬ್ಬಿನಿಂದ ಕೂಡಿದ ಮೊಸರು, ಹಾಳು ಹಾಗೂ ಐಸ್ ಕ್ರೀಮ್ ನಂತಹ ಡೈರಿ ಉತ್ಪನ್ನ ಸೇವಿಸುವುದು ಮೊಡವೆಗಳು ಹುಟ್ಟಲು ಕಾರಣವಾಗಬಹುದು