ಈ ಪಾನೀಯ ಕುಡಿದರೇ ಉತ್ತಮ ಆರೋಗ್ಯ ಸಾಧ್ಯ? ಆ ಪಾನೀಯ ಯಾವುದು ಗೊತ್ತಾ? 

ಶುಂಠಿ ಮತ್ತು ತುಳಸಿಯ ನೀರನ್ನು ಸೇವಿಸುವುದರಿಂದ ಉತ್ತಮ ಆರೋಗ್ಯ ಸಾಧ್ಯ

ಶುಂಠಿ ಹಾಗೂ ತುಳಸಿಯಲ್ಲಿ ಅಪಾರವಾದ ಔಷಧಿಯ ಗುಣಗಳಿದ್ದು, ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಭಾಣವಾಗಿದೆ

ಅನೇಕರು ತಮ್ಮ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪ್ರತಿದಿನ ಬೆಳಿಗ್ಗೆ ಬಿಸಿ ನೀರು ಹಾಗೂ ನಿಂಬೆ ರಸವನ್ನು ಕುಡಿಯುತ್ತಾರೆ. ಆದರೆ ಅದಕ್ಕಿಂತ ಈ ಪಾನೀಯ ಹೆಚ್ಚು ಪ್ರಯೋಜನಕಾರಿ

ಪ್ರತಿನಿತ್ಯ ಶುಂಠಿ ಮತ್ತು ತುಳಸಿ ಬೆರಸಿದ ನೀರನ್ನು ಕುಡಿಯುವುದನ್ನು ಅಭ್ಯಾಸ ರೂಡಿಸಿಕೊಳ್ಳಬೇಕು

ತುಳಸಿಯಲ್ಲಿ ಆಂಟಿ ವೈರಲ್ ಮತ್ತು ಕೊಲೆಸ್ಟ್ರಾಲ್ ವಿರೋಧಿ ಗುಣಗಳಿದ್ದು, ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹಾಗೂ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ.

ತುಳಸಿ ಹಾಗೂ ಶುಂಠಿ ಮಿಶ್ರಿತ ನೀರನ್ನು 1 ತಿಂಗಳ ಕಾಲ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ತೂಕ ಕಡಿಮೆಯಾಗುತ್ತದೆ ಜೊತೆಗೆ ಹೊಟ್ಟೆಯ ಕೊಬ್ಬು ಸಹ ಕರಗುತ್ತದೆ

ಈ ಪಾನೀಯದಲ್ಲಿರುವ ಆರೋಗ್ಯಕರ ಗುಣಲಕ್ಷಣಗಳು ಜೀರ್ಣ ಕ್ರಿಯೆ ಸುಧಾರಿಸುತ್ತದೆ ಹಾಗೂ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡುತ್ತದೆ

4-5 ಸ್ವಚ್ಚವಾದ ತುಳಸಿ ಎಲೆಗಳನ್ನು ತೆಗೆದುಕೊಂಡು, ಅರ್ಧ ಇಂಚು ಶುಂಠಿ ಸೇರಿಸಿ ಅದಕ್ಕೆ 1 ಲೋಟ ನೀರಿನಲ್ಲಿ ಕುದಿಸಿ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು

ಈ ಎಲ್ಲಾ ಮಾಹಿತಿ ಸಂಗ್ರಹ ಮಾಹಿತಿಯಾಗಿದ್ದು, ಉತ್ತಮ ಆರೋಗ್ಯಕ್ಕಾಗಿ ವೈದ್ಯರನ್ನು ಸಂಪರ್ಕ ಮಾಡುವುದು ಸೂಕ್ತ

Seraphinite AcceleratorOptimized by Seraphinite Accelerator
Turns on site high speed to be attractive for people and search engines.