ಈ ಎಲೆಗಳನ್ನು ಬಳಸಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣ ಮಾಡಿ…!

ನುಗ್ಗೆ ಸೊಪ್ಪು

ಇದರಲ್ಲಿ ಐಸೋಥಿಯೋಸೈನೆಟ್ ಗಳನ್ನು ಹೊಂದಿದ್ದು, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಬೇವಿನ ಎಲೆಗಳು 

ಈ ಎಲೆಗಳನ್ನು ಸಂಪ್ರದಾಯಿಕವಾಗಿ ಆಯುರ್ವೇದ ಔಷಧದಲ್ಲಿ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುವ ಸಾಮರ್ಥ್ಯಕ್ಕಾಗಿ ಬಳಸಲಾಗುತ್ತದೆ.  

ಹಾಗಲಕಾಯಿ ಎಲೆಗಳು 

ಈ ಎಲೆಗಳಲ್ಲಿ ಪಾಲಿಹೆಪೈಡ್-ಪಿ ಇರುತ್ತದೆ. ಇದು ಜೈವಿಕ ಸಕ್ರಿಯ ಸಂಯುಕ್ತವಾಗಿರುವ ಹಿನ್ನೆಲೆಯಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆ ಮಾಡುತ್ತದೆ. 

ಪೇರಲೆ ಎಲೆಗಳು 

ಪೇರಲೆ ಎಲೆಗಳಲ್ಲಿ ಆಹಾರದ ಫೈಬರ್‍ ಹಾಗೂ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡುವ ಗುಣಲಕ್ಷಣಗಳು ಹೇರಳವಾಗಿದೆ 

ಮಾವಿನ ಎಲೆಗಳು 

ಈ ಎಲೆಗಳಲ್ಲಿ ಟ್ಯಾನಿಸ್ ಗಳು ಹಾಗೂ ಆಂಥೋಸಯಾನಿಸ್ ಗಳನ್ನು ಹೊಂದಿದ್ದು, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಕಾರಿಯಾಗಿದೆ 

ಕರಿಬೇವಿನ ಎಲೆಗಳು 

ಕರಿಬೇವಿನ ಎಲೆಗಳಲ್ಲಿ ತುಂಬಾನೆ ಔಷಧೀಯ ಗುಣಗಳಿವೆ. ಕಾರ್ಬೋಹೈಡ್ರೇಟ್ ಗಳ ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರುವ ಕಾರಣದಿಂದ ರಕ್ತದಲ್ಲಿ ಸಕ್ಕರೆ ಮಟ್ಟ ಕಡಿಮೆ ಮಾಡಲು ಸಹಾಯ ಮಾಡುತ್ತದೆ 

ಲವಂಗ ಎಲೆಗಳು 

ಈ ಎಲೆಗಳಲ್ಲಿ ಪಾಲಿಫಿನಾಲ್ ನಂತಹ ಸಂಯುಕ್ತಗಳನ್ನು ಹೊಂದಿರುವುದರಿಂದ ಸಕ್ಕರೆ ಪ್ರಮಾಣ ಕಡಿಮೆ ಮಾಡಲು ಸಹಾಯ ಮಾಡುತ್ತದೆ. 

ತುಳಸಿ ಎಲೆಗಳು 

ತುಳಸಿ ಎಲೆಗಳಲ್ಲಿ ಹೈಪೋಗ್ಲೀಸಿಮಿಕ್ ಗುಣಲಕ್ಷಣಗಳನ್ನು ಹೊಂದಿದ್ದು, ಇದು ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡಲು ಸಹಾಯ ಮಾಡುತ್ತದೆ.  

ಈ ಎಲ್ಲಾ ಮಾಹಿತಿ ಸಂಗ್ರಹ ಮಾಹಿತಿಯಾಗಿದೆ