ಸದ್ಯ IPL ಕ್ರಿಕೆಟ್ ಪಂದ್ಯಾವಳಿಗಳ ಹವಾ ಜೋರಾಗಿದ್ದು, ಕ್ರಿಕೆಟ್ ಅಭಿಮಾನಿಗಳು ಪಂದ್ಯಗಳ ವೀಕ್ಷಣೆಯಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಸದ್ಯ IPL 2024 ಪ್ಲೇಆಫ್ ನಲ್ಲಿ ನಾಲ್ಕು ತಂಡಗಳಿರಲಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತನ್ನ ಕೊನೆಯ ಪಂದ್ಯದಲ್ಲಿ ಚನ್ನೈ ಸೂಪರ್ ಕಿಂಗ್ಸ್ ವಿರುದ್ದ ರೋಚಕ ಗೆಲುವು ಸಾಧಿಸಿದೆ. ಆ ಮೂಲಕ ಪ್ಲೇಆಫ್ ನಲ್ಲಿ ಸ್ಥಾನ ಕಾಯ್ದಿರಿಸಿದೆ. ಈ ಪಂದ್ಯ ಗೆದ್ದ ಕೂಡಲೇ ವಿರಾಟ್ ಕೊಹ್ಲಿ ಕ್ರೀಡಾಂಗಣದಲ್ಲೇ ಕಣ್ಣಿರಾಕಿದ್ದಾರೆ. ಜೊತೆಗೆ ಪಂದ್ಯ ವೀಕ್ಷಣೆ ಮಾಡಲು ಬಂದಿದ್ದ ಅನುಷ್ಕಾ ಶರ್ಮಾ ಸಹ ಕಣ್ಣಿರಾಗಿದ್ದಾರೆ. ಈ ಸಂಬಂಧ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.
ನಿನ್ನೆ (ಮೇ 18) ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನೈ ಸೂಪರ್ ಕಿಂಗ್ಸ್ ನಡುವೆ ಪಂದ್ಯ ನಡೆದಿತ್ತು. ಈ ಪಂದ್ಯಾವಳಿಯಲ್ಲಿ ಆರ್.ಸಿ.ಬಿ 27 ರನ್ ಗಳಿಂದ ಗೆಲುವು ಸಾಧಿಸಿದೆ. ಮೊದಲ 7 ಪಂದ್ಯಗಳ ಬಳಿಕ ಅಂಕಪಟ್ಟಿಯಲ್ಲಿ ಕೊನೆಯಲ್ಲಿದ್ದ ಆರ್.ಸಿ.ಬಿ ಈ ಮಾದರಿಯಲ್ಲಿ ಕಮ್ ಬ್ಯಾಕ್ ಮಾಡುತ್ತೆ ಅಂತಾ ಯಾರೂ ಊಹಿಸಿರಲಿಲ್ಲ. ಇನ್ನೂ ಪಂದ್ಯಾವಳಿ ಗೆಲ್ಲುತ್ತಿದ್ದಂತೆ ತಂಡದ ಆಟಗಾರರು ಸಂಭ್ರಮಿಸಿದರು. ಇದೇ ಸಮಯದಲ್ಲಿ ವಿರಾಟ್ ಕೊಹ್ಲಿ ಭಾವುಕರಾಗಿದ್ದಾರೆ. ಆರ್.ಸಿ.ಬಿ ಪಂದ್ಯ ಗೆಲ್ಲುತ್ತಿದ್ದಂತೆ ಕ್ರೀಡಾಂಗಣದಲ್ಲಿದ್ದ ಆರ್.ಸಿ.ಬಿ ಫ್ಯಾನ್ಸ್ ಸಹ ಕೂಗಾಡುತ್ತಾ, ಚಿರಾಡುತ್ತಾ ಸಂಭ್ರಮಿಸಿದ್ದಾರೆ.
ಇನ್ನೂ ಸಿ.ಎಸ್.ಕೆ. ಅರ್ಹತೆ ಪಡೆಯಲು 17 ರನ್ ಗಳು ಕೊನೆಯ ಓವರ್ ನಲ್ಲಿ ಬೇಕಾಗಿತ್ತು. ಅನೇಕರು ಇದು ಚೆನೈ ಪರ ಆಗುತ್ತೆ ಎಂದು ಎಲ್ಲರೂ ನಂಬಿದ್ದರು. ಇದಕ್ಕೆ ಕಾರಣ ಕ್ರೀಸ್ ನಲ್ಲಿ ಎಂ.ಎಸ್.ಧೋನಿ ಇದ್ದರು. ಕೆಲವರು ಅಭಿಪ್ರಾಯದಂತೆ ಧೋನಿ ಮೊದಲ ಎಸೆತದಲ್ಲೇ ಸಿಕ್ಸ್ ಹೊಡೆದರು. ಆದರು ಯಶ್ ದಯಾಲ್ ಬೌಲಿಂಗ್ ನಲ್ಲಿ ಧೋನಿ ನಿರ್ಗಮಿಸಿದರು. ದಯಾಳ್ ಅದ್ಬುತವಾದ ಕಮ್ ಬ್ಯಾಕ್ ಮಾಡಿದ್ದರು. ಆರ್.ಸಿ.ಬಿ ಊಹಿಸಲಾಗದ ರೀತಿ ಗೆಲುವು ಸಾಧಿಸಿ ಪ್ಲೇ ಆಫ್ ಗೆ ಅರ್ಹತೆ ಪಡೆದುಕೊಂಡಿತ್ತು. ಇನ್ನೂ ಪಂದ್ಯ ಗೆದ್ದ ಕೂಡಲೇ ವಿರಾಟ್ ಮೈದಾನದಲ್ಲಿ ಓಡಿ ಬಂದು ಆಟಗಾರರನ್ನು ತಬ್ಬಿಕೊಂಡು ಸಂಭ್ರಮಿಸಿದರು. ನಂತರ ಒಬ್ಬರೇ ನಿಂತು ತಮ್ಮ ಕ್ಯಾಪ್ ತೆಗೆದು ಕಣ್ಣಿರಾಕಿದ್ದಾರೆ. ಇನ್ನೂ ಇದನ್ನು ನೋಡಿದ ಗ್ಯಾಲರಿಯಲ್ಲಿ ಕುಳಿತಿದ್ದ ಅನುಷ್ಕಾ ಶರ್ಮಾ ಸಹ ಕಣ್ಣೀರಾಕಿದ್ದಾರೆ. ಈ ಭಾವುಕ ಕ್ಷಣಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ.
ವಿಡಿಯೋ ನೋಡಲು ಈ ಲಿಂಕ್ ಒಪೆನ್ ಮಾಡಿ: https://x.com/Shru3Kris/status/1791902615078678798
ಸದ್ಯ RCB 14 ಅಂಕಗಳೊಂದಿಗೆ IPL 2024 ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಫಾಫ್ ಪಡೆ ಫೈನಲ್ ತಲುಪು ಎರಡು ಪಂದ್ಯಗಳನ್ನು ಆಡಬೇಕಿದೆ. ಎಲಿಮಿನೇಟರ್ ನಲ್ಲಿ ಆರ್.ಸಿ.ಬಿ ರಾಜಸ್ಥಾನ್ ರಾಯಲ್ಸ್ ಅಥವಾ ಸನ್ ರೈಸರ್ಸ್ ವಿರುದ್ದ ಮೇ.22 ರಂದು ಆಡಲಿದೆ. ಒಟ್ಟಿನಲ್ಲಿ ಆರ್.ಸಿ.ಬಿ ಗೆದ್ದ ಖುಷಿ ಕೇವಲ ಆಟಗಾರರಿಗೆ ಮಾತ್ರವಲ್ಲದೇ ಲಕ್ಷಾಂತರ ಅಭಿಮಾನಿಗಳೂ ಸಹ ಸಂತಸದಿಂದ ಸಂಭ್ರಮಿಸಿದ್ದಾರೆ.