Monday, January 19, 2026
HomeNationalViral Video : ಜ್ಞಾನವಾಪಿ ಪ್ರಕರಣದ ವಿಚಾರಣೆಯ ಸಮಯದಲ್ಲಿ ಕೋರ್ಟ್ ನೊಳಗೆ ಎಂಟ್ರಿಕೊಟ್ಟ ಕೋತಿ, ವೈರಲ್...

Viral Video : ಜ್ಞಾನವಾಪಿ ಪ್ರಕರಣದ ವಿಚಾರಣೆಯ ಸಮಯದಲ್ಲಿ ಕೋರ್ಟ್ ನೊಳಗೆ ಎಂಟ್ರಿಕೊಟ್ಟ ಕೋತಿ, ವೈರಲ್ ಆದ ವಿಡಿಯೋ…!

Viral Video – ಇತ್ತೀಚಿಗೆ ಪ್ರಾಣಿಗಳಿಗೆ ಸಂಬಂಧಿಸಿದಂತ ಕೆಲವೊಂದು ಪೊಟೋಗಳು, ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿರುತ್ತವೆ. ಇದೀಗ ಕೋತಿಗೆ ಸಂಬಂಧಿಸಿದ ವಿಡಿಯೋ ಒಂದು ವೈರಲ್ ಆಗುತ್ತಿದೆ. ಉತ್ತರಪ್ರದೇಶದ ವಾರಣಾಸಿಯ ಜ್ಞಾನವಾಪಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದ್ದಾಗ ಆಶ್ವರ್ಯಕರವಾದ ಘಟನೆಯೊಂದು ನಡೆದಿದೆ. ಪ್ರಕರಣದ ವಿಚಾರಣೆ ನಡೆಯುವಾಗ ಕೋತಿಯೊಂದು ಬಂದು ಕಲಾಪ ವೀಕ್ಷಣೆ ಮಾಡಿದ್ದು, ಈ ವಿಡಿಯೋ ವೈರಲ್ ಆಗುತ್ತಿದೆ.

Monkey in Varanasi court

ಉತ್ತರ ಪ್ರದೇಶದ ಜ್ಞಾನವಾಪಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜ.5 ಶನಿವಾರದಂದು ವಾರಣಾಸಿಯಲ್ಲಿ ವಿಚಾರಣೆ ನಡೆಯುತ್ತಿದ್ದಾಗ ಈ ಆಶ್ಚರ್ಯಕರವಾದ ಘಟನೆ ನಡೆದಿದೆ. ಪ್ರಕರಣದ ವಿಚಾರಣೆ ನಡೆಯುತ್ತಿದ್ದಾಗ ಕೋತಿಯೊಂದು ಎಂಟ್ರಿ ಕೊಟ್ಟಿದೆ. ಮುಖ್ಯವಾದ ವಿಚಾರಣೆ ನಡೆಯುತ್ತಿದ್ದ ಸಮಯದಲ್ಲಿ ಕೋತಿ ಕೋರ್ಟ್ ಕೊಠಿಯೊಳಗೆ ಬಂದಿದೆ. ಸುಮಾರು ಒಂದು ಗಂಟೆಯ ಕಾಲ ಟೇಬಲ್ ಮೇಲೆ ಕುಳಿತುಕೊಂಡು ಬಳಿಕ ಅಲ್ಲಿಂದ ಹೋಗಿದೆ. ಈ ಘಟನೆ ನ್ಯಾಯಾಲಯದ ಸಿಬ್ಬಂದಿ ಸೇರಿದಂತೆ ಅಲ್ಲಿದ್ದವರನ್ನೆಲ್ಲಾ ಆಶ್ಚರ್ಯಚಕಿತರನ್ನಾಗಿ ಮಾಡಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here

ಇನ್ನೂ ಈ ವಿಡಿಯೋವನ್ನು @ISparshUpadhyay ಎಂಬ ಎಕ್ಸ್ (ಟ್ವಿಟರ್‍) ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋ ನೋಡಿದ ಹಿಂದೂಗಳು ಇದು ಶುಭ ಸೂಚಕ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಕೋತಿ ನ್ಯಾಯಾಲಯದ ಕೊಠಡಿಯಲ್ಲಿ ಕುಳಿತು ಕಲಾಪವನ್ನು ವೀಕ್ಷಣೆ ಮಾಡುತ್ತಿರುವುದನ್ನು ಕಾಣುತ್ತದೆ. ಕಳೆದ ಜ.5 ರಂದು ಹಂಚಿಕೊಂಡ ಈ ವಿಡಿಯೋ ಭಾರಿ ವ್ಯೂಸ್ ಕಂಡಿದೆ. ಜೊತೆಗೆ ವಿವಿಧ ರೀತಿಯ ಕಾಮೆಂಟ್ ಗಳೂ ಸಹ ಹರಿದುಬರುತ್ತಿವೆ. ಅನೇಕ ಹಿಂದೂಗಳು ಇದೊಂದು ಶುಭಸೂಚಕವಾದ ವಿಚಾರ ಎಂದರೇ, ಮತ್ತೆ ಕೆಲವರು ನ್ಯಾಯಾಲಯದಲ್ಲಿ ಭದ್ರತೆಯಿಲ್ಲ ಆದ್ದರಿಂದ ಕೋತಿ ಕೊರ್ಟ್ ಒಳಗೆ ಬಂದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

by ISM Kannada News Deskhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular