Author: by Admin

Welcome to ISM Kannada News, if you want to contact us, then feel free to say anything about www.ismkannadanews.com

NIMHANS –  ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (NIMHANS) 2025ನೇ ಸಾಲಿನ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದು, 32 ಫೀಲ್ಡ್ ಡೇಟಾ ಕಲೆಕ್ಟರ್ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ. ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗದ ಹುಡುಕಾಟದಲ್ಲಿರುವ ಅಭ್ಯರ್ಥಿಗಳಿಗೆ ಇದು ಒಳ್ಳೆಯ ಅವಕಾಶ. ನೇರ ಸಂದರ್ಶನ (Walk-in Interview) ಮಾರ್ಚ್ 19, 2025 ರಂದು ನಡೆಯಲಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಸಂದರ್ಶನದಲ್ಲಿ ಭಾಗವಹಿಸಬಹುದು. NIMHANS – ನಿಮ್ಹಾನ್ಸ್ ನೇಮಕಾತಿ 2025 – ಹುದ್ದೆಗಳ ಸಂಪೂರ್ಣ ವಿವರ: ಸಂಸ್ಥೆ: ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (NIMHANS) ಹುದ್ದೆಯ ಹೆಸರು: ಫೀಲ್ಡ್ ಡೇಟಾ ಕಲೆಕ್ಟರ್ ಹುದ್ದೆಗಳ ಸಂಖ್ಯೆ: 32 ಉದ್ಯೋಗ ಸ್ಥಳ: ಬೆಂಗಳೂರು, ಕರ್ನಾಟಕ ಉದ್ಯೋಗದ ಪ್ರಕಾರ: ಕರ್ನಾಟಕ ಸರ್ಕಾರಿ ಉದ್ಯೋಗ ಸಂಬಳ: ತಿಂಗಳಿಗೆ ರೂ. 15,000/- ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಸಂದರ್ಶನ ದಿನಾಂಕ: ಮಾರ್ಚ್ 19, 2025, ಬೆಳಿಗ್ಗೆ 10:00 ಗಂಟೆ NIMHANS…

Read More

Local News – ಸುಮಾರು ವರ್ಷಗಳ ಹಿಂದೆ ರೂಢಿಯಲ್ಲಿದ್ದ ಮೂಡನಂಬಿಕೆ ಸೇರಿದಂತೆ ಅನೇಕ ಅನಿಷ್ಟ ಪದ್ದತಿಗಳ ವಿರುದ್ದ ಹೋರಾಡಿ, ಜನರನ್ನು ಜಾಗೃತರನ್ನಾಗಿ ಮಾಡಿದಂತಹ ಕೈವಾರ ತಾತಯ್ಯ, ಯೋಗಿ ವೇಮನ, ಬಸವಣ್ಣ ರವರಂತಹ ಮಹನೀಯರನ್ನು ನಾವು ಸದಾ ಸ್ಮರಿಸಬೇಕು. ಅವರ ಮಾರ್ಗದರ್ಶನದಲ್ಲಿ ನಡೆಯಬೇಕು ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದಲ್ಲಿ ತಾಲೂಕು ಬಲಿಜ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಯೋಗಿನಾರೇಯಣ ಯತೀಂದ್ರ ರವರ 299ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಾತಿ ಪದ್ದತಿ, ಅಸ್ಪೃಶ್ಯತೆ ಸೇರಿದಂತೆ ಹಲವಾರು ಮೂಡನಂಬಿಕೆಗಳ ವಿರುದ್ದ ಜನಸಾಮಾನ್ಯರಲ್ಲಿ ತಮ್ಮ ವಚನಗಳ ಮೂಲಕ ಜಾಗೃತಿ ಮೂಡಿಸುವುದು, ಅನಿಷ್ಟ ಪದ್ದತಿಗಳ ವಿರುದ್ದ ಹೋರಾಡಿದಂತಹ ಮಹನೀಯರನ್ನು ಕೇವಲ ಅವರವರ ಜಯಂತಿಗಳಂದು ಮಾತ್ರವಲ್ಲದೇ  ಸದಾ ಅವರನ್ನು ಸ್ಮರಿಸಬೇಕು, ಅವರ ಮಾರ್ಗದರ್ಶನದಲ್ಲಿ ನಡೆಯಬೇಕು. ಆಗ ಮಾತ್ರ ಅವರಿಗೆ ನಿಜವಾದ ಗೌರವ ಸೂಚಿಸದಂತಾಗುತ್ತದೆ. ಅನೇಕರು ಕಷ್ಟ ಬಂದಾಗ ವೆಂಕಟರಮಣ ಎಂದು ಇರುತ್ತಾರೆ. ಜೊತೆಗೆ ನಾನು ಪ್ರತಿನಿತ್ಯ ದೇವರನ್ನು ಪೂಜೆ ಮಾಡುತ್ತೇವೆ. ಆದರೂ…

Read More

Crime – ಅಕ್ರಮ ಸಂಬಂಧಗಳ ಕಾರಣದಿಂದ ಅದೆಷ್ಟೋ ಕುಟುಂಬಗಳು ಬೀದಿಗೆ ಬಿದ್ದಿದೆ. ಅದರಲ್ಲೂ ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಪರಿಚಯವಾದವರು ಕೊಲೆಯಾದ ಘಟನೆಗಳ ಬಗ್ಗೆಯೂ ಕೇಳಿರುತ್ತೇವೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ತಾನು ತಾಳಿ ಕಟ್ಟಿದ ಪತ್ನಿಯನ್ನು ಬಿಟ್ಟು ಇನ್ಸ್ಟಾಗ್ರಾಂ ನಲ್ಲಿ ಪರಿಚಯವಾದ ಸುಂದರಿಯ ಹಿಂದೆ ಹೋದ ವ್ಯಕ್ತಿಯೊರ್ವ ಕೊಲೆಯಾಗಿದ್ದಾನೆ. ಈ ಕೊಲೆಗೆ ಇನ್ಸ್ಟಾಗ್ರಾಂ ಸುಂದರಿಯೇ ಕಾರಣ ಎಂಬ ಅನುಮಾನ ಸಹ ವ್ಯಕ್ತವಾಗಿದೆ ಎಂದು ತಿಳಿದುಬಂದಿದೆ. ಮೈಸೂರು ತಾಲ್ಲೂಕಿನ ಅನುಗನಹಳ್ಳಿಯ ನಿವಾಸಿ ದೊರೆಸ್ವಾಮಿ ಅಲಿಯಾಸ್ ಸೂರ್ಯ (32) ಇನ್ಸ್ಟಾಗ್ರಾಮ್ನಲ್ಲಿ ಪರಿಚಯವಾದ ಸುಂದರಿ ಶ್ವೇತಾಳ ಬಲೆಗೆ ಬಿದ್ದು ದುರಂತ ಅಂತ್ಯ ಕಂಡಿದ್ದಾನೆ. ಮದುವೆಯಾಗಿ ಇಬ್ಬರು ಮಕ್ಕಳ ತಂದೆಯಾಗಿದ್ದರೂ ಸಹ ಸೋಷಿಯಲ್ ಮೀಡಿಯಾದ ಮೂಲಕ ಶ್ವೇತಾಳೊಂದಿಗೆ ಸಂಬಂಧ ಬೆಳೆಸಿದ್ದ ಸೂರ್ಯ, ಕಳೆದ ಮಾರ್ಚ್ 14 ರಾತ್ರಿ ಕೊಲೆಯಾಗಿದ್ದಾನೆ. ಸುಮಾರು ಆರೇಳು ವರ್ಷಗಳ ಹಿಂದೆ ಮೈಸೂರಿನ ಹಿನಕಲ್‌ನ ನಿವಾಸಿ ದೀಪಿಕಾಳ ಮದುವೆಯಾಗಿದ್ದ ರೌಡಿ ಶೀಟರ್ ಸೂರ್ಯ ಇದೀಗ ಇನ್ಸ್ಟಾ ಸುಂದರಿಯ ಹಿಂದೆ ಬಿದ್ದು ಕೊಲೆಯಾಗಿದ್ದಾನೆ. ನಿನ್ನೆ (ಮಾರ್ಚ್…

Read More

Flipkart – ಸ್ಮಾರ್ಟ್ ಟಿವಿ ಖರೀದಿಸಲು ಪ್ಲಾನ್ ಮಾಡುತ್ತಿದ್ದರೆ, ಫ್ಲಿಪ್ ಕಾರ್ಟ್ ಸೇಲ್ (Flipkart Sale) ನಿಮಗೆ ಒಳ್ಳೆಯ ಅವಕಾಶ. ಜನಪ್ರಿಯ ಟೆಕ್ ಬ್ರ್ಯಾಂಡ್ ಥಾಮ್ಸನ್ (Thomson) ತನ್ನ ವಿವಿಧ ಸ್ಮಾರ್ಟ್ ಟಿವಿಗಳ ಮೇಲೆ ಭಾರೀ ರಿಯಾಯಿತಿಯನ್ನು ನೀಡಿದೆ. ಕೇವಲ ₹5,999 ರಿಂದ ಪ್ರಾರಂಭವಾಗುವ ಈ ಟಿವಿಗಳು ಅತ್ಯುತ್ತಮ ಫೀಚರ್‌ಗಳನ್ನು ಹೊಂದಿವೆ. Flipkart – ಫ್ಲಿಪ್ ಕಾರ್ಟ್ ಸೇಲ್‌ ನಲ್ಲಿ ಥಾಮ್ಸನ್ ಟಿವಿಗಳ ಬೆಲೆಗಳು (Updated List) ಕೆಳಗಿನ ಪಟ್ಟಿಯಲ್ಲಿರುವ ಮೌಲ್ಯಯುತ ಟಿವಿಗಳು ಈಗ ಸೀಮಿತ ಅವಧಿಗೆ ಲಭ್ಯವಿದೆ: ಮಾದರಿ (Model) ಇಂಚುಗಳು (Size) ಬೆಲೆ (₹) 24ALPHA001 24″ 5,999 32ALPHA007BL 32″ 7,999 32PATH0011 32″ 9,499 32RT1022 32″ 9,499 40Alpha 009BL 40″ 13,499 40RT1033 40″ 14,499 42RT1044 42″ 15,499 43Alpha005BL 43″ 14,999 43RT1055 43″ 16,499 43TJQ0012 43″ 18,999 50OPMAXGT9020 50″ 22,999 Q32H1111 32″ 10,499 Q32H1110…

Read More

Google Photos – ಸ್ಮಾರ್ಟ್‌ಫೋನ್ ಬಳಕೆದಾರರು ತಮ್ಮ ಫೋಟೋಗಳನ್ನು ಗೂಗಲ್ ಫೋಟೋಸ್‌ನಲ್ಲಿ ಸೇವ್ ಮಾಡುವುದು ಸಾಮಾನ್ಯ. ಫೋನ್ ಫಾರ್ಮ್ಯಾಟ್ ಆದರೂ ಅಥವಾ ಹೊಸ ಫೋನ್ ಬಳಸಿದಾಗಲೂ, ಆಕೌಂಟ್ ಲಾಗಿನ್ ಮಾಡಿದ ತಕ್ಷಣ ಎಲ್ಲಾ ಫೋಟೋಗಳು ಲಭ್ಯವಿರುತ್ತವೆ. ಆದರೆ, “Storage Full” ಎಂಬ ಮೆಸೇಜ್ ಬರುವುದು ಗೊಂದಲ ಉಂಟುಮಾಡಬಹುದು. ಹೊಸ ಫೋಟೋ ಮತ್ತು ವೀಡಿಯೋಗಳನ್ನು ಅಪ್ಲೋಡ್ ಮಾಡುವುದು ಕಷ್ಟವಾಗಬಹುದು, ಇಮೇಲ್‌ಗಳು ಬರಬಹುದು, ಹೊಸ ಫೈಲುಗಳನ್ನು ಸೆೇವ್ ಮಾಡಲೂ ಆಗದೆ ಸಮಸ್ಯೆಯಾಗಬಹುದು. ಈ ಸರಳ ಟ್ರಿಕ್ಸ್ ಬಳಸಿಕೊಂಡು, ನೀವು ಗೂಗಲ್ ಫೋಟೋಸ್‌ನಲ್ಲಿ ಸ್ಟೋರೇಜ್ ಹಗುರ ಮಾಡಿ, ಖಾಲಿ ಮಾಡಿಕೊಳ್ಳಬಹುದು, ಮತ್ತು ಅಗತ್ಯವಿರುವ ಫೋಟೋಗಳಿಗೆ ಸ್ಥಳವನ್ನು ಕಲ್ಪಿಸಬಹುದು. Google Photos – 1. ಫೋಟೋ ಮತ್ತು ವೀಡಿಯೋಗಳನ್ನು ಕಂಪ್ರೆಸ್ ಮಾಡಿ – (Compress Photos & Videos) ಗೂಗಲ್ ಫೋಟೋಸ್‌ನಲ್ಲಿ ನೀವು Original Quality ನಲ್ಲಿ ಫೋಟೋಗಳನ್ನು ಅಪ್ಲೋಡ್ ಮಾಡಿದ್ದರೆ, ಅವು ಹೆಚ್ಚಿನ ಜಾಗವನ್ನು ತೆಗೆದುಕೊಳ್ಳುತ್ತವೆ. Storage Saver (High Quality) ಮೋಡ್ ಬಳಸಿದರೆ, ಫೋಟೋಗಳು…

Read More

Kaiwara Tataiah – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶ್ರೀ ಯೋಗಿನಾರೇಯಣ ಯತೀಂದ್ರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು. ಈ ವೇಳೆ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನಾಗಮಣಿ ಮಾತನಾಡಿ, ಮಹಾನ್ ಚೇತನರಲ್ಲಿ ಕೈವಾರ ತಾತಯ್ಯ ನವರು ಸಹ ಒಬ್ಬರು. ಅವರ ಜಯಂತಿಯನ್ನು ಆಚರಿಸುವುದು ನಮ್ಮೆಲ್ಲರ ಪುಣ್ಯ, ನಮ್ಮ ಜಿಲ್ಲೆಯಲ್ಲಿ ಜನಿಸಿದಂತಹ ಯೋಗಿನಾರೇಯಣ ಯತೀಂದ್ರರು ಕೇವಲ ಒಂದು ಸಮುದಾಯಕ್ಕೆ ಸೇರಿದವರಲ್ಲ. ಎಲ್ಲ ಸಮುದಾಯದವರಿಗೂ ಅವರು ಸಲ್ಲುತ್ತಾರೆ. ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದಿ ತೀಡುವಂತಹ ವಚನಗಳನ್ನು ರಚಿಸಿದ್ದಾರೆ. ಸಮಾಜ ಸುಧಾಕರರ ವಚನಗಳು ಕಾಲೇಜು, ಶಾಲೆಗಳಲ್ಲಿ ತಿಳಿಸುವಂತಹ ಕೆಲಸ ಮಾಡಬೇಕು. ಸೋಷಿಯಲ್ ಮಿಡಿಯಾಗಳಲ್ಲಿ ಬ್ಯುಸಿಯಾಗಿರುವ ಮಕ್ಕಳಿಗೆ ಈ ರೀತಿಯ ವಚನಗಳು, ಸಮಾಜ ಸುಧಾಕರ ಬಗ್ಗೆ ತಿಳಿಸಿಕೊಡುವ ಕೆಲಸ ನಾವೆಲ್ಲರೂ ಮಾಡಬೇಕು ಎಂದರು. ಕಾರ್ಯಕ್ರಮದಲ್ಲಿ ಬಲಿಜ ಮುಖಂಡ ದ್ವಾರಕಾನಾಥ್ ನಾಯ್ಡು ಮಾತನಾಡಿ, ನಮ್ಮ ಸಮುದಾಯ ಎಲ್ಲಾ ಕ್ಷೇತ್ರಗಳಲ್ಲೂ ಮುಂದುವರಿಯಬೇಕು. ಶಿಕ್ಷಣದಲ್ಲಿ ಕೊಂಚ ಮುಂದೆ ಇದ್ದರೂ ನಾವು ರಾಜಕೀಯವಾಗಿ…

Read More

Railway Jobs – ಸೌತ್ ಈಸ್ಟ್ ಸೆಂಟ್ರಲ್ ರೈಲ್ವೆ (SECR) ಇಲಾಖೆಯು 1003 ಅಪ್ರೆಂಟಿಸ್ ಉದ್ಯೋಗಗಳಿಗೆ ಅರ್ಜಿ ಆಹ್ವಾನಿಸಿದೆ. ಈ ಉದ್ಯೋಗಗಳು 10ನೇ ತರಗತಿ ಮತ್ತು ಐಟಿಐ (ಇಂಡಸ್ಟ್ರಿಯಲ್ ಟ್ರೇನಿಂಗ್ ಇನ್ಸ್ಟಿಟ್ಯೂಟ್) ಪಾಸ್ ಮಾಡಿದ ಯುವಕ-ಯುವತಿಯರಿಗೆ ಉತ್ತಮ ಅವಕಾಶವನ್ನು ನೀಡುತ್ತವೆ. ಈ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು 15 ರಿಂದ 24 ವರ್ಷ ವಯೋಮಿತಿಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ 6 ಮಾರ್ಚ್ 2025 ರಿಂದ 2 ಏಪ್ರಿಲ್ 2025 ರವರೆಗೆ ನಡೆಯುತ್ತದೆ. ಈ ಉದ್ಯೋಗಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ. Railway Jobs – ಯಾರು ಅರ್ಜಿ ಸಲ್ಲಿಸಬಹುದು? ವಯೋಮಿತಿ: ಕನಿಷ್ಠ 15 ವರ್ಷ ಮತ್ತು ಗರಿಷ್ಠ 24 ವರ್ಷ. ಶೈಕ್ಷಣಿಕ ಅರ್ಹತೆ: 10ನೇ ತರಗತಿ ಪಾಸ್ ಮತ್ತು ಐಟಿಐ (ಇಂಡಸ್ಟ್ರಿಯಲ್ ಟ್ರೇನಿಂಗ್ ಇನ್ಸ್ಟಿಟ್ಯೂಟ್) ಪಾಸ್ ಮಾಡಿರಬೇಕು. Railway Jobs – ಉದ್ಯೋಗಗಳ ವಿವರ: ಎಸ್ಇಸಿಆರ್ ಅಪ್ರೆಂಟಿಸ್ ಪದವಿಗೆ ಕೆಳಗಿನ ಉದ್ಯೋಗಗಳು ಲಭ್ಯವಿವೆ: ವೆಲ್ಡರ್ ಟರ್ನರ್ ಫಿಟ್ಟರ್ ಎಲೆಕ್ಟ್ರಿಷಿಯನ್ ಸ್ಟೆನೋಗ್ರಾಫರ್…

Read More

E-Khata – ಕರ್ನಾಟಕ ಸರ್ಕಾರ ನಗರ ಸ್ಥಳೀಯ ಸಂಸ್ಥೆಗಳಲ್ಲಿ E-Khata (ಇ-ಖಾತಾ) ಅನ್ವಯಿಸುವಂತೆ ಹೊಸ ಆದೇಶ ಹೊರಡಿಸಿದ್ದು, ಎ-ಖಾತೆ ಮತ್ತು ಬಿ-ಖಾತೆ ಹೊಂದಿರುವ ಎಲ್ಲಾ ಆಸ್ತಿಗಳಿಗೆ ನೋಂದಣಿ ಪ್ರಕ್ರಿಯೆ ಕಡ್ಡಾಯವಾಗಿದೆ. ಈ ಸಂಬಂಧ ನೋಂದಣಿ ಪರಿವೀಕ್ಷಕರು ಮತ್ತು ಮುದ್ರಾಂಕ ಆಯುಕ್ತ ದಯಾನಂದ ಅವರಿಂದ ಸುತ್ತೋಲೆ ಹೊರಡಿಸಲಾಗಿದ್ದು, ಆಸ್ತಿ ಮಾಲೀಕರು ಮತ್ತು ಉಪ ನೋಂದಣಾಧಿಕಾರಿಗಳಲ್ಲಿ ಗೊಂದಲಗಳಿಗೆ ತೆರೆ ಬೀಳುವ ನಿರೀಕ್ಷೆಯಿದೆ. E-Khata – ಎ-ಖಾತೆ, ಬಿ-ಖಾತೆ—ನೋಂದಣಿ ಮಾಡಿಸಬಹುದಾ? ಗೊಂದಲ ಬೇಡ! ಇತ್ತೀಚೆಗೆ ಕೆಲವು ಉಪ ನೋಂದಣಾಧಿಕಾರಿಗಳು ಎ-ಖಾತೆ ಮತ್ತು ಬಿ-ಖಾತೆ ಹೊಂದಿರುವ ಆಸ್ತಿಗಳ ನೋಂದಣಿ ಪ್ರಕ್ರಿಯೆ ಬಗ್ಗೆ ಗೊಂದಲ ಸೃಷ್ಟಿಸುತ್ತಿದ್ದರು. ಅವರ ಪ್ರಕಾರ, ಎ-ಖಾತೆ ಅಥವಾ ಬಿ-ಖಾತೆ ಇದ್ದರೆ, ನೋಂದಣಿ ಸಾಧ್ಯವಿಲ್ಲ ಎಂಬ ತಪ್ಪು ನಂಬಿಕೆ ಬೆಳೆಸಲಾಗಿತ್ತು. ಈ ಗೊಂದಲ ನಿವಾರಿಸಲು ಕರ್ನಾಟಕ ಸರ್ಕಾರದ ಹೊಸ ಆದೇಶ ಹೊರಬಿದ್ದಿದ್ದು, ಯಾವುದೇ ಆಸ್ತಿಯ ಖಾತೆ ಇರಲಿ, ನೋಂದಣಿ ಕಡ್ಡಾಯ ಎಂದು ಸ್ಪಷ್ಟಪಡಿಸಲಾಗಿದೆ. E-Swathu (ಇ-ಸ್ವತ್ತು) ಮತ್ತು E-Aasthi (ಇ-ಆಸ್ತಿ) ತಂತ್ರಾಂಶದ ಮೂಲಕ ಎಲ್ಲಾ ಆಸ್ತಿಗಳನ್ನು…

Read More

IPL – ಇಂಡಿಯನ್ ಪ್ರೀಮಿಯರ್ ಲೀಗ್  2025ರ ಮೆಗಾ ಹರಾಜಿನಲ್ಲಿ ಭಾರೀ ಮೊತ್ತಕ್ಕೆ ಮಾರಾಟವಾದ ಇಂಗ್ಲೆಂಡ್ ಆಟಗಾರ ಹ್ಯಾರಿ ಬ್ರೂಕ್ (Harry Brook), ಬಿಸಿಸಿಐ (BCCI) ಹೊಸ ನಿಯಮದ ಪ್ರಕಾರ ಎರಡು ವರ್ಷಗಳ ಕಾಲ ಐಪಿಎಲ್‌ಗಿಂದ ನಿಷೇಧಿತ (IPL Ban 2025-2026) ಆಗಿದ್ದಾರೆ. ಈ ನಿರ್ಧಾರದಿಂದಾಗಿ, ಹ್ಯಾರಿ ಬ್ರೂಕ್ ಐಪಿಎಲ್ 2025 ಮತ್ತು 2026 ಸೀಸನ್‌ನಲ್ಲಿ ಭಾಗವಹಿಸಲು ಸಾಧ್ಯವಿಲ್ಲ. ಹ್ಯಾರಿ ಬ್ರೂಕ್‌ಗೆ ಎರಡು ವರ್ಷಗಳ ಐಪಿಎಲ್ ನಿಷೇಧ – ಕಾರಣವೇನು? 2025ರ ಐಪಿಎಲ್ ಹರಾಜಿನಲ್ಲಿ (IPL Auction 2025), ಹ್ಯಾರಿ ಬ್ರೂಕ್ ಅನ್ನು ಡೆಲ್ಲಿ ಕ್ಯಾಪಿಟಲ್ಸ್ (Delhi Capitals) 6.25 ಕೋಟಿ ರೂ.ಗೆ ಖರೀದಿಸಿತ್ತು. ಆದರೆ ಹರಾಜಿನ ಬಳಿಕ ಅವರು ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಐಪಿಎಲ್‌ಗಿಂದ ಹಿಂದೆ ಸರಿದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಬಿಸಿಸಿಐ, ನಮ್ಮ ಹೊಸ ನಿಯಮದಂತೆ ಹ್ಯಾರಿ ಬ್ರೂಕ್‌ಗೆ ಎರಡು ವರ್ಷಗಳ ನಿಷೇಧ ವಿಧಿಸಲಾಗಿದೆ ಎಂದು ಘೋಷಿಸಿದೆ. ಐಪಿಎಲ್ 2025: ಹೊಸ ನಿಯಮದ ಪ್ರಕಾರ ಆಟಗಾರರಿಗೆ ನಿಷೇಧ (IPL…

Read More

Forest – ಬೇಸಿಗೆ ಬಂದರೆ ಸಾಕು, ನಮ್ಮ ಪ್ರದೇಶದ ಅರಣ್ಯಗಳು ಮತ್ತು ಬೆಟ್ಟಗಳಿಗೆ ಬೆಂಕಿ ಹಾಕುವುದು ದೀರ್ಘಕಾಲದ ಸಂಪ್ರದಾಯವಾಗಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಶ್ರೀ ಲಕ್ಷ್ಮೀ ಆದಿನಾರಾಯಣಸ್ವಾಮಿ ಬೆಟ್ಟದಲ್ಲೂ ಈ ಪದ್ಧತಿ ವಾಡಿಕೆಯಾಗುತ್ತಿರುವುದು ಗಂಭೀರ ಚಿಂತನೆಯ ವಿಷಯವಾಗಿದೆ. ಈ ಬೆಟ್ಟವು ಅಪಾರ ಜೈವಿಕ ವೈವಿಧ್ಯತೆಯನ್ನು ಹೊಂದಿದೆ. ಇಲ್ಲಿ ಸಾವಿರಾರು ಕೋತಿಗಳು, ನಮ್ಮ ರಾಷ್ಟ್ರೀಯ ಪಕ್ಷಿಯಾದ ನವಿಲುಗಳು, ವನ್ಯಮೃಗಗಳು ಮತ್ತು ಲಕ್ಷಾಂತರ ಪಕ್ಷಿಗಳು ವಾಸಿಸುತ್ತಿವೆ. ಇದರ ಜೊತೆಗೆ, ಔಷಧೀಯ ಗುಣಗಳನ್ನು ಹೊಂದಿರುವ ಅಸಂಖ್ಯಾತ ಮರಗಳು ಮತ್ತು ಗಿಡಗಳು ಇಲ್ಲಿ ಕಂಡುಬರುತ್ತವೆ. ಆದರೆ, ಬೆಂಕಿ ಹಾಕುವ ಈ ಸಂಪ್ರದಾಯದಿಂದಾಗಿ ಈ ಪ್ರಾಣಿಗಳು ಮತ್ತು ಸಸ್ಯಗಳು ನಾಶವಾಗುತ್ತಿದೆ. Forest – ಬೆಂಕಿಯಿಂದ ಪ್ರಕೃತಿಗೆ ಆಗುತ್ತಿರುವ ಹಾನಿ ಶ್ರೀ ಲಕ್ಷ್ಮೀ ಆದಿನಾರಾಯಣಸ್ವಾಮಿ ಬೆಟ್ಟದಲ್ಲಿ ಬೆಂಕಿ ಹಾಕುವುದರಿಂದಾಗಿ ಪರಿಸರ ವ್ಯವಸ್ಥೆಗೆ ಗಂಭೀರ ಪರಿಣಾಮಗಳು ಉಂಟಾಗಿವೆ. ಬೆಂಕಿಯಿಂದ ಸುಟ್ಟುಹೋಗುವ ಮರಗಳು ಮತ್ತು ಗಿಡಗಳು ಮರುಳಾಗುತ್ತಿವೆ, ಇದರಿಂದಾಗಿ ಅನೇಕ ಪ್ರಾಣಿಗಳು ತಮ್ಮ ಆವಾಸಸ್ಥಾನವನ್ನು ಕಳೆದುಕೊಂಡಿವೆ. ನವಿಲುಗಳು, ಕೋತಿಗಳು ಮತ್ತು ಇತರ ವನ್ಯಮೃಗಗಳು…

Read More