ಎದೆ ನೋವು ಬರದೇ ಇರಲು ರಾತ್ರಿ ಸಮಯದಲ್ಲಿ ಈ ರೀತಿ ಮಾಡಿ….!

ರಾತ್ರಿ ಸೇವನೆ ಮಾಡುವ ಊಟದ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು. ರಾತ್ರಿ ಸಮಯದಲ್ಲಿ ಸರಳವಾದ ಊಟ ಸೇವನೆ ಮಾಡಬೇಕು ಎಂಬುದು ತಜ್ಞರ ಸಲಹೆ ಆಗಿದೆ

ರಾತ್ರಿ 8 ಗಂಟೆಯೊಳಗೆ ಊಟ ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳಬೇಕು ಎಂದು ತಜ್ಷರ ಸಲಹೆ. ರಾತ್ರಿ ತಡವಾಗಿ ಊಟ ಮಾಡುವುದರಿಂದ ಹೃದಯ ಸಮಸ್ಯೆಗಳು ಬರುತ್ತವೆ ಎಂಬುದು ಕೆಲವೊಂದು ಅಧ್ಯಯನಗಳಿಂದ ತಿಳಿದುಬಂದಿದೆ.

ರಾತ್ರಿ ಊಟದಲ್ಲಿ ತೃಣ ಧಾನ್ಯಗಳು, ಹಣ್ಣುಗಳು, ತರಕಾರಿಗಳು ಹೆಚ್ಚಾಗಿ ಇರುವಂತಹ ಆಹಾರವನ್ನು ಸೇವನೆ ಮಾಡಬೇಕೆಂದು ತಜ್ಞರ ಅಭಿಪ್ರಾಯ

ಸಂಜೆ ಮಾಡುವಂತಹ ವ್ಯಾಯಾಮಗಳಿಂದಲೂ ಹೃದಯದ ಆರೋಗ್ಯ ಕಾಪಾಡುತ್ತದೆ. ಆದರೆ ಸರಳವಾದ ವ್ಯಾಯಾಮ ಮಾಡಬೇಕು

ಹೃದಯ ಸಂಬಂಧಿ ಸಮಸ್ಯೆಗಳಿಗೆ ಒತ್ತಡ ಸಹ ಕಾರಣವಾಗಿದೆ ಎನ್ನಬಹುದು. ಆದ್ದರಿಂದ ಒತ್ತಡದಿಂದ ಪಾರಾಗಲು ಯೋಗಾ, ಮೆಡಿಟೇಷನ್ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.

ನಮ್ಮ ಶರೀರ ಪ್ರತಿನಿತ್ಯ ಹೈಡ್ರೇಟ್ ಆಗಿಟ್ಟುಕೊಳ್ಳಬೇಕು. ರಾತ್ರಿ ಮಲಗುವುದಕ್ಕೂ ಮುನ್ನಾ ಹೆಚ್ಚು ನೀರು ಸೇವನೆ ಮಾಡಬೇಕು ಎಂಬುದು ತಜ್ಞರ ಅಭಿಪ್ರಾಯ

ಇನ್ನೂ ಎಲ್ಲದಕ್ಕಿಂತ ಮುಖ್ಯವಾದುದು, ಕಣ್ತುಂಬ ನಿದ್ದೆ ಮಾಡಬೇಕು. ಖಚಿತವಾಗಿ 8-9 ಗಂಟೆಗಳ ನಿದೆ ಮಾಡಬೇಕು. ಮಲಗುವ ಮುನ್ನಾ ಗ್ಯಾಡ್ಜೆಟ್ ಗಳಿಂದ ದೂರವಿರಬೇಕೆಂದು ತಜ್ಞರ ಅಭಿಪ್ರಾಯ

ಈ ಎಲ್ಲಾ ಮಾಹಿತಿ ಸಂಗ್ರಹ ಮಾಹಿತಿಯಾಗಿದ್ದು, ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿ ಹಾಗೂ ಸಲಹೆಗಾಗಿ ವೈದ್ಯರ ಸಲಹೆ ಪಡೆಯುವುದು ಸೂಕ್ತ.